Saturday, June 15, 2024

ಸತ್ಯ | ನ್ಯಾಯ |ಧರ್ಮ

ಡಿಕೆಶಿಗೆ ಶುರುವಾಯಿತು ಇಡಿ ಸಂಕಷ್ಟ : ವಿಚಾರಣೆಗಾಗಿ ದೆಹಲಿಗೆ ಪ್ರಯಾಣ

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ನಡುವೆಯೇ ಅಕ್ರಮ ಹಣ ವರ್ಗಾವಣೆ ತನಿಖೆಯ ವಿಚಾರವಾಗಿ ಡಿಕೆ ಶಿವಕುಮಾರ್‌ ಅವರಿಗೆ ಇಡಿ ಸಮನ್ಸ್‌ ನೀಡಿದೆ. ಅಕ್ಟೋಬರ್‌ 7 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದು ಡಿಕೆಶಿ ದೆಹಲಿಗೆ ಹೊರಡಲಿದ್ದಾರೆ.

ಅಕ್ರಮ ಹಣ ವರ್ಗಾವಣೆ ಸಂಬಂಧಪಟ್ಟಂತೆ ತನಿಖೆಯ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಹೋದರ ಡಿಕೆ ಸುರೇಶ್‌ ಇಬ್ಬರಿಗೂ ಅಕ್ಟೋಬರ್‌ 7 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಕರೆ ಕೊಟ್ಟಿದೆ. ಆದರೆ ಭಾರತ್‌ ಜೋಡೋ ಯಾತ್ರೆ ನಡುವೆಯೇ ಇಡಿ ಸಂಕಷ್ಟ ಎದುರಾಗಿರುವ ಕಾರಣ ಡಿಕೆಶಿ ವಿಚಾರಣಾ ದಿನಾಂಕವನ್ನು ಮುಂದೂಡುವಂತೆ ಇಡಿ ಅವರಿಗೆ ಮನವಿ ಮಾಡಿದ್ದರೂ ಡಿಕೆಶಿಯ ಮನವಿಯನ್ನು ಇಡಿ ತಿರಸ್ಕಾರ ಮಾಡಿದೆ. ಈ ಕಾರಣ ಡಿಕೆಶಿ ಸಹೋದರರು ಎದುರಾಗಿರುವ ಸಂಕಷ್ಟದ ಅನಿವಾರ್ಯವಾಗಿ ದೆಹಲಿಗೆ ಹೋಗಿ ವಿಚಾರಣೆಗೆ ಹಾಜರಾಗುವ ನಿರ್ಧಾರ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್‌ ʼಕರ್ನಾಟಕದಲ್ಲಿ ಭಾರತ ಜೋಡೊ ಯಾತ್ರೆ ನಡೆಯುತ್ತಿರುವ ಕಾರಣ ವಿಚಾರಣೆಗೆ ಹಾಜರಾಗಲು ನಾನು ಸುರೇಶ್‌ ಸ್ವಲ್ಪ ದಿನಗಳ ಕಾಲಾವಕಾಶ ನೀಡುವಂತೆ ಇಡಿಗೆ ಮನವಿ ಮಾಡಿದ್ವಿ. ಆದ್ರೆ ಇಡಿ ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ನಾಳೆ ಬೆಳಗ್ಗೆ 10.30 ರ ಹೊತ್ತಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌ ನೀಡಿದ್ದಾರೆ. ಹಾಗಾಗಿ ನಾಳೆ ದೆಹಲಿಗೆ ಹೊರಡುತ್ತಿದ್ದೇನೆʼ ಎಂದು ಹೇಳಿದರು.

ಮಾತು ಮುಂದುವರೆಸಿದ ಡಿಕೆಶಿ ಅವರು ʼಈ ಬಗ್ಗೆ ನಾವು ಪಕ್ಷದ ಹಿರಿಯರ ಜೊತೆ ಚರ್ಚೆ ಮಾಡಿದ್ದು, ಕಾನೂನಿಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ನಮ್ಮ ಪಕ್ಷದವರು ದೇಶದ ಕಾನೂನಿಗೆ ಗೌರವ ಕೊಡುವವರು. ನಾಳೆ ಇಡಿಯವರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇವೆʼ ಎಂದು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ : ಟಿ.ವಿ.ನಗರ ನಿವೇಶನದಾರರ ಕ್ಷೇಮಾಭಿವೃದ್ಧಿ ಸಂಘ

https://peepalmedia.com/tvnagara-niveshanadaarara-kshemabhiruddi-sanga/

Related Articles

ಇತ್ತೀಚಿನ ಸುದ್ದಿಗಳು