Friday, June 14, 2024

ಸತ್ಯ | ನ್ಯಾಯ |ಧರ್ಮ

EVM ಕಾರ್ಯದ ಬಗ್ಗೆ INDIA ಕೂಟದಲ್ಲಿ ಅಪಸ್ವರ : ಚುನಾವಣಾ ಆಯೋಗಕ್ಕೆ ಮನವಿ ಸಾಧ್ಯತೆ

ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಒಕ್ಕೂಟ I.N.D.I.A ಕಡೆಯಿಂದ ಮಹತ್ವದ ಸಭೆ ಕರೆದಿದ್ದು, ಸಭೆಯಲ್ಲಿ ಎಲೆಕ್ಟ್ರಾನಿಕ್ ಓಟಿಂಗ್ ಮಷಿನ್ (EVM) ಕಾರ್ಯವೈಖರಿ ಬಗ್ಗೆ ಅಪಸ್ವರ ವ್ಯಕ್ತವಾಗಿದೆ. ಈ ಬಗ್ಗೆ ಇಂಡಿಯಾ ಮೈತ್ರಿಕೂಟ ಚುನಾವಣಾ ಆಯೋಗಕ್ಕೆ ತಮ್ಮ ತಕರಾರು ಸಲ್ಲಿಸುವ ಬಗ್ಗೆ ತೀವ್ರ ಚರ್ಚೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

EVM ಗಳ ವಿನ್ಯಾಸ ಮತ್ತು ಕಾರ್ಯವೈಖರಿ ಕುರಿತು ಹಲವಾರು ನಿರ್ದಿಷ್ಟ ಪ್ರಶ್ನೆಗಳೊಂದಿಗೆ INDIA ಪಕ್ಷಗಳು ಭಾರತೀಯ ಚುನಾವಣಾ ಆಯೋಗಕ್ಕೆ ವಿವರವಾದ ಮೆಮೊರಾಂಡಮ್ ಅನ್ನು ಸಲ್ಲಿಸಿವೆ. ದುರದೃಷ್ಟವಶಾತ್, ಈ ಜ್ಞಾಪಕ ಪತ್ರದ ಮೇಲೆ INDIA ನಿಯೋಗವನ್ನು ಭೇಟಿ ಮಾಡಲು ಈವರೆಗೂ ಚುನಾವಣಾ ಆಯೋಗ ಉತ್ಸುಕತೆ ತೋರಿಲ್ಲ ಎಂದು ತಿಳಿದು ಬಂದಿದೆ.

ಎಲೆಕ್ಟ್ರಾನಿಕ್ ಓಟಿಂಗ್ ಮಷಿನ್ ಗಳ ಕಾರ್ಯನಿರ್ವಹಣೆಯ ಸಮಗ್ರತೆಯ ಬಗ್ಗೆ ಈ ಹಿಂದಿನಿಂದಲೂ ಹಲವಷ್ಟು ಅನುಮಾನಗಳು ಕೇಳಿ ಬಂದಿತ್ತು. INDIA ಮೈತ್ರಿಕೂಟದ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದ್ದು, ಮಂಗಳವಾರ ನಡೆದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಪುನರುಚ್ಚರಿಸಿವೆ. ಈ ಹಿಂದೆಯೂ ಅನೇಕ ತಜ್ಞರು ಮತ್ತು ವೃತ್ತಿಪರರು ಕೂಡ ಅನುಮಾನಗಳನ್ನು ಈ ಹಿಂದೆಯೂ ವ್ಯಕ್ತಪಡಿಸಿದ್ದು ಇಲ್ಲಿ ಮತ್ತೆ ನೆನಪಿಸಬೇಕು.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಲ್ಲಿ ಜನರ ಸಂಪೂರ್ಣ ವಿಶ್ವಾಸವನ್ನು ಪಡೆಯಲು ಚುನಾವಣಾ ಆಯೋಗ ಮುಂದಾಗಬೇಕು ಎಂದು ಮೈತ್ರಿಕೂಟ ಅಭಿಪ್ರಾಯ ಪಟ್ಟಿದೆ. ಹಾಗೂ ಈ ಬಗ್ಗೆ ಚುನಾವಣಾ ಆಯೋಗವನ್ನು ಒತ್ತಾಯಿಸಲು ಮುಂದಾಗಿವೆ.

ಅದರಂತೆ ಮತದಾನದ ನಂತರ ಬರುವ EVM ನ ಒಂದು ಭಾಗವಾಗಿರುವ VV PAT ಕಡೆಯಿಂದ ಬರುವ ಸ್ಲಿಪ್ ಗಳನ್ನು ಮತದಾರರಿಗೇ ಹಸ್ತಾಂತರಿಸಬೇಕು. ನಂತರ ಆ ಸ್ಲಿಪ್ ಗಳನ್ನು ಮತದಾರ ಪರಿಶೀಲಿಸಿದ ನಂತರವೇ ಅದನ್ನು ಪ್ರತ್ಯೇಕ ಮತಪೆಟ್ಟಿಗೆಯಲ್ಲಿ ಇರಿಸಬೇಕು. ಇದು ಮುಕ್ತ ಮತ್ತು ನ್ಯಾಯಸಮ್ಮತವಾಗಿ ಇರುತ್ತದೆ. ಚುನಾವಣಾ ಆಯೋಗ ಈ ನಿರ್ಧಾರ ತಗೆದುಕೊಂಡರೆ ಜನರ ವಿಶ್ವಾಸವನ್ನು ಇನ್ನಷ್ಟು ಹತ್ತಿರಕ್ಕೆ ತಗೆದುಕೊಂಡಂತೆ ಎಂದು ಮೈತ್ರಿಕೂಟ ಅಭಿಪ್ರಾಯ ಪಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು