Friday, June 21, 2024

ಸತ್ಯ | ನ್ಯಾಯ |ಧರ್ಮ

ವಿಶ್ವದಲ್ಲಿಯೇ ಅತಿ ಹೆಚ್ಚು ವಾಯು ಮಾಲಿನ್ಯ ಇರುವ ನಗರ ದೆಹಲಿ : ಇಲ್ಲಿ ಜನರ ಆಯಸ್ಸು ಎಷ್ಟು ಕಡಿಮೆಯಾಗುತ್ತೆ ಗೊತ್ತಾ?

ದೆಹಲಿ ವಿಶ್ವದಲ್ಲಿಯೇ ಅತ್ಯಂತ ಮಲಿನ ನಗರ, ಹೀಗೇ ಮಾಲಿನ್ಯದ ಮಟ್ಟ ಮುಂದುವರಿದರೆ ಅಲ್ಲಿನ ನಿವಾಸಿಗಳ ಆಯಸ್ಸು 11.9 ವರ್ಷಗಳಷ್ಟು ಕಡಿಮೆಯಾಗಲಿದೆ ಎಂಬ ಅಧ್ಯಯನದ ವರದಿ ಹೊರಬಿದ್ದಿದೆ.

ಚಿಕಾಗೋ ವಿಶ್ವವಿದ್ಯಾನಿಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್ (Energy Policy Institute) ಬಿಡುಗಡೆ ಮಾಡಿರುವ ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ (Air Quality Life Index – AQLI) ಭಾರತದ 1.3 ಶತಕೋಟಿ ಜನರು ವಿಶ್ವ ಆರೋಗ್ಯ ಸಂಸ್ಥೆ ( World Health Organisation – WHO) ನಿಗದಿಪಡಿಸಿರುವ ವಾರ್ಷಿಕ ಮಾಲಿನ್ಯದ ಮಟ್ಟ 5 ΜG/M3 ಮಿತಿಯನ್ನು ಮೀರಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ.

ದೇಶದ ಜನಸಂಖ್ಯೆಯ ಶೇಕಡಾ 67.4 ಜನರು ರಾಷ್ಟ್ರೀಯ ವಾಯು ಗುಣಮಟ್ಟದ 40 ΜG/M3 ವನ್ನು ಮೀರಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ 5 ΜG/M3 ಮಾಲಿನ್ಯ ಮಿತಿಯನ್ನು ಮೀರಿದರೆ ಸೂಕ್ಷ್ಮ ಕಣಗಳಿಂದ ಕೂಡಿದ ವಾಯು ಮಾಲಿನ್ಯವು ( fine particulate air pollution) (PM2.5) ಸರಾಸರಿ ಭಾರತೀಯನ ಜೀವಿತಾವಧಿಯನ್ನು 5.3 ವರ್ಷಗಳಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ಹೇಳಿದೆ.

ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರವಾಗಿದೆ ಎಂದು AQLI ಹೇಳಿದೆ. ಅದರ 18 ಮಿಲಿಯನ್ ನಿವಾಸಿಗಳು WHO ಮಿತಿಗೆ ಹೋಲಿಸಿದರೆ ಸರಾಸರಿ 11.9 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಳ್ಳುತ್ತಾರೆ ಹಾಗೂ ಪ್ರಸ್ತುತ ಮಾಲಿನ್ಯ ಮಟ್ಟಗಳು ಮುಂದುವರಿದರೆ ರಾಷ್ಟ್ರೀಯ ಮಾರ್ಗಸೂಚಿಗೆ ಹೋಲಿಸಿದರೆ 8.5 ವರ್ಷಗಳ ಆಯುಷ್ಯ ಕಡಿಮೆಯಾಗಲಿದೆ.

ಅತ್ಯಂತ ಕಡಿಮೆ ಮಾಲಿನ್ಯ ಇರುವ ಜಿಲ್ಲೆ ಪಂಜಾಬ್‌ನ ಪಠಾಣ್‌ಕೋಟ್. ಇಲ್ಲಿ ಮಾಲಿನ್ಯವು WHO ಮಿತಿಗಿಂತ ಏಳು ಪಟ್ಟು ಹೆಚ್ಚು. ಈ ರೀತಿಯಲ್ಲಿಯೇ ಮುಂದುವರಿದರೆ ಜೀವಿತಾವಧಿಯಲ್ಲಿ 3.1 ವರ್ಷಗಳು ಕಡಿಮೆಯಾಗಲಿದೆ ಎಂದು ಹೇಳಿದೆ.

ಉತ್ತರದ ಬಯಲು ಪ್ರದೇಶದಲ್ಲಿನ ಸೂಕ್ಷ್ಮ ಕಣಪೂರಿತ ಮಾಲಿನ್ಯವು ಭೂವೈಜ್ಞಾನಿಕ (geologic ) ಮತ್ತು ಹವಾಮಾನ (meteorological ) ಕಾರಣಗಳಿಂದ ಹೆಚ್ಚಾಗಿದೆ AQLI ನ dust and sea salt-removed PM 2.5 data ಈ ಹೆಚ್ಚಿನ ಸೂಕ್ಷ್ಮ ಕಣಗಳ ಮಾಲಿನ್ಯವನ್ನು ಉಂಟುಮಾಡಿರುವುದಕ್ಕೆ ಮಾನವ ಚಟುವಟಿಕೆಯೇ ಕಾರಣ ಎಂದು ತಿಳಿಸಿದೆ.

ಏಕೆಂದರೆ ಈ ಪ್ರದೇಶದ ಜನಸಾಂದ್ರತೆಯು ದೇಶದ ಉಳಿದ ಭಾಗಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಿದೆ. ಹಾಗಾಗಿ ವಾಹನ, ವಸತಿ ಮತ್ತು ಕೃಷಿ ಕಾರಣಳ ಮಾಲಿನ್ಯ ಇಲ್ಲಿ ಹೆಚ್ಚು.

“ಜಾಗತಿಕ ಆಯುಷ್ಯದ ಮೇಲೆ ಮುಕ್ಕಾಲು ಭಾಗದಷ್ಟು ವಾಯುಮಾಲಿನ್ಯ ಪ್ರಭಾವ ಬೀರಿದ್ದು ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಚೀನಾ, ನೈಜೀರಿಯಾ ಮತ್ತು ಇಂಡೋನೇಷ್ಯಾ – ಈ ಆರು ರಾಷ್ಟ್ರಗಳ ಜನರು ಉಸಿರಾಡುವ ಗಾಳಿಯಿಂದಾಗಿ ತಮ್ಮ ಜೀವನದ ಒಂದರಿಂದ ಆರುಕ್ಕೂ ಹೆಚ್ಚು ವರ್ಷಗಳ ಆಯುಷ್ಯವನ್ನು ಕಳೆದುಕೊಳ್ಳುತ್ತಾರೆ,” ಎಂದು ಅರ್ಥಶಾಸ್ತ್ರದ ಮಿಲ್ಟನ್ ಫ್ರೀಡ್‌ಮನ್ ಡಿಸ್ಟಿಂಗ್ವಿಶ್ಡ್ ಸರ್ವಿಸ್ ಪ್ರೊಫೆಸರ್ (Milton Friedman Distinguished Service Professor ) ಹಾಗೂ AQLIನ ಸ್ಥಾಪಕ ಮೈಕೆಲ್ ಗ್ರೀನ್‌ಸ್ಟೋನ್ ತಿಳಿಸಿದ್ದಾರೆ.
ವರದಿಯನ್ನು ಇಲ್ಲಿ ಓದಬಹುದು.

Related Articles

ಇತ್ತೀಚಿನ ಸುದ್ದಿಗಳು