Monday, July 28, 2025

ಸತ್ಯ | ನ್ಯಾಯ |ಧರ್ಮ

ದೇವರಾಗಿ ಬಂದ ಪುನೀತ್ ರಾಜ್‌ಕುಮಾರ್: ಲಕ್ಕಿ ಮ್ಯಾನ್

ಬೆಂಗಳೂರು: ಜುಲೈ ೨೫ ರಂದು ಲಕ್ಕಿ ಮ್ಯಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ಟೀಸರ್‌ನಲ್ಲಿ ಪುನೀತ್ ರಾಜ್ ಕುಮಾರ್ ಅವರು ದೇವರಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನ “ಓ ಮೈ ಕಡವುಳೆ” ಚಿತ್ರದ ರಿಮೆಕ್ ಲಕ್ಕಿ ಮ್ಯಾನ್ ಆಗಿದ್ದು ಒಂದೊಳ್ಳೆ ರೊಮ್ಯಂಟಿಕ್ ಕಾಮಿಡಿ ಎಂಟರ್‌ಟೈನ್ ಸಿನಿಮಾ ಇದಾಗಿದೆ. ಚಿತ್ರದ ಟೀಸರ್‌ನಲ್ಲಿ ಪುನೀತ್ ಮತ್ತು ಪ್ರಭುದೇವ ಅವರು ನೃತ್ಯದ ಮೂಲಕ ಕಾಣಿಸಿಕೊಂಡಿದ್ದು ಪ್ರಭುದೇವ ಅವರ ಸಹೋದರ ಎಸ್ ನಾಗೇಂದ್ರ ಪ್ರಸಾದ್ ಅಕ್ಷನ್ ಕಟ್ ಹೇಳಿದ್ದಾರೆ.

ಡಾರ್ಲಿಂಗ್ ಕೃಷ್ಣ ನಾಯಕ ನಟನಾಗಿ ಅಭಿನಯಿಸಿರುವ ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಆಗಸ್ಟನಲ್ಲಿ ಬಿಡುಗಡೆಮಾಡುವುದಾಗಿ ಚಿತ್ರತಂಡ ಹೇಳಿದೆ. ಚಿತ್ರದ ಟೀಸರ್ ನಲ್ಲಿ “God is arriving soon” ಎಂದು ಚಿತ್ರ ತಂಡ ಘೋಷಣೆ ಮಾಡಿದೆ. ಅಭಿಮಾನಿಗಳು ಚಿತ್ರಕ್ಕಾಗಿ ಬಹಳಷ್ಟು ಕಾತುರರಾಗಿದ್ದು ಚಿತ್ರವನ್ನು ಪಿ.ಆರ್. ಮೀನಾಕ್ಷಿ ಸುಂದರA ಮತ್ತು ಪಿ. ಕಾಮಾರಾಜ್ ನಿರ್ಮಾಣ ಮಾಡಿದ್ದಾರೆ.

ಈ ಚಿತ್ರದ ಮುಖ್ಯ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ, ರೋಷನಿ ಪ್ರಕಾಶ್, ಸಂಗೀತಾ ಶೃಂಗೇರಿ, ಪುನೀತ್ ರಾಜ್ ಕುಮಾರ್ ಮತ್ತು ಬಹುಭಾಷ ನಟ ಪ್ರಭುದೇವ ಇದ್ದಾರೆ. ಜಾನಿ ಮಾಸ್ಟರ್ ಅವರ ನೃತ್ಯ ನಿರ್ದೇನದಲ್ಲಿ ಮೂಡಿ ಬಂದ ಸಾಂಗ್ ಅಲ್ಲಿ ಪುನೀತ್ ಮತ್ತು ಪ್ರಭುದೇವ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಚಿತ್ರದ ಟೀಸರ್ ಅನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page