Home ಬ್ರೇಕಿಂಗ್ ಸುದ್ದಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜನಾಮೆ ಕೊಡಲಿ – ನಟಿ ಜ್ಯೋತಿಕಾ

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜನಾಮೆ ಕೊಡಲಿ – ನಟಿ ಜ್ಯೋತಿಕಾ

ಚೆನೈ : ನೀಟ್ ಪಶ್ನೆಪತ್ರಿಕೆ ಸೋರಿಕೆ (Paper Leak) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು (Students Protest) ಹಾಗೂ ಸಿಜೆಪಿ (CJP) ನಡೆಸುತ್ತಿರುವ ಹೋರಾಟಕ್ಕೆ ನಟಿ ಜ್ಯೋತಿಕಾ (Jyothika) ಬಹಿರಂಗ ಬೆಂಬಲ ಸೂಚಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಲೇಬೇಕು ಎಂದು ಒತ್ತಾಯಿಸಿದ್ದಾರೆ. “ನಾನು ಈ ದೇಶದ ವಿದ್ಯಾರ್ಥಿಗಳು, ಅವರ ಭವಿಷ್ಯ ಮತ್ತು ಪಾರದರ್ಶಕ ಶಿಕ್ಷಣ ವ್ಯವಸ್ಥೆಯ ಪರವಾಗಿ ನಿಲ್ಲುತ್ತೇನೆ” ಎಂದಿರುವ ಜ್ಯೋತಿಕಾ, ಧೈರ್ಯದಿಂದ ಹೋರಾಡುತ್ತಿರುವ ಜೆನ್‌ ಝೀ ಪೀಳಿಗೆ ಹಾಗೂ ಸೋನಮ್ ವಾಂಗ್‌ಚುಕ್, ಅಭಿಜಿತ್ ದಿಪ್ಕೆ ಮತ್ತು ಸೌರವ್ ದಾಸ್ ಅವರಂತಹ ಹೋರಾಟಗಾರರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪ್ರತಿಯೊಬ್ಬ ತಾಯಂದಿರೂ ತಮ್ಮ ಮಕ್ಕಳನ್ನು ಇಂತಹ ಧೈರ್ಯವಂತರನ್ನಾಗಿ ಬೆಳೆಸಲು ಬಯಸುತ್ತಾರೆ ಎಂದು ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಮತ್ತೊಂದೆಡೆ, ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಚಿವರ ರಾಜೀನಾಮೆ ಹೊರತುಪಡಿಸಿ ಬೇರೆ ಯಾವುದೇ ಬೇಡಿಕೆಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿದುಬಂದಿದೆ. ಆದರೆ ಶಿಕ್ಷಣ ಸಚಿವರು ರಾಜೀನಾಮೆ ನೀಡದಿದ್ದರೆ ಮುಂದಿನ 24 ಗಂಟೆಗಳಲ್ಲಿ ಸಂಸತ್ ಮಾರ್ಚ್ ಪುನರಾರಂಭಿಸುವುದಾಗಿ ಮತ್ತು ದೇಶಾದ್ಯಂತ ಹೋರಾಟ ವಿಸ್ತರಿಸುವುದಾಗಿ ಸಿಜೆಪಿ ಎಚ್ಚರಿಸಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಜಂತರ್ ಮಂತರ್ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 18 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ.

You cannot copy content of this page

Exit mobile version