Wednesday, October 1, 2025

ಸತ್ಯ | ನ್ಯಾಯ |ಧರ್ಮ

ಅಮೇರಿಕಾದಲ್ಲಿ ಹದಗೆಟ್ಟ ಆರ್ಥಿಕ, ರಾಜಕೀಯ ಸ್ಥಿತಿ ; ಡೊನಾಲ್ಡ್ ಟ್ರಂಪ್ ಸರ್ಕಾರ ಸಂಪೂರ್ಣ ಶಟ್‌ಡೌನ್

ಅಮೇರಿಕಾ ಹಿಂದೆಂದೂ ಕಾಣದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ. ಒಂದು ಕಡೆ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಮತ್ತು ವಿರೋಧ ಪಕ್ಷವಾದ ಡೆಮೋಕ್ರಾಟ್‌ಗಳ ನಡುವಿನ ಹಗ್ಗಜಗ್ಗಾಟ, ಮತ್ತೊಂದು ಕಡೆ ಸರ್ಕಾರದ ಬೊಕ್ಕಸಕ್ಕೆ ಬೀಗ ಬಿದ್ದ ಹಿನ್ನೆಲೆಯಲ್ಲಿ ಸರ್ಕಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಯಾವುದೇ ಸರ್ಕಾರಿ ಒಪ್ಪಂದಕ್ಕೆ ಬರಲು ವಿಫಲವಾದ ಪರಿಣಾಮ, ಸರ್ಕಾರದ ಬೊಕ್ಕಸಕ್ಕೆ ಬೀಗ ಬಿದ್ದಿದೆ. ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಇಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಈ ಹಿಂದೆ 2018ರಲ್ಲಿ ಡೊನಾಲ್ಡ್‌ ಟ್ರಂಪ್‌ ಅವರ ಅಧ್ಯಕ್ಷತೆಯ ಅಧಿಕಾರದಲ್ಲೇ 35 ದಿನಗಳ ಕಾಲ ಕೊನೆಯ ಬಾರಿ ಅಮೇರಿಕಾ ಶಟ್‌ಡೌನ್‌ ಸಂಭವಿಸಿತ್ತು. ಈಗ ಎಷ್ಟು ದಿನ ಈ ಶಟ್‌ಡೌನ್‌ ಇರಲಿದೆಯೋ ಎಂಬುದು ಅಮೇರಿಕನ್ನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಅನಿರೀಕ್ಷಿತ ಬೆಳವಣಿಗೆಯಿಂದ ಸುಮಾರು 7.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ಭವಿಷ್ಯ ಅತಂತ್ರವಾಗಿದ್ದು, ಅಮೆರಿಕದಾದ್ಯಂತ ಆತಂಕದ ಕಾರ್ಮೋಡ ಕವಿದಿದೆ.

ಸಧ್ಯ ಈ ಆರ್ಥಿಕ ಬಿಕ್ಕಟ್ಟು ಶಮನಗೊಳಿಸುವ ಬದಲು ಅಧ್ಯಕ್ಷ ಟ್ರಂಪ್ ತಮ್ಮ ಎಂದಿನ ಉದ್ದಟತನ ಮುಂದುವರೆಸಿದ್ದಾರೆ. ಬಿಕ್ಕಟ್ಟಿನ ಶಟ್‌ಡೌನ್‌ ಕಾರಣಕ್ಕೆ ನಾವು ಅನೇಕ ಜನರನ್ನು ಕೆಲಸದಿಂದ ತೆಗೆದುಹಾಕುತ್ತೇವೆ. ಅವರಲ್ಲಿ ಹೆಚ್ಚಿನವರು ಡೆಮೋಕ್ರಾಟ್‌ಗಳಾಗಿರುತ್ತಾರೆ ಎಂದು ಟ್ರಂಪ್‌ ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಶಟ್‌ಡೌನ್ ಸಮಯದಲ್ಲಿ ನೌಕರರನ್ನು ತಾತ್ಕಾಲಿಕವಾಗಿ ವೇತನರಹಿತ ರಜೆಯ ಮೇಲೆ ಕಳುಹಿಸಲಾಗುತ್ತದೆ. ನಂತರ ಅವರಿಗೆ ಬಾಕಿ ವೇತನವನ್ನು ಪಾವತಿಸಲಾಗುತ್ತದೆ. ಆದರೆ, ಟ್ರಂಪ್ ಈಗ ಶಾಶ್ವತವಾಗಿ ನಿಮ್ಮನ್ನು ಕೆಲಸದಿಂದ ತೆಗೆದು ಹಾಕುತ್ತೇವೆ ಎಂದಿರುವುದು ಲಕ್ಷಾಂತರ ನೌಕರರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇದು ಕೇವಲ ರಾಜಕೀಯ ಬಿಕ್ಕಟ್ಟಾಗಿ ಉಳಿದಿಲ್ಲ, ಬದಲಾಗಿ ಲಕ್ಷಾಂತರ ನೌಕರರ ಜೀವನ ಮತ್ತು ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page