Friday, December 26, 2025

ಸತ್ಯ | ನ್ಯಾಯ |ಧರ್ಮ

ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ರೈತರಿಗೆ ಎಸ್ ನಾಗರಾಜ್‌ ಎಂಬಾತನಿಂದ ಲಕ್ಷಾಂತರ ರೂ ಮೋಸ – DHS, KPRS ನಿಂದ ಪ್ರತಿಭಟನೆ

ಹಾಸನ : ಹಾಸನದ ಜಿಲ್ಲಾಧಿಕಾರಿಗಳ ಕಛೇರಿಯ ಎದುರು DHS, KPRS ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ಹೊಳೆನರಸೀಪುರ ತಾಲ್ಲೂಕಿನಲ್ಲಿ ದಲಿತರು, ಅಲ್ಪಸಂಖ್ಯಾತರ ಸಬ್ಸಿಡಿ ಯೋಜನೆಗಳಲ್ಲಿ ನೀಡುವ ಸೌಲತ್ತುಗಳನ್ನು ರೈತರಿಗೆ ಕೊಡಿಸುವುದಾಗಿ ವಂಚನೆ ಮಾಡಿರುವ ಸಿ.ಎಸ್. ನಾಗರಾಜ್‌ನನ್ನು ಕೂಡಲೇ ಬಂಧಿಸಬೇಕು ಮತ್ತು ಇಡೀ ಪ್ರಕರಣವನ್ನು ಸೂಕ್ತವಾದ ತನಿಖೆ ನಡೆಸಬೇಕು ಹಾಗೂ ನೊಂದ ರೈತರಿಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಪ್ರಕರಣಕ್ಕೆ ಸಂಭಂಧಿಸಿದಂತೆ ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ಚಾಕೇನಹಳ್ಳಿ ಕಟ್ಟೆ ಗ್ರಾಮದ ವಾಸಿಯಾದ ಸಣ್ಣೆಗೌಡ (ಶಿವಣ್ಣ) ರವರ ಮಗನಾದ ನಾಗರಾಜು ಸಿ.ಎಸ್. ಎಂಬುವವನು ನಾನು ಹಾಸನ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ನಾನು ನಿಮಗೆ ಸಬ್ಸಿಡಿ ರೂಪದಲ್ಲಿ ಟ್ಯಾಕ್ಟರ್ ಮತ್ತು ರೋಟಾ ವೇಟರ್ ಮನೆ ಸಾಲ ಹಾಗೂ ಕಾರುಗಳನ್ನು ಸಬ್ಸಿಡಿ ರೂಪದಲ್ಲಿ ಕೊಡಿಸುತ್ತೇನೆ. ಮತ್ತು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಕೊಡಿಸುತ್ತೇನೆ. ಮತ್ತು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆಬಾವಿ ಮತ್ತಿತರೆ ಸೌಲಭ್ಯಗಳನ್ನು ಕೊಡಿಸುತ್ತೇನೆ. ಜೊತೆಗೆ ದರಖಾಸ್ತು ಜಮೀನು ಮಾಡಿಸಿಕೊಡುತ್ತೇನೆ. ಮತ್ತು ಗುಂಪುಗಳ ಸಾಲ ಮತ್ತು ವೈಯಕ್ತಿಕ ಸಾಲ, ಕೊಟ್ಟಿಗೆ ನಿರ್ಮಾಣ ಸಾಲ ಇವುಗಳನ್ನು ಕೊಡಿಸುತ್ತೇನೆ ಎಂದು ರೈತರಿಂದ ಪೋನ್ ಪೇ ಮೂಲಕ, ನಗದು ರೂಪದಲ್ಲಿ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್, ತೆರಣ್ಯ ಶಾಖೆಯ ನಾಗರಾಜು ಸಿ.ಎಸ್ ಅವರ ಬ್ಯಾಂಕ್ ಖಾತೆಗೆ ಸುಮಾರು ಒಟ್ಟು ರೂ. 60 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದಿರುತ್ತಾನೆ.

ರಾಜ್ಯ ಸರ್ಕಾರ ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಕೊಡುವ ಹಲವು ಸಬ್ಸಿಡಿ ಯೋಜನೆಗಳನ್ನು ನಾಗರಾಜು ಸಿ.ಎಸ್ ತನ್ನ ತಂದೆ ಸಣ್ಣೇಗೌಡ (ಶಿವಣ್ಣ) ಸ್ಥಳೀಯ ಪ್ರಭಾವಿ ರಾಜಕಾರಣಿ ಮತ್ತು ತಾಯಿ ಹರಿಹರಪುರ ಗ್ರಾಮಪಂಚಾಯಿತಿಯ ಅಧ್ಯಕ್ಷೆ ಇವರುಗಳ ಪ್ರಭಾವವನ್ನು ಬಳಸಿಕೊಂಡು ನೈಜ ಫಲಾನುಭವಿಗಳಾಗಿರುವ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಮೋಸಮಾಡಿ ಆ ಯೋಜನೆಗಳನ್ನು ರೈತರಿಗೆ ಕೊಡಿಸುವುದಾಗಿ ವಂಚಿಸಿ ಹಣವನ್ನು ಮೋಸಮಾಡಿದ್ದಾನೆ. ಇವನ ವಿರುದ್ದ ಹೊಳೆನರಸೀಪುರ ನಗರ ಪೋಲೀಸ್ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ನಾಲ್ಕು ದೂರುಗಳು ಧಾಖಲಾಗಿದ್ದು, ಎಫ್‌ಐಆರ್ ಆಗಿದೆ.

ಇಡೀ ಪ್ರಕರಣವನ್ನು ನೋಡಿದರೆ ಈ ಕೆಲಸ ಕೇವಲ ನಾಗರಾಜು ಸಿ.ಎಸ್ ಒಬ್ಬನಿಂದ ಮಾತ್ರವಲ್ಲದೇ ಇದರಲ್ಲಿ ಅವನ ತಂದೆ ಸಣ್ಣೇಗೌಡ (ಶಿವಣ್ಣ) ಮತ್ತು ನಾಗರಾಜು ಸಿ.ಎಸ್ ಕೆಲಸ ಮಾಡುತ್ತಿದ್ದ ನಾಗರೀಕ್ 360 ಸಂಸ್ಥೆ ಮತ್ತಿತರ ಸ್ವಯಂ ಸೇವಾ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿರುವುದು ಗೊತ್ತಾಗುತ್ತಿದೆ. ನಾಗರಾಜ್ ಕೇವಲ ವಿವಿಧ ರಾಜಕಾರಣಗಳ ಹೆಸರುಗಳನ್ನು ಬಳಸಿಕೊಂಡಿರುವುದು ಮಾತ್ರವಲ್ಲದೆ, ತಹಸಿಲ್ದಾರ್‌ರವರುಗಳ ಹೆಸರುಗಳನ್ನು ದುರುಪಯೋಗಪಡಿಸಿಕೊಂಡು ರೈತರನ್ನು ನಂಬಿಸಿ ಮೋಸ ಮಾಡಿದ್ದಾನೆ ಎಂದು ಪ್ರತಿಭಟನಾ ಕಾರರು ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ರಾಜಶೇಖರ್ ಹುಲಿಕಲ್, ಸಿಐಟಿಯು ಮುಖಂಡರಾದ, ಅರವಿಂದ್, ಶೈಲಜಾ, ವೀಣ, ಎಸ್.ಎಫ್ಐ ಮುಖಂಡ ರಮೇಶ್ ಮತ್ತು ನೊಂದ ರೈತರಾದ ಮಧು ಪಿ.ಎಸ್, ಗೋಪಾಲಕೃಷ್ಣ, ಶೃತಿ, ಲೋಕೇಶ್, ಸೇರಿದಂತೆ ಹಲವರು ಭಾಗವಹಿಸಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page