Tuesday, July 29, 2025

ಸತ್ಯ | ನ್ಯಾಯ |ಧರ್ಮ

ಹಿರಿಯ ನಟ, ನಿರ್ದೇಶಕ, ಗೀತರಚನೆಕಾರ ಸಿ.ವಿ.ಶಿವಶಂಕರ್ ನಿಧನ

ಹಿರಿಯ ನಿರ್ದೇಶಕರು ಹಾಗೂ ಗೀತ ರಚನೆಕಾರರಾದ ಸಿ.ವಿ.ಶಿವಶಂಕರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ಸಿ.ವಿ.ಶಿವಶಂಕರ್ ರವರು ಚಿತ್ರರಂಗ ಸದಾಕಾಲ ನೆನಪಿನಲ್ಲಿ ಉಳಿಯುವ ಗೀತೆಗಳನ್ನು ರಚಿಸಿದ್ದಾರೆ. ಬಾಲನಟನಾಗಿ ರಂಗಭೂಮಿ ಪ್ರವೇಶಿಸಿದ್ದ ಇವರು ಸ್ಕೂಲ್ ಮಾಸ್ಟರ್, ರತ್ನಗಿರಿ ರಹಸ್ಯ, ಭಕ್ತ ವಿಜಯ, ರತ್ನಮಂಜರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ನಟನೆಯ ಮೂಲಕವೂ ಗುರುತಿಸಿಕೊಂಡಿದ್ದರು.

ಮನೆ ಕಟ್ಟಿ ನೋಡು, ಪದವೀಧರ, ಮಹಾತಪಸ್ವಿ, ವೀರಮಹಾದೇವ, ಕನ್ನಡ ಕುವರ ಇನ್ನೂ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ರಚಿಸಿರುವ ಗೀತೆಗಳಾದ ‘ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ’, ನಾಡಚರಿತೆ ನೆನಪಿಸುವಾ ವೀರ ಗೀತೆಯ’, ‘ಕನ್ನಡದಾ ರವಿ ಮೂಡಿ ಬಂದಾ’ ಗೀತೆಗಳು ಇಂದಿಗೂ ನೆನಪಿನಲ್ಲಿ ಉಳಿಯುವಂತವು‌.

ಪೀಪಲ್ ಟಿವಿ ಸಿ.ವಿ.ಶಿವಶಂಕರ್ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page