Home ಬ್ರೇಕಿಂಗ್ ಸುದ್ದಿ ದೆಹಲಿ ಹತ್ಯೆ ಪ್ರಕರಣ ; ಆರೋಪಿ ಅಫ್ತಾಬ್ ಜೊತೆಗೆ ಇದ್ದ ಇನ್ನೊಬ್ಬರು ಯಾರು?

ದೆಹಲಿ ಹತ್ಯೆ ಪ್ರಕರಣ ; ಆರೋಪಿ ಅಫ್ತಾಬ್ ಜೊತೆಗೆ ಇದ್ದ ಇನ್ನೊಬ್ಬರು ಯಾರು?

0

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿ ಶ್ರದ್ಧಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಕೊಲೆಯ ಆರೋಪಿ ಅಫ್ತಾಬ್ ಅಮಿನ್ ನನ್ನು ಬಂಧಿಸಿದ ದೆಹಲಿ ಪೊಲೀಸರು ತೀವ್ರ ವಿಚಾರಣೆ ಮುಂದುವರೆಸಿದ್ದಾರೆ. ಈ ನಡುವೆ ಆರೋಪಿ ಅಫ್ತಾಬ್ ಗೆ ಬೇರೊಂದು ಹೆಣ್ಣಿನ ಸಂಪರ್ಕದ ಬಗ್ಗೆಯೂ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ.

ದೆಹಲಿಯಲ್ಲಿ 6 ತಿಂಗಳ ಹಿಂದೆಯೇ ನಡೆದಿದ್ದ ಭೀಕರ ಕೊಲೆ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮೃತ ಶ್ರದ್ಧಾಳ ಪ್ರಿಯಕರ ಅಫ್ತಾಬ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕಳೆದ ಮೇ ತಿಂಗಳಲ್ಲಿಯೇ ಶ್ರದ್ಧಾ ಎಂಬ ಹೆಣ್ಣು ಮಗಳನ್ನು ಕೊಲೆ ಮಾಡಿದ್ದ ಆಕೆಯ ಪ್ರಿಯಕರ ಅಫ್ತಾಬ್ ಅಮಿನ್ ಪೂನಾವಾಲ ಏನೂ ನಡೆದೇ ಇಲ್ಲವೆಂಬಂತೆ ಓಡಾಡಿಕೊಂಡಿದ್ದ. ಮೃತ ಶ್ರದ್ಧಾಳ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಮಹಾರಾಷ್ಟ್ರ ಮತ್ತು ದೆಹಲಿ ಪೊಲೀಸರು ಆರೋಪಿ ಅಫ್ತಾಬ್ ನನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. ಕೊನೆಯ ಬಾರಿಗೆ ಆಕೆಯ ಮೊಬೈಲ್ ಫೋನ್ ಸ್ಥಗಿತವಾದ ನೆಟ್ವರ್ಕ್ ಹುಡುಕಿ ಶ್ರದ್ಧಾ ಹಾಗೂ ಅಫ್ತಾಬ್ ರ ಲಿವ್ ಇನ್ ರಿಲೇಷನ್ (Live in relationship) ನಲ್ಲಿ ಇದ್ದದ್ದನ್ನು ಖಾತ್ರಿಪಡಿಸಿಕೊಂಡಿದ್ದಾರೆ.

ನಂತರ ಪ್ರಾಥಮಿಕ ವಿಚಾರಣೆಯಲ್ಲಿ ಅಫ್ತಾಬ್ ಕೊಲೆ ಮಾಡಿರುವ ಬಗ್ಗೆ ಒಪ್ಪಿರಲಿಲ್ಲ. ಆದರೆ ತನಿಖೆ ತೀವ್ರತರವಾಗಿ ಚುರುಕುಕೊಂಡ ಹಿನ್ನೆಲೆಯಲ್ಲಿ ಅಫ್ತಾಬ್ ಶ್ರದ್ಧಾಳನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆಕೆಯ ಕೊಲೆಯ ಸುಳಿವೇ ಸಿಗಬಾರದು ಎಂದು ಅಫ್ತಾಬ್ ಬಳಸಿದ ವಿವಿಧ ಉಪಾಯಗಳನ್ನು ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಆಕೆಯ ಕೊಲೆಯ ನಂತರ ಅಫ್ತಾಬ್ ಕ್ರೈಂ ವೆಬ್ ಸೀರೀಸ್ ನೋಡಿದ್ದು ವಿಚಾರಣೆಯಲ್ಲಿ ತಿಳಿದು ಬಂದಿದೆ. ನಂತರ ಶ್ರದ್ಧಾಳ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಎಸೆದ ಬಗ್ಗೆ ಅಫ್ತಾಬ್ ಒಪ್ಪಿದ್ದಾನೆ. ಆದರೆ ಸಧ್ಯಕ್ಕೆ ಶ್ರದ್ಧಾಳ ದೇಹದ ಯಾವುದೇ ಭಾಗವೂ ತನಿಖೆಯಲ್ಲಿ ಪತ್ತೆ ಆಗಿಲ್ಲ.

ಈ ನಡುವೆ ಅಫ್ತಾಬ್, ಶ್ರದ್ಧಾ ಮಾತ್ರವಲ್ಲದೆ ಬೇರೊಂದು ಹೆಣ್ಣಿನ ಸಂಪರ್ಕದಲ್ಲಿ ಇದ್ದ ಬಗ್ಗೆಯೂ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಅದೂ ಶ್ರದ್ಧಾಳ ಮೃತದೇಹ ಮನೆಯ ರೆಫ್ರಿಜರೇಟರ್ (Refrigerator) ನಲ್ಲಿ ಇದ್ದಾಗಲೇ ಆ ಹೆಣ್ಣು ಅಫ್ತಾಬ್ ಇರುವ ಫ್ಲಾಟ್ ಗೆ ಬಂದ ಬಗ್ಗೆಯೂ ಪೊಲೀಸರು ಅನುಮಾನಿಸಿದ್ದಾರೆ. ಹಾಗೊಂದು ವೇಳೆ ಶ್ರದ್ಧಾ ಕೊಲೆಯ ನಂತರ ಆಕೆಯೂ ಆ ಮನೆಗೆ ಬಂದಿದ್ದರೆ ಅಫ್ತಾಬ್ ಪೂನವಾಲ ಜೊತೆಗೆ ಆಕೆಯ ಮೇಲೂ ಕೊಲೆಯ ಆರೋಪ ಸಾಭೀತಾಗಬಹುದು ಎನ್ನಲಾಗಿದೆ. ಶ್ರದ್ಧಾಳ ಕೊಲೆಯಲ್ಲಿ ಆ ಮೂರನೇ ವ್ಯಕ್ತಿಯ ಪಾತ್ರ ಇದೆಯೇ ಎಂಬುದನ್ನು ತನಿಖೆಯ ನಂತರ ತಿಳಿಯಬಹುದಾಗಿದೆ.

You cannot copy content of this page

Exit mobile version