ಡೈಮಂಡ್‌ ಲೀಗ್‌ನಲ್ಲಿ ಜಯಗಳಿಸಿದ ನೀರಾಜ್‌ ಚೋಪ್ರಾ

ಸ್ವಿಜರ್‌ಲ್ಯಾಂಡ್: ನೀರಾಜ್‌ ಚೋಪ್ರಾ ಅವರು ಶುಕ್ರವಾರದಂದು ಡೈಮಂಡ್‌ ಲೀಗ್‌ ಈವೆಂಟ್‌ನಲ್ಲಿ ಗೆಲುವು ಸಾಧಿಸಿದ್ದು, ಡೈಮಂಡ್‌ ಲೀಗ್‌ನ ಜಾವಲಿನ್‌ ಎಸೆತದಲ್ಲಿ ಜಯಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಲೌಸನ್ನೆ ಕೂಟದಲ್ಲಿ 89.08 ಮೀ ಜಾವಲಿನ್‌ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದರು.

ಗೆಲುವನ್ನು ಕುರಿತು ಮಾತನಾಡಿದ ಅವರು, ʼಇದು ದೇಶಕ್ಕೆ ಮಹತ್ವದ ಗೆಲುವು, ಮುಖ್ಯವಾಗಿ ಉತ್ತಮ ಎಸೆತದೊಂದಿಗೆ ಪುನಾರಾಗಮನ ಮಾಡಿದ್ದೇನೆʼ ಎಂದು ಸಂತೋಷ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು