Tuesday, December 24, 2024

ಸತ್ಯ | ನ್ಯಾಯ |ಧರ್ಮ

ಜಿಲ್ಲಾ ಕ್ರೀಡಾಂಗಣಕ್ಕೆದಿಡೀರ್ ಭೇಟಿ, ಪರಿಶೀಲಿಸಿದ ಶಾಸಕ ಹೆಚ್.ಪಿ. ಸ್ವರೂಪ್

ಡಿ.27 ರಿಂದ 29ರ ವರೆಗೂರಾಜ್ಯಮಟ್ಟದ ಹ್ಯಾಂಡ್ ಬಾಲ್‌ಕ್ರೀಡೆ ಯಶಸ್ವಿಗೆಸಂಪೂರ್ಣ ಸಹಕಾರ

ಹಾಸನ: ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್‌ಅವರು ಮಂಗಳವಾರದAದು ಬೆಳಿಗ್ಗೆ ದಿಡೀರ್ ಭೇಟಿ ನೀಡಿಆಟದ ಮೈದಾನ ಪರಿಶೀಲಿಸಿ, ಅಧಿಕಾರಿಗಳಿಂದ ಮತ್ತು ಕ್ರೀಡಾಪಟುಗಳಿಂದ ಮಾಹಿತಿ ಪಡೆದಿದಲ್ಲದೇಇಲ್ಲಿಆಗಬೇಕಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಯೂತ್‌ಕಾಂಗ್ರೆಸ್ ಸಭಾಂಗಣದಲ್ಲಿ ಕೆಲ ಸಮಯಚರ್ಚೆ ನಡೆಸಿ ಪರಿಹರಿಸುವ ಭರವಸೆ ನೀಡಿದರು. ಇನ್ನುಇದೇ ತಿಂಗಳು 27 ರಿಂದ 29 ರ ವರೆಗೆಜಿಲ್ಲಾಕ್ರೀಡಾಂಗಣದಲ್ಲಿನಡೆಯಲಿರುವರಾಜ್ಯಮಟ್ಟದ ಹೊನಲು ಬೆಳಕಿನಹ್ಯಾಂಡ್‌ಬಾಲ್ ಪಂದ್ಯಾವಳಿ ಯಶಸ್ವಿಗೆ ಸಂಪೂರ್ಣ ಸಹಕಾರಕೊಡುವುದಾಗಿ ವಿಶ್ವಾಸವ್ಯಕ್ತಪಡಿಸಿದರು.
ಮೊದಲು ಸಂಬಂಧಪಟ್ಟ ಜಿಲ್ಲಾ ಕ್ರೀಡಾಂಗಣದ ಅಧಿಕಾರಿಗಳೊಂದಿಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಶೌಚಾಲಯ, ನೀರಿನ ಸರಬರಾಜಿನಲ್ಲಿ ವ್ಯತ್ಯೆಯಇದೆ ಎಂಬ ದೂರು ಕೇಳಿ ಬಂದಿದೆ. ಅದನ್ನು ಬಗೆ ಹರಿಸುವ ನಿಟ್ಟಿನಲ್ಲಿಕ್ರಮ ಕೈಗೊಳ್ಳಲಾಗುವುದು. ಹಾಲಿ ಇರುವಆಟದ ಮೈದಾನಗಳಿಗೆ ಬೇಕಾಗಿರುವಸೌಲಭ್ಯಕೊಡುವುದರಜೊತೆಗೆ, ಹೊಸದಾಗಿಟರ್ಫ್ ಹಾಕಿ ಮೈದಾನ, ಕಬಡ್ಡಿ, ಖೋಖೋ ಕೋರ್ಟ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವಿಷಯವನ್ನೂಕೇಂದ್ರ ಸಚಿವರ ಗಮನಕ್ಕೂ ತರಲಾಗಿದೆಎಂದು ಹೇಳಿದರು.
ಇನ್ನು ಸಾಲಗಾಮೆ ಮುಖ್ಯರಸ್ತೆ ಬದಿ ಪ್ರತಿ ಮಂಗಳವಾರದ ಸಂತೆ ನಡೆಯುತ್ತಿದ್ದು, ಇಲ್ಲಿಜೀವವನ್ನು ಕೈಲಿ ಇಟ್ಟುಕೊಂಡುಇರಬೇಕಾಗಿದೆ. ಬದಲಿ ವ್ಯವಸ್ಥೆ ಮಾಡುವಂತೆ ಕೇಳಿದ ಪ್ರಶ್ನೆಗೆ ಶಾಸಕರು ಉತ್ತರಿಸಿ, ಸೂಕ್ತ ಜಾಗ ಹುಡುಕಿ ಶೀಘ್ರದಲ್ಲಿಯೇ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಇದೇ ತಿಂಗಳು 27 ರಿಂದ 29 ರ ವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ 20 ವರ್ಷದ ವಯೋಮಿತಿಯ ಪುರುಷರು ಮತ್ತು ಮಹಿಳೆಯರ ಹ್ಯಾಂಡ್‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಇದರ ಯಶಸ್ಸಿಗೆ ಆರಂಭದಿAದಕೊನೆವರೆಗೂ ಸಂಪೂರ್ಣ ಸಹಕಾರಕೊಡುವುದಾಗಿ ಶಾಸಕರು ಭರವಸೆ ನೀಡಿದರು. ರಾಜ್ಯಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿ: ಹಾಸನ ಜಿಲ್ಲಾ ಹಾಗೂ ಕರ್ನಾಟಕ ಹ್ಯಾಂಡ್‌ಬಾಲ್ ಸಂಸ್ಥೆ, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಸಹಯೋಗದೊಂದಿಗೆ ನಡೆಯುವ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ 20 ಬಾಲಕಿಯರ, 25 ಬಾಲಕರ ತಂಡಗಳು ಭಾಗಿಯಾಗಲಿ. ಕ್ರೀಡಾಪಟುಗಳು, ಅಧಿಕಾರಿಗಳು ಸಿಬ್ಬಂದಿ ಸೇರಿಒಟ್ಟಾರೆ 2500 ಮಂದಿ ಆಗಮಿಸುವ ನಿರೀಕ್ಷೆಇದೆ. ಇದಕ್ಕಾಗಿ ಊಟ, ವಸತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಈ ಸಂಬAಧಯೂತ್ ಹಾಸ್ಟೆಲ್‌ನಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ನಗರಸಭೆಅಧ್ಯಕ್ಷಎಂ.ಚAದ್ರೇಗೌಡ, ಕ್ರೀಡಾಪಟುಗಳಿಗೆ ಬೇಕಿರುವಎಲ್ಲಾ ಸೌಲಭ್ಯಗಳನ್ನು ನಗರಸಭೆಕಡೆಯಿಂದಕೊಡಿಸಲಾಗುವುದು. ಸಾಲಗಾಮೆ ರಸ್ತೆ ಬಳಿಯ ಶೌಚಾಲಯಓಪನ್ ಮಾಡಿಸುವುದರಜೊತೆಗೆ ನೀರಿನ ಸಮಸ್ಯೆ ಬಗೆಹರಿಸಲು ಕೊಳವೆ ಬಾವಿ ಕೊರೆಸಿಕೊಡುವುದಾಗಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page