Friday, June 14, 2024

ಸತ್ಯ | ನ್ಯಾಯ |ಧರ್ಮ

ಅಂಗನವಾಡಿಗೆ ಕೊಳೆತ ಮೊಟ್ಟೆ ವಿತರಣೆ ; ಕ್ರಮಕ್ಕೆ ಆಗ್ರಹಿಸಿದ SDPI

ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳ ಅಂಗನವಾಡಿ ಕೇಂದ್ರದಲ್ಲಿ ಕೊಳೆತ ಮೊಟ್ಟೆಗಳನ್ನು ವಿತರಣೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಕೂಡಿಗೆ ಬಳಿಯ ಬಸವನತ್ತೂರು ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. ಈ ಮೂಲಕ ರಾಜ್ಯದ ಅಂಗನವಾಡಿ ಕೇಂದ್ರದಲ್ಲಿ ಈ ರೀತಿಯ ಘಟನೆ ನಡೆದಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ಪಷ್ಟ ಬೇಜವಾಬ್ದಾರಿ ನಿಲುವನ್ನು ತೋರ್ಪಡಿಸಿದೆ.

ಹಾಸನ ಜಿಲ್ಲೆಯಲ್ಲೂ ಸಹ ಹಲವೆಡೆ ಈ ರೀತಿಯ ಘಟನೆ ನಡೆದಿದ್ದು, ಕಳಪೆ ಗುಣಮಟ್ಟದ ಮೊಟ್ಟೆಗಳ ವಿತರಣೆಗೆ ಆಕ್ರೋಶ ವ್ಯಕ್ತವಾಗಿದೆ. ಮೊಟ್ಟೆ ವಿತರಣೆಯ ಟೆಂಡರ್ ಕೂಗಿದ ಗುತ್ತಿಗೆದಾರ ಮತ್ತು ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.

ಹಳೆಯ, ಕಳಪೆ ಗುಣಮಟ್ಟದ ಹಾಗೂ ಕೊಳೆತ ಮೊಟ್ಟೆಗಳನ್ನು ಅಂಗನವಾಡಿ ಮಕ್ಕಳು ಸೇವಿಸಿದರೆ ಸ್ಪಷ್ಟವಾಗಿ ಆರೋಗ್ಯ ಕೆಡದಿರದು. ಗರ್ಭಿಣಿ ಸ್ತ್ರೀಯರಿಗಂತೂ ಆರೋಗ್ಯ ಹದಗೆಟ್ಟು, ಹುಟ್ಟುವ ಮಗು ಮತ್ತು ಗರ್ಭಿಣಿ ಸ್ತ್ರೀಗೂ ಪ್ರಾಣಾಯಾಮ ಆಗುವ ಸಂಭವವಿರುತ್ತದೆ. ಇದನ್ನು ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ

ಇತ್ತ ಕೊಡಗು ಭಾಗದಲ್ಲೂ ಸಹ ಕಳಪೆ ಗುಣಮಟ್ಟದ ಮತ್ತು ಕೊಳೆತ ಮೊಟ್ಟೆ ವಿತರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. SDPI ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ ಅವರು ಜಿಲ್ಲೆಯ ಕೂಡಿಗೆ ಬಳಿಯ ಬಸವನತ್ತೂರು ಅಂಗನವಾಡಿ ಕೇಂದ್ರದಲ್ಲಿ ಬಾಣಂತಿಯರಿಗೆ ಕೊಳೆತ ಮೊಟ್ಟೆಗಳನ್ನು ವಿತರಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಟೆಂಡರ್ ಪಡೆದು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಹಾಗೂ ಕೊಳೆತ ಮೊಟ್ಟೆಗಳನ್ನು ಪೂರೈಕೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು