Wednesday, October 8, 2025

ಸತ್ಯ | ನ್ಯಾಯ |ಧರ್ಮ

ದೆಹಲಿಯಲ್ಲಿ ʼಆರೋಗ್ಯ ಕೋಶ ಯೋಜನೆʼ : ಆರ್ಥಿಕ ದುರ್ಬಲ ಕುಟುಂಬಗಳಿಗೆ ಆರೋಗ್ಯ ಸೌಲಭ್ಯ

ನವದೆಹಲಿ: ʼಆರೋಗ್ಯ ಕೋಶ ಯೋಜನೆʼಯು ಉಚಿತ ಆರೋಗ್ಯ ಪರೀಕ್ಷೆಗಳು, ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಯ ಸಮಯದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ ಕುಟುಂಬಗಳಿಗೆ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದರು.

ಈ ಕುರಿತು ಮಾತನಾಡಿದ ಅವರು 2017 ರಿಂದ ಮಾರ್ಚ್ 2022 ರ ನಡುವಿನ ಅಧಿಕೃತ ಮಾಹಿತಿಯ ಪ್ರಕಾರ, 4.27 ಲಕ್ಷಕ್ಕೂ ಹೆಚ್ಚು ರೋಗಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ. ಇದಕ್ಕಾಗಿ ನಮ್ಮ ಸರ್ಕಾರ ಇದುವರೆಗೆ 168.43 ಕೋಟಿ ರೂ ಖರ್ಚುಮಾಡಲಾಗಿದೆ ಎಂದು ತಿಳಿಸಿದರು.

ಈ ಯೋಜನೆಯಲ್ಲಿ ವೈದ್ಯಕೀಯ ಇಂಪ್ಲಾಂಟ್‌ಗಳು, ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳು, 136 ರೀತಿಯ ವೈದ್ಯಕೀಯ ಪರೀಕ್ಷೆಗಳು ಮತ್ತು ತುರ್ತ ಅಪಘಾತ ಚಿಕಿತ್ಸೆಗಳು ದೊರಕುತ್ತವೆ ಮತ್ತು ಈ ಚಿಕಿತ್ಸೆಗಳಿಗೆ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗುತ್ತದೆ ಎಂದು ಕೇಜ್ರಿವಾಲ್‌ ಹೇಳಿದರು.

ದೆಹಲಿಯ ಯಾವುದೇ ನಾಗರಿಕರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾಯುವ ಸಮಯವನ್ನು ಎದುರಿಸಬೇಕಾದರೆ ಮತ್ತು ರೋಗಿಗೆ ತಕ್ಷಣದ ಆರೈಕೆಯ ಅಗತ್ಯವಿದ್ದರೆ, ರೋಗಿಯು ಖಾಸಗಿ ಆಸ್ಪತ್ರೆಯಲ್ಲಿ ಸೇವೆಗಳನ್ನು ಪಡೆಯಬಹುದು ಮತ್ತು ಇದರ ವೆಚ್ಚವನ್ನು ಸರ್ಕಾರವು ಭರಿಸಲಿದೆ ಎಂದು ಮಾಹಿತಿ ನೀಡಿದರು.

ಈ ಯೋಜನೆಯಡಿ, ದೆಹಲಿಯ ಮತದಾರರ ಕಾರ್ಡ್ ಹೊಂದಿರುವ ದೆಹಲಿಯ ಪ್ರತಿಯೊಬ್ಬ ನಾಗರಿಕರು ಚಿಕಿತ್ಸೆ ಪಡೆಯಬಹುದು. 19 ವರ್ಷದೊಳಗಿನ ಮಕ್ಕಳು ತಮ್ಮ ಪೋಷಕರ ಮತದಾರರ ಕಾರ್ಡ್‌ಗಳ ಆಧಾರದ ಮೇಲೆ ಈ ಸೌಲಭ್ಯವನ್ನು ಪಡೆಯಬಹುದು ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page