Home ದೆಹಲಿ ದೆಹಲಿ ಎಸ್‌ಐಆರ್‌ನಲ್ಲಿ ಶೇ. 33ರಷ್ಟು ಮತದಾರರ ಹೆಸರು ರದ್ದು: ದೇಶದಲ್ಲೇ ಗರಿಷ್ಠ ಪ್ರಮಾಣದಲ್ಲಿ ಡಿಲೀಟ್

ದೆಹಲಿ ಎಸ್‌ಐಆರ್‌ನಲ್ಲಿ ಶೇ. 33ರಷ್ಟು ಮತದಾರರ ಹೆಸರು ರದ್ದು: ದೇಶದಲ್ಲೇ ಗರಿಷ್ಠ ಪ್ರಮಾಣದಲ್ಲಿ ಡಿಲೀಟ್

0

ದೆಹಲಿ: ದೆಹಲಿಯಲ್ಲಿ ನಡೆಸಲಾದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಒಟ್ಟು 47.7 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಚುನಾವಣಾ ಆಯೋಗ (ಇಸಿ) ಪ್ರಕಟಿಸಿದೆ.

ಸೋಮವಾರ ದೆಹಲಿಯ ಕರಡು ಮತದಾರರ ಪಟ್ಟಿಯನ್ನು ಆಯೋಗ ಬಿಡುಗಡೆ ಮಾಡಿದೆ. ಈ ಪಟ್ಟಿಯ ಅನ್ವಯ, ಪ್ರತಿ ಮೂವರು ಮತದಾರರಲ್ಲಿ ಒಬ್ಬರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವುದು ತೀವ್ರ ಸಂಚಲನ ಮೂಡಿಸಿದೆ.

ದೇಶದಾದ್ಯಂತ ಎಸ್‌ಐಆರ್ ಕೈಗೊಂಡ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಕರಡು ಹಂತದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಮತದಾರರ ಹೆಸರು ರದ್ದಾಗಿರುವುದು ದೆಹಲಿಯಲ್ಲಿ ದಾಖಲಾಗಿದೆ. ದೆಹಲಿಯಲ್ಲಿ ಶೇಕಡಾ 33ರಷ್ಟು ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

You cannot copy content of this page

Exit mobile version