Wednesday, June 19, 2024

ಸತ್ಯ | ನ್ಯಾಯ |ಧರ್ಮ

ಎಲ್ಲರೂ ನೆನಪಿಸಿಕೊಳ್ಳುತ್ತಿರುವ ವೈಕುಂಠ ಬಾಳಿಗ ಯಾರು ಗೊತ್ತೇ?

ಮೂಲತಃ ವಕೀಲರಾಗಿದ್ದ ಬಾಳಿಗರು ಶಾಸಕರಾಗಿ ಚುನಾಯಿತರಾಗಿ ಕಾನೂನು ಮಂತ್ರಿಯಾಗಿ ಹಾಗೂ ಮೈಸೂರು ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು. ಮಾರ್ಚ್ 1962 ರಿಂದ ಜೂನ್ 1968 ರವರೆಗೆ ಸ್ಪೀಕರ್‌ ಆಗಿದ್ದ ಇವರು ಸ್ಪೀಕರ್‌ ಸ್ಥಾನದಲ್ಲಿಯೇ ಇದ್ದುಕೊಂಡು ಕೊನೆಯುಸಿರು ಎಳೆದರು. 

ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಮೊದಲಬಾರಿಗೆ ಮುಸ್ಲೀಂ ಸಮುದಾಯದ ನಾಯಕರೊಬ್ಬರು ಸ್ಪೀಕರ್‌ ಆಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಕಾಂಗ್ರೇಸ್‌ ಸರ್ಕಾರದಲ್ಲಿ ಆರೋಗ್ಯ ಖಾತೆ, ಜಲಸಂಪನ್ಮೂಲ ಖಾತೆ, ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಕೆಲಸ ಮಾಡಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯುಟಿ ಖಾದರ್ ಈಗ ಸ್ಪೀಕರ್‌ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಸಂದರ್ಭದಲ್ಲಿ ಬಂಟ್ವಾಳ ವೈಕುಂಠ ಬಾಳಿಗರನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ.

ಯಾರೀ ವೈಕುಂಠ ಬಾಳಿಗ?

ಯುಟಿ ಖಾದರ್‌ ಆವರು ವೈಕುಂಠ ಬಾಳಿಗರ ಆನಂತರ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪೀಕರ್ ಆಗಿ  ಆಯ್ಕೆಯಾದ ಎರಡನೇ ನಾಯಕ. ಸಂಸದೀಯ ಚಾಣಾಕ್ಷತೆ, ಶಾಸಕಾಂಗ ವ್ಯವಹಾರದ ಜ್ಞಾನ ಮತ್ತು ಸಂಸದೀಯ ಕಾರ್ಯವಿಧಾನದ ಬಗ್ಗೆ ವ್ಯಾಪಕ ಅನುಭವದ ಕಾರಣದಿಂದಾಗಿ ವೈಕುಂಠ ಬಾಳಿಗರು ಹೆಸರುವಾಸಿಯಾಗಿದ್ದರು. ಬಂಟ್ವಾಳದ ಗೌಡಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ವೈಕುಂಠ ಬಾಳಿಗ ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮಹಾತ್ಮ ಗಾಂಧಿಯವರೊಂದಿಗೆ ನಿಕಟವಾಗಿ ಹೋರಾಟದಲ್ಲಿ ತೊಡಗಿಸಿಕೊಂಡವರು. 

ಮೂಲತಃ ವಕೀಲರಾಗಿದ್ದ ಬಾಳಿಗರು ಶಾಸಕರಾಗಿ ಚುನಾಯಿತರಾಗಿ ಕಾನೂನು ಮಂತ್ರಿಯಾಗಿ ಹಾಗೂ ಮೈಸೂರು ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು. ಮಾರ್ಚ್ 1962 ರಿಂದ ಜೂನ್ 1968 ರವರೆಗೆ ಸ್ಪೀಕರ್‌ ಆಗಿದ್ದ ಇವರು ಸ್ಪೀಕರ್‌ ಸ್ಥಾನದಲ್ಲಿಯೇ ಇದ್ದುಕೊಂಡು ಕೊನೆಯುಸಿರು ಎಳೆದರು. 

1926 ರಿಂದ 1957ರ ವರೆಗೆ ಕೆನರಾ ಬ್ಯಾಂಕಿಂಗ್ ಕಾರ್ಪೊರೇಷನ್ ಲಿಮಿಟೆಡ್, (ನಂತರ ಕಾರ್ಪೊರೇಷನ್ ಬ್ಯಾಂಕ್ ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಬಾಳಿಗರು 1957 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಂಗಳೂರು-1 ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಈ ಹುದ್ದೆಯನ್ನು ಬಿಟ್ಟರು. ಏಪ್ರಿಲ್ 1957 ರಿಂದ ಮೇ 1958 ರವರೆಗೆ ಕಾರ್ಮಿಕ ಮತ್ತು ಕಾನೂನು ವ್ಯವಹಾರಗಳ ಸಚಿವರಾಗಿ; ಫೆಬ್ರವರಿ 1961 ರಿಂದ ಮಾರ್ಚ್ 1962 ರವರೆಗೆ ಮತ್ತೆ ಕಾನೂನು ಮತ್ತು ಕಾರ್ಮಿಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1967 ರಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಮೈಸೂರು ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಇವರು ಮರು ಆಯ್ಕೆಯಾಗಿದ್ದಾರೆ

ಎರಡು ಬಾರಿ ಸ್ಪೀಕರ್‌ ಆಗಿ ಕಾರ್ಯ ನಿರ್ವಹಿಸಿದ್ದ ಬಾಳಿಗರ ಆನಂತರ, ಸುಮಾರು ಐವತ್ತು ವರ್ಷಗಳ ಬಳಿಕ ದಕ್ಷಿಣ ಕನ್ನಡದಿಂದ ಯುಟಿ ಖಾದರ್ ಸ್ಪೀಕರ್‌ ಆಗಿ ಆಯ್ಕೆಯಾಗಿದ್ದಾರೆ.

ಚರಣ್‌ ಐವರ್ನಾಡು

Related Articles

ಇತ್ತೀಚಿನ ಸುದ್ದಿಗಳು