Sunday, June 16, 2024

ಸತ್ಯ | ನ್ಯಾಯ |ಧರ್ಮ

ಮೀಸಲಾತಿಗೆ ಒತ್ತಾಯ: ಸರ್ಕಾರದ ಕುತ್ತಿಗೆ ಹಿಸುಕುತ್ತಿರುವ ಎರಡು ಸಮುದಾಯಗಳು

ಬೆಂಗಳೂರು: ಕರ್ನಾಟಕ ಎರಡು ಸಮೂದಾಯಗಳು ಮೀಸಲಾತಿ ಬೇಡಿಕೆಯೊಂದಿಗೆ ರಾಜ್ಯ ಸರ್ಕಾರದ ಕುತ್ತಿಗೆ ಮೇಲೆ ಕೂತಿದ್ದು, ಪಂಚಮಸಾಲಿಗಳು ತಮ್ಮ ಕೋಟಾವನ್ನು 2ಎ ವರ್ಗಕ್ಕೆ ಸೇರಿಸುವಂತೆ ಒತ್ತಾಹಿಸುತ್ತಿದ್ದರೆ, ಮತ್ತೊಂದೆಡೆ ಒಕ್ಕಲಿಗರಯ ತಮ್ಮ ಕೋಟಾವನ್ನು ಶೇ.4ರಿಂದ 12ಕ್ಕೆ ಹೆಚ್ಚಿಸಬೇಕೆಂದು ಕೇಳುವುದಲ್ಲದೆ, ತಮ್ಮ ಸಮುದಾಯಗಳನ್ನು ಆರ್ಥಿಕವಾಗಿ ದುರ್ಬಲ ವರ್ಗಗಳ ಕೋಟದಲ್ಲೂ ಪಾಲು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ, ಪಂಚಮಸಾಲಿ ಮತ್ತು ಒಕ್ಕಲಿಗ ಈ ಎರಡೂ ಸಮುದಾಯಗಳೂ ಸರ್ಕಾರಕ್ಕೆ ಬೆನ್ನುಬಿದ್ದಿವೆ. ರಾಜ್ಯ  ಒಕ್ಕಲಿಗರ ಸಂಘವು ಅವರ ಮೀಸಲಾತಿಯನ್ನು ಹೆಚ್ಚಿಸಲು ಜನವರಿ 23ರ ವರೆಗೆ ಅಂತಿಮ ಗಡುವು ನೀಡಿದ್ದು, ಸಮುದಾಯದ ಮೀಸಲಾತಿಯನ್ನು ಹೆಚ್ಚಳ ಮಾಡುವವರೆಗೆ, ಇಡಬ್ಲ್ಯೂಎಸ್‌ ಕೋಟಾವನ್ನು ಜಾರಿಗೊಳಿಸದಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸಂವಿಧಾನದ ಅನುಸೂಚಿ 9ರ ತಿದ್ದುಪಡಿಗಳು ಇನ್ನೂ ಬಾಕಿಯಿದ್ದು, ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ರಷ್ಟಿದ್ದು, ಅದರಲ್ಲಿ ಇತರ ಹಿಂದುಳಿದ ವರ್ಗಗಳು(ಒಬಿಸಿ) ಶೇ.32 ರಷ್ಟು ಅದರ ಪಾಲನ್ನು ಹೊಂದಿದ್ದು, ಈ  ಕುರಿತು ಸರ್ಕಾರವು ಎರಡೂ ಸಮುದಾಯಗಳಿಗೆ ಅವರ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದೆ.

ಒಕ್ಕಲಿಗ ಸಮುದಾಯದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಿಂಗಾಯುತ ಮಠಾಧೀಶರಾದ ನಂಜಾವಧೂತ ಸ್ವಾಮೀಜಿ ಮಾತನಾಡಿದ್ದು, ʼನಾವು ರಾಜ್ಯದ ಜನಸಂಖ್ಯೆಯಲ್ಲಿ 16-19 ಪ್ರತಿಶತದಷ್ಟಿದ್ದೇವೆ. ಆದ್ದರಿಂದ ನಮಗೆ ಶೇಕಡಾ 12-15 ರಷ್ಟು ಮೀಸಲಾತಿ ಬೇಕಾಗಿದೆʼ ಎಂದು ಸಮುದಾಯದ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅದಲ್ಲದೇ ಬಡತನ ರೇಖೆಯ ಅಡಿಯಲ್ಲಿ ಬರುವ ನಗರ ಪ್ರದೇಶಗಳಲ್ಲಿನ ಸಮುದಾಯ ಸದಸ್ಯರನ್ನು ಇಡಬ್ಲ್ಯೂಎಸ್ ವರ್ಗಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

2ಎ ಮೀಸಲಾತಿ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿರುವ ಪಂಚಮಸಾಲಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೆಳಗಾವಿಯಲ್ಲಿ ನಿಗದಿಯಾಗಿರುವ ವಿಧಾನಮಂಡಲ ಅಧಿವೇಶನಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಒಕ್ಕಲಿಗರ ಬೇಡಿಕೆಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ʼಮೀಸಲಾತಿಯಲ್ಲಿ ಯಾವುದೇ ಹೆಚ್ಚಳವನ್ನು ಸಂವಿಧಾನದ ಪರಿಮಿತಿಯೊಳಗೆ ಮಾಡಬೇಕು. ಈ ಬಗ್ಗೆ ವಿವಿಧ ಸಮುದಾಯಗಳ ಆಕಾಂಕ್ಷೆಗಳು ಸಹ ಹೆಚ್ಚಿವೆ. ನಾವು ಏನೇ ತೀರ್ಮಾನ ಮಾಡಿದರೂ ಅದನ್ನು ಕಾನೂನು ಮತ್ತು ಸಂವಿಧಾನದ ಪರಿಮಿತಿಯೊಳಗೆ ಮಾಡಬೇಕುʼ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು