Saturday, April 19, 2025

ಸತ್ಯ | ನ್ಯಾಯ |ಧರ್ಮ

ಹಾಸನಾಂಬ ಜಾತ್ರೆ ಬಗ್ಗೆ ಅಪಪ್ರಚಾರದ ಮಾತು ; ಚಿಲ್ಲರೆ ಕಾಸಿನ ವ್ಯಕ್ತಿ ದೇವರಾಜೇಗೌಡ : ಕಾಂಗ್ರೆಸ್ ಮುಖಂಡ ಚಂದ್ರಶೇಖರ್

ಹಾಸನ: ಹಾಸನಾಂಬ ಉತ್ಸವದಲ್ಲಿ ದೇವರಾಜೇಗೌಡರು ಮಾಡಿರುವ ಆರೋಪ ಶುದ್ಧ ಸುಳ್ಳು. ಇದು ಆರೋಪ ಅಷ್ಟೇ. ನಿಜವಾದಂತಹ ಯಾವುದೇ ರೀತಿಯ ಗೊಂದಲಗಳು ಆಗಿರುವುದಿಲ್ಲ. ಇವರು ರಾಜಕೀಯ ಪ್ರೇರಿತವಾದ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಪಾಸ್ ಹಂಚಿರುವುದು ಸತ್ಯ, ಪಾಸ್ ಹಂಚಿರುವುದಿಂದಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲು ಕಾರಣವಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದ ಎಲ್ಲಾ ಬಾಗಗಳಿಂದ ಹಾಗು ಹೊರ ರಾಜ್ಯ ಹಾಗೂ ವಿದೇಶದಿಂದ ಹಾಸನಾಂಬ ಉತ್ಸವಕ್ಕೆ ಬಂದು ಎಲ್ಲಾ ಸೇರಿ ಪೂಜೆಯನ್ನು ಮಾಡಿದ್ದೀವಿ. ಈ ಜಾತ್ರಾ ಉತ್ಸವ ಇಷ್ಟೆಲ್ಲಾ ಯಶಸ್ವಿಯಾಗಬೇಕಾದರೆ ಜಿಲ್ಲಾಧಿಕಾರಿಗಳು, ಜಿಲ್ಲಾ ಮಂತ್ರಿಗಳು ಹಾಗೂ ಜಿಲ್ಲಾಡಳಿತ ಕಾರಣ.

ಈ ಹಿಂದೆ ಎರಡು ವರ್ಷಗಳ ಹಿಂದೆ ದೇಶದಿಂದ ವಿದೇಶದಿಂದ ಅಥವಾ ನಮ್ಮ ರಾಜ್ಯದ ಹೊರ ಜಿಲ್ಲೆಗಳಿಂದ ಈ ಪ್ರಮಾಣದಲ್ಲಿ ಜನಸಾಗರ ಹರಿದು ಬಂದಿರುದಿಲ್ಲ. ಈ ಬಾರಿ ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಜನಸಾಗರ ಹರಿದು ಬರುವುದಕ್ಕೆ ಕಾರಣ ಈ ನಮ್ಮ ಜಿಲ್ಲಾಧಿಕಾರಿ, ಜಿಲ್ಲಾ ಮಂತ್ರಿಗಳು ಹಾಗು ಜಿಲ್ಲಾಡಳಿತ, ಜೊತೆಗೆ ಸರ್ಕಾರದ ವತಿಯಿಂದ ದಿನನಿತ್ಯ ೭೦೦ ಬಸ್ ಗಳನ್ನು ಮಹಿಳೆಯರಿಗೆ ಕಲ್ಪಿಸಿಕೊಡಲಾಗಿತ್ತು ಎಂದರು.

ಇದರಿಂದ ಸಾಮಾನ್ಯವಾಗಿ ಜನರು ಬರುವಿಕೆ ಹೆಚ್ಚಾಗಿರುವುದು ಸತ್ಯ. ಈ ಹಿಂದೆ ಕೂಡ ಪಾಸ್ ವಿತರಿಸಲಾಗಿತ್ತು. ಹಾಗೆಯೇ ಈ ಬಾರಿ ಕೂಡ ಪಾಸ್ ವಿತರಣೆ ಮಾಡಲಾಗಿದೆ. ಜನರು ತಮ್ಮ ಶಾಸಕರು, ಮಂತ್ರಿಗಳು ಹಾಗು ಅಧಿಕಾರಿ ವರ್ಗದವರ ಬಳಿ ಪಾಸ್ ಕೇಳುವುದು ಸಹಜ. ಎಲ್ಲಾ ಪಕ್ಷದ ಶಾಸಕರುಗಳಿಗೆ ಪಾಸ್ ವಿತರಣೆ ಮಾಡಲಾಗಿದೆ. ಅವರು ಯಾಕೆ ಪಾಸ್ ನಿರಾಕರಿಸಲಿಲ್ಲ.

ಇದರ ಜೊತೆ ರಾಜ್ಯದ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು,ಮಾಜಿ ಮಂತ್ರಿಗಳು ಬಂದಿದ್ದಾರೆ. ಅದೇ ರೀತಿ ಸುಪ್ರಿಂ ಕೋರ್ಟ್ ಹಾಗೂ ಹೈ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಬಂದಿದ್ದಾರೆ. ಅವರಿಗೆಲ್ಲ ಪ್ರೊಟೋಕಾಲ್ ಪ್ರಕಾರ ಎಲ್ಲರಿಗೂ ಅಚ್ಚುಕ್ಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ರೀತಿಯ ವ್ಯವಸ್ಥೆ ಮಾಡಿದ್ದಕ್ಕಾಗಿ ಹಾಸನಾಂಬ ಉತ್ಸವ ಯಶಸ್ವಿಯಾಗಿದೆ ಎಂದು ನಾವು ಸ್ವಾಗತ ಮಾಡಬೇಕೆ ಹೊರೆತು ಈ ಚಿಲ್ಲರೆ ಕಾಸಿನ ದೇವರಾಜೇಗೌಡ ಮಾಡುತ್ತಿರುವ ಈ ಆರೋಪ ಸುಳ್ಳು ಆರೋಪ. ಈ ದೇವರಾಜೇಗೌಡ ಒಂದುವರೆ ತಿಂಗಳಿಂದ ಎಲ್ಲಿದ್ದರು ? ಜೈಲಿನಲ್ಲಿ ಇದ್ದರು. ಇವಾಗ ಬೈಲ್ ನಲ್ಲಿ ಇದ್ದಾರೆ. ಇವರ ಮೇಲೆ ಏನು ಆರೋಪ ಇದೆ – ಅದನ್ನ ನಾವು ಮಾತಾಡೋದಿಲ್ಲ. ಇಂತಹದೆನ್ನೆಲ್ಲಾ ಇವರು ಇಟ್ಟುಕೊಂಡು ಸಮಾಜದ ಮುಂದೆ ಬಂದು ಪತ್ರಿಕೆಯಲ್ಲಿ ಕೂತು ಹೇಗೆ ಮುಖ ತೋರಿಸುತ್ತಾರೆ ಎಂದು ಆಕ್ರೋಶವ್ಯಕ್ತಪಡಿಸಿದ ಅವರು, ಈತ ಚಿಲ್ಲರೆ ಕಾಸಿನ ಗಿರಾಕಿ ಎಂದು ಎಲ್ಲರಿಗೂ ಗೊತ್ತಿದೆ. ಇವರು ರಾಜಕೀಯ ಪ್ರೇರಿತವಾಗಿ ಆರೋಪ ಮಾಡುತ್ತಿದ್ದಾರೆ. ಇವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದ್ದು.

ಇನ್ನೊಂದು ಏನು ಆರೋಪ ಮಾಡಿದ್ದು, ಮಂತ್ರಿಗಳಿಗೆ ಕಪ್ಪು ಮಸಿ ಬಳಿಯುದಾಗಿ ಹೇಳಿದ್ದಾನೆ. ಈತನಿಗೆ ತಾಕತ್ತು, ದಮ್ಮು ಇದ್ದರೆ ಮಂತ್ರಿಗಳ ಮುಂದೆ ನಿಂತು ಮಾತಾಡಲಿ. ಅಷ್ಟು ದೈರ್ಯ ಇದ್ದಿದ್ದರೆ ಮಂತ್ರಿಗಳ ಜೊತೆ ಮಾತನಾಡುತಿದ್ದ, ಈ ರೀತಿ ಮಾಧ್ಯಮದ ಮುಂದೆ ಹೊಗುತ್ತಾ ಇರಲಿಲ್ಲ ಎಂದು ಸವಾಲು ಹಾಕಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page