Friday, July 11, 2025

ಸತ್ಯ | ನ್ಯಾಯ |ಧರ್ಮ

ಕೆಂಪೇಗೌಡರಾಗಿ ಮಿಂಚಲಿದ್ದಾರೆ ನಟರಾಕ್ಷಸ ಧನಂಜಯ

ಕೋಟಿ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಟ ಧನಂಜಯ ಕರ್ನಾಟಕದ ಬಹು ನಿರೀಕ್ಷಿತ ‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಬಗ್ಗೆ ಚಿತ್ರದ ಫಸ್ಟ್ ಲುಕ್ ಹೊರಬಿದ್ದು, ಚಿತ್ರದ ಪೋಸ್ಟರ್ ಸಖತ್ ಸೆನ್ಸೇಷನ್ ಹುಟ್ಟು ಹಾಕಿದೆ.

ನಟರಾಕ್ಷಸ ಧನಂಜಯ ಅವರ ಇನ್ಸ್ಟಾಗ್ರಾಂ ಖಾತೆಯಿಂದ ಹೊರಬಿದ್ದಿರುವ ಈ ಪೋಸ್ಟರ್ ಈಗಾಗಲೇ ಬಾರೀ ಮೆಚ್ಚುಗೆಗೆ ಪಾತ್ರವಾಗಿದ್ದು, ಧನಂಜಯ ಹೊರತಾಗಿ ಯಾರೇ ಈ ಪಾತ್ರ ನಿರ್ವಹಣೆ ಅಷ್ಟು ಸೂಕ್ತ ಅಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ನಿನ್ನೆಯಷ್ಟೇ ತಮ್ಮ ಎಕ್ಸ್‌ ಖಾತೆಯಲ್ಲಿ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದ ಅವರು, “ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳಲು ಸಿದ್ಧವಾಗುತ್ತಿದೆ. ಮಹಾಕಾವ್ಯದ ಮೇರುಕೃತಿಯನ್ನು ನೋಡಲು ಸಜ್ಜಾಗಿ” ಎನ್ನುವ ಶೀರ್ಷಿಕೆಯೊಂದಿಗೆ ಮುಂದಿನ ಚಿತ್ರದ ಬಗ್ಗೆ ಸುಳಿವು ಕೊಟ್ಟಿದ್ದರು.

ಚಿತ್ರಕ್ಕೆ ನಾಗಾಭರಣ ನಿರ್ದೇಶನ ಇದ್ದು, ಇದೂ ಸಹ ಡಾಲಿ ಪಿಕ್ಚರ್ ಅಡಿಯಲ್ಲಿ ಮೂಡಿ ಬರಲಿದೆ. ಇದರ ಜೊತೆಗೆ ಇಸ್ವರ ಕಂಬೈನ್ಸ್ ಜೊತೆಗೂಡುವ ಬಗ್ಗೆ ಡಾಲಿ ಧನಂಜಯ ಅವರ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.‌

ಇತ್ತೀಚೆಗಷ್ಟೇ ಧನಂಜಯ ಅವರ ಕೋಟಿ ಚಿತ್ರ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page