Friday, January 10, 2025

ಸತ್ಯ | ನ್ಯಾಯ |ಧರ್ಮ

ಜಿಲ್ಲಾ ಮಂತ್ರಿ ಕೆ.ಎನ್. ರಾಜಣ್ಣ ಜಿಲ್ಲೆ ಬಿಟ್ಟು ಹೋಗಲಿ: ಬನವಾಸೆ ರಂಗಸ್ವಾಮಿ ಆಗ್ರಹ

ಹಾಸನ: ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಬೆಂಗಳೂರಿನಲ್ಲಿ ಡಿನ್ನರ್, ಮೀಟಿಂಗ್ ನೆಪದಲ್ಲಿ ಪಕ್ಷದೊಳಗೆ ಗೊಂದಲವನ್ನುಂಟು ಮಾಡುತ್ತಿದ್ದು, ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕೆಲಸ ಮಾಡಿಲ್ಲದಿರುವುದರಿಂದ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಬದಲಾವಣೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ಒತ್ತಾಯಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಹಾಸನ ಜಿಲ್ಲೆಯ ಉಸ್ತುವಾರಿವಹಿಸಿಕೊಂಡು ಸುಮಾರು ಎರಡು ವರ್ಷಗಳು ಆಗುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತಿಲ್ಲ. ಉಸ್ತುವಾರಿ ಸಚಿವರು ಈಗಿನ ತನಕ ಯಾವುದೇ ರೀತಿಯ ಅನುದಾನವಾಗಲಿ, ಅಲ್ಪಸಂಖ್ಯಾತರ ಹಿಂದುಳಿದ ವರ್ಗದವರ ಕಡೆ ಯಾವುದೇ ಗಮನ ಕೊಡದೆ, ಪಕ್ಷದ ಮುಖಂಡರು ಮತ್ತು ಸದಸ್ಯರನ್ನು ಲೆಕ್ಕಿಸದೆ ಉಡಾಫೆ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹಾಸನ ಜಿಲ್ಲೆಯು 7 ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದು, ರಾಜಣ್ಣ ಯಾವುದೇ ಕೆಲಸಗಳನ್ನು ಮಾಡದೆ ಜಿಲ್ಲೆಗೆ ಭಾರವಾಗಿದ್ದಾರೆ ಹಾಗೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಇಂತಹ ವ್ಯಕ್ತಿ ಆಡಳಿತದಲ್ಲಿ ಇರುವುದು ಸೂಕ್ತವಲ್ಲ ಆದಷ್ಟು ಬೇಗಾ ರಾಜಣ್ಣ ಅವರನ್ನು ಉಸ್ತುವಾರಿ ಸಚಿವರಿಂದ ಕೆಳಗಿಳಿಸಿ ಬೇರೆಯವರನ್ನು ಹಾಸನದ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕೆಂದು ಈಗಾಗಲೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು. ರಾಜಣ್ಣ ಅವರು ಸಹಕಾರ ಸಚಿವರಾಗಿದ್ದರೂ, ಡಿಸಿಸಿ ಬ್ಯಾಂಕ್ ಮತ್ತು ಹಾಸನ ಹಾಲು ಒಕ್ಕೂಟದ ಆಡಳಿತ ಜೆಡಿಎಸ್ ವಶದಲ್ಲಿಯೇ ಎಲ್ಲಾ ವಿಚಾರವಾಗಿ ಜಿಲ್ಲೆಗೆ ಏನನ್ನೂ ಮಾಡದ ಸಚಿವರು, ಜಿಲ್ಲೆ ಬಿಟ್ಟು ಹೋಗಲಿ ಎಂದು ಆಗ್ರಹಿಸಿದರು.


ರಾಜ್ಯ ಮಟ್ಟದಲ್ಲಿ ಎಸ್.ಸಿ.ಎಸ್.ಟಿ. ವರ್ಗಕ್ಕೆ ಒಂದು ನಿಗಮ ಮಂಡಳಿ ಸ್ಥಾನಮಾನ ಕೊಡಿಸಲಿಲ್ಲ. ಕನಿಷ್ಠ ಪಕ್ಷದ ಕಾರ್ಯಕರ್ತರ ಸಭೆಯನ್ನು ಮಾಡಿ ಕಷ್ಟ ಕೇಳಲಿಲ್ಲ., ಪಕ್ಷದಲ್ಲಿ ಅನೇಕ ವಿಭಾಗದ ಘಟಕಗಳಿದ್ದು, ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದಿಲ್ಲ ಎಂದು ದೂರಿದರು. ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ಇವರ ವಿರುದ್ಧ ಕ್ರಮ ಜರುಗಿಸಬೇಕು. ಹಾಗೂ ಉಸ್ತುವಾರಿಯಿಂದ ಕೂಡಲೇ ಬದಲಾಯಿಸಬೇಕು ಎಂದು ಮನವಿ ಮಾಡುತ್ತೇವೆ ಎಂದು ಹೇಳಿದರು. ಕಾಂಗ್ರೆಸ್ ಕಾರ್ಯಕರ್ತರು ಸಿಟ್ಟಿಗೇಳುವ ಮೊದಲು ಎಚ್ಚೆತ್ತುಕೊಂಡು ಬದಲಾವಣೆ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವೆಂಕಟಗೌಡ, ಬೂದೇಶ್, ತಲಹ್, ಚಂದ್ರಶೇಖರ್, ಉಮೇಶ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page