Wednesday, August 20, 2025

ಸತ್ಯ | ನ್ಯಾಯ |ಧರ್ಮ

ದೆಹಲಿ ಸಿಎಂ ಮೇಲೆ ಹಲ್ಲೆ ಪ್ರಕರಣ: ಆರೋಪಿ ಪೊಲೀಸ್ ವಶಕ್ಕೆ; ಐಬಿ, ವಿಶೇಷ ದಳದಿಂದ ವಿಚಾರಣೆ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಬುಧವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿವಿಲ್ ಲೈನ್ಸ್ ಪೊಲೀಸ್‌ ಠಾಣೆಯಲ್ಲಿ 109(1) ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್‌) (ಕೊಲೆ ಯತ್ನ, 10 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸ್‌ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಗುಪ್ತಚರ ಇಲಾಖೆ ( ಐಬಿ ) ಮತ್ತು ವಿಶೇಷ ಘಟಕ ತಂಡವು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ಆತನನ್ನು ರಾಜೇಶ್ ಎಂದು ಗುರುತಿಸಲಾಗಿದೆ. ದೆಹಲಿ ಪೊಲೀಸರ ಪ್ರಕಾರ, ರಾಜೇಶ್ ನಿನ್ನೆ ಬೆಳಿಗ್ಗೆ ರಾಜ್‌ಕೋಟ್‌ನಿಂದ ಮೊದಲ ಬಾರಿಗೆ ದೆಹಲಿಗೆ ರೈಲಿನಲ್ಲಿ ಬಂದರು ಮತ್ತು ಅವರು ಸಿವಿಲ್ ಲೈನ್ಸ್‌ನಲ್ಲಿರುವ ಗುಜರಾತಿ ಭವನದಲ್ಲಿ ತಂಗಿದ್ದರು .

ದೆಹಲಿ ಪೊಲೀಸರು ಹೇಳುವಂತೆ ರಾಜೇಶ್ ಗುಜರಾತ್‌ನಲ್ಲಿರುವ ತನ್ನ ಸ್ನೇಹಿತನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದನು, ಶಾಲಿಮಾ‌ರ್ ಬಾಗ್‌ನಲ್ಲಿರುವ ಸಿಎಂ ಹೌಸ್ ತಲುಪಿದ್ದೇನೆ ಎಂದು ಅವನಿಗೆ ತಿಳಿಸುತ್ತಿದ್ದನು.

ಆರೋಪಿ ರಾಜೇಶ್‌ನನ್ನು ವಶಕ್ಕೆ ಪಡೆಯಲು ಪೊಲೀಸರು ಕೋರಲಿದ್ದಾರೆ. ಎಲ್ಲಾ ಸಂಭಾವ್ಯ ಕೋನಗಳಿಂದಲೂ ಹೆಚ್ಚಿನ ತನಿಖೆ ನಡೆಯುತ್ತಿದೆ.

ಏತನ್ಮಧ್ಯೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲಿನ ದಾಳಿಯ ನಂತರ, ಶಾಲಿಮಾರ್ ಬಾಗ್‌ನಲ್ಲಿರುವ ಮುಖ್ಯಮಂತ್ರಿಯವರ ನಿವಾಸದಿಂದ ಪಡೆದ ಸಿಸಿಟಿವಿ ದೃಶ್ಯಾವಳಿಗಳು ದಾಳಿಕೋರ ಕಳೆದ 24 ಗಂಟೆಗಳಿಂದ ದಾಳಿಯನ್ನು ಯೋಜಿಸುತ್ತಿದ್ದುದನ್ನು ಬಹಿರಂಗಪಡಿಸಿವೆ ಎಂದು ದೆಹಲಿ ಮುಖ್ಯಮಂತ್ರಿ ಕಛೇರಿಯಿಂದ ಬುಧವಾರ ವರದಿ ತಿಳಿಸಿದೆ.

“ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲಿನ ಹೇಡಿತನದ ದಾಳಿಯು ಯೋಜಿತ ಪಿತೂರಿಯ ಭಾಗವಾಗಿದೆ. ಶಾಲಿಮಾ‌ರ್ ಬಾಗ್‌ನಲ್ಲಿರುವ ಮುಖ್ಯಮಂತ್ರಿಯವರ ನಿವಾಸದಿಂದ ಪಡೆದ ಸಿಸಿಟಿವಿ ದೃಶ್ಯಾವಳಿಗಳು ದಾಳಿಕೋರನು ಕನಿಷ್ಠ 24 ಗಂಟೆಗಳ ಮುಂಚಿತವಾಗಿ ಈ ದಾಳಿಗೆ ಸಿದ್ಧತೆ ಆರಂಭಿಸಿದ್ದನು ಎಂಬುದನ್ನು ಸ್ಪಷ್ಟಪಡಿಸಿವೆ” ಎಂದು ಮುಖ್ಯಮಂತ್ರಿ ಕಛೇರಿ ತಿಳಿಸಿದೆ.

ದಾಳಿಕೋರನು ಮುಖ್ಯಮಂತ್ರಿ ನಿವಾಸಕ್ಕೆ ನುಗ್ಗಿ ಯೋಜಿತ ರೀತಿಯಲ್ಲಿ ದಾಳಿಗೆ ಯತ್ನಿಸಿದ್ದಾನೆ. ವೀಡಿಯೊವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

“ದಾಳಿಕೋರನು ಮುಖ್ಯಮಂತ್ರಿಯವರ ನಿವಾಸವನ್ನು ಪರಿಶೀಲಿಸಿ, ಸ್ಥಳದ ವೀಡಿಯೊ ಮಾಡಿ, ಯೋಜಿತ ರೀತಿಯಲ್ಲಿ ದಾಳಿ ಮಾಡಲು ಯತ್ನಿಸಿರುವುದು ದೃಶ್ಯಾವಳಿಗಳಲ್ಲಿ ಕಂಡುಬರುತ್ತದೆ.

ಈ ವೀಡಿಯೊವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಮತ್ತು ಈ ನಿಟ್ಟಿನಲ್ಲಿ ತೀವ್ರ ತನಿಖೆ ನಡೆಯುತ್ತಿದೆ” ಎಂದು ಹೇಳಿಕೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page