Tuesday, August 26, 2025

ಸತ್ಯ | ನ್ಯಾಯ |ಧರ್ಮ

RSS ಗೀತೆ ಹಾಡಿ ನಂತರ ಕ್ಷಮೆ ಕೇಳಿದ ಡಿಕೆ ಶಿವಕುಮಾರ್

ವಿಧಾನಸಭೆಯನ್ನುದ್ದೇಶಿಸಿ ಮಾತನಾಡುವಾಗ ಆರ್‌ಎಸ್‌ಎಸ್ (RSS) ಗೀತೆ “ನಮಸ್ತೆ ಸದಾ ವತ್ಸಲೆ..” ಹಾಡಿ ಕಾಂಗ್ರೆಸ್ ಮತ್ತು ಪ್ರಗತಿಪರರ ಕಡೆಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಡಿಕೆ ಶಿವಕುಮಾರ್ ಈಗ ಕ್ಷಮೆ ಯಾಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿ ಕಿರಿಯ ನಾಯಕರಾದಿಯಾಗಿ ಅನೇಕರು ಈ ಬಗ್ಗೆ ಅಪಸ್ವರ ಎತ್ತಿದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಕ್ಷಮೆ ಯಾಚಿಸಿದ್ದಾರೆ.

ವಿಧಾನಸಭೆಯಲ್ಲಿ ನಿಂತು ಸದನವನ್ನು ಉದ್ದೇಶಿಸಿ ಮಾತನಾಡುತ್ತಾ RSS ಗೀತೆ ‘ನಮಸ್ತೆ ಸದಾ ವತ್ಸಲೇ ಮಾತೃಭೂಮಿ’ ಗೀತೆ ಪಠಿಸಿದ್ದರು. ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರು ನೇರವಾಗಿ ಡಿಕೆ ಶಿವಕುಮಾರ್ ಅವರ ಕ್ಷಮೆಗೆ ಆಗ್ರಹಿಸಿದ್ದರು.

ಸಚಿವ ಪ್ರಿಯಾಂಕ್ ಖರ್ಗೆ ಸಹ ನಮಗೆ ಆರೆಸ್ಸೆಸ್ ಗಾಳಿ ಕೂಡಾ ತಾಕಬಾರದು ಎಂದು ಹೇಳಿದ್ದರು. ಪದಚ್ಯುತ ಸಚಿವ ಕೆಎನ್ ರಾಜಣ್ಣ ಸಹ “ಅವರು (ಡಿಕೆ ಶಿವಕುಮಾರ್) ಏನು ಬೇಕಾದರೂ ಮಾಡಬಹುದು, ನಾವು ಏನು ಮಾಡಿದರೂ ತಪ್ಪು” ಎಂದು ಮಾರ್ಮಿಕವಾಗಿ ಮಾತಾಡಿದ್ದರು.

”ಡಿಕೆ ಶಿವಕುಮಾರ್ ಏನು ಎಂದು ಕಾಂಗ್ರೆಸ್ ಗೆ ಗೊತ್ತಿದೆ. ನನಗೆ ನನ್ನ ಧರ್ಮದ ಬಗ್ಗೆ ಗೌರವವಿದೆ. ಹಿಂದೂ, ಕ್ರೈಸ್ತ, ಮುಸಲ್ಮಾನ ಈ ಮೂರು ಧರ್ಮದ ಬಗ್ಗೆ ನನಗೆ ಗೌರವವಿದೆ. ನಾನು ಹರಿಪ್ರಸಾದ್ ಗೋಸ್ಕರ ಕ್ಷಮೆ ಕೇಳುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.

‘RSS’ ಗೀತೆ ಹಾಡಿದ ಡಿ.ಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಎಂಲ್ ಸಿ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದರು.ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅವರು ಆರ್ ಎಸ್ ಎಸ್ ಗೀತೆ ಹಾಡಿದ್ದು ತಪ್ಪು, ಅದು ಸರಿಯಲ್ಲ. ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.ಅವರು ಉಪಮುಖ್ಯಮಂತ್ರಿಯಾಗಿ ಹೇಳಿದ್ದರೆ ತಪ್ಪಿಲ್ಲ, ಆದರೆ ಅವರು ಕೆಪಿಸಿಸಿ ಪಕ್ಷದ ಅಧ್ಯಕ್ಷರಾಗಿ ಆರ್ ಎಸ್ ಎಸ್ ಗೀತೆ ಹೇಳಿದ್ದಾರೆ. ಇದು ತಪ್ಪು ಎಂದರು..

Related Articles

ಇತ್ತೀಚಿನ ಸುದ್ದಿಗಳು

You cannot copy content of this page