Thursday, July 31, 2025

ಸತ್ಯ | ನ್ಯಾಯ |ಧರ್ಮ

200 ಕೇಸಿನಲ್ಲಿ ಪಾಲ್ಗೊಂಡ ಶ್ವಾನ ರಕ್ಷಾ ಇನ್ನಿಲ್ಲ

ಹಾಸನ : ವಿವಿಧ ಅಪರಾಧ ಪ್ರಕರಣಗಳಲ್ಲಿ ಪತ್ತೆಗಾಗಿ ಕಳೆದ 10 ರಕ್ಷ ಪೊಲೀಸ್ ಜೊತೆ ಸೇವೆ ಸಲ್ಲಿಸಿ ಎಲ್ಲಾರ ಪ್ರೀತಿಗೆ ಪಾತ್ರವಾಗಿದ್ದ ರಕ್ಷಾ ಶ್ವಾನದಳ ಅನಾರೋಗ್ಯದಿಂದ ಸಾವನಪ್ಪಿದ್ದು, ಪೊಲೀಸ್ ಕ್ವಾಟ್ರಸ್ ಮೈದಾನಾದಲ್ಲಿ ಪೊಲೀಸ್ ಸಕಲ ಗೌರವದೊಡನೆ ಅಂತ್ಯಕ್ರಿಯೆ ನಡೆಸಿದರು. ಇದನ್ನ ಸಾಕಿ ಸಲಗಿದ ಹನುಮಂತೇಗೌಡ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ನಗರದ ಹೊಸಲೈನ್ಚ ರಸ್ತೆ ಬಳಿ ಇರುವ ಪೊಲೀಸ್ ವಸತಿಗೃಹ ಮೈದಾನದಲ್ಲಿ ಸರ‍್ವಜನಿಕರ ರ‍್ಶನಕ್ಕೆ ಕೆಲಸ ಸಮಯ ಡಾಬರ್ ಮನ್ ಫೀಮೇಲ್ ರಕ್ಷಾ ಶ್ವಾನವ್ನನ್ನು ಇಡಲಾಗಿದ್ದು, ಈ ವೇಳೆ ಪೊಲೀಸ್ ಅಡಿಸನಲ್ ಎಸ್ಪಿ-2 ವೆಂಕಟೇಶ್ ನಾಯ್ಡ್ ಇತರರು ಆಗಮಿಸಿ ಪೊಲೀಸ್ ಶ್ವಾನದಳದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪೊಲೀಸ್ ವಾಧ್ಯ ನುಡಿಸಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸೂಚಿಸಿದರು. ನಂತರ ಮೈದಾನದಲ್ಲೆ ಗುಂಡಿ ತೆಗೆದು ಪೂಜೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಲಾಯಿತು. ವೆಂಕಟೇಶ್ ನಾಯ್ಡ್ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ 10 ರ‍್ಷಗಳಿಂದಲೂ ಪೊಲೀಸ್ ಇಲಾಖೆಗೆ ಸೇವೆ ಸಲ್ಲಿಸಿದ ಪೊಲೀಸ್ ಶ್ವಾನದಳ ಸಾವನಪ್ಪಿದ್ದು, 2015 ರಿಂದ ನಮ್ಮ ಪೊಲೀಸ್ ಜೊತೆ ಕೆಲಸ ಮಾಡಿದೆ. ನೂರಾರು ಪ್ರಕರಣಗಳಲ್ಲಿ ಈ ಶ್ವಾನದಳವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಸುಮಾರು 47 ಪ್ರಕರಣ ಬೇಧಿಸುವುದಕ್ಕೆ ಸಹಾಯ ಮಾಡಿದೆ. ಒಂದು ಪ್ರಕರಣ ಬೇಧಿಸಬೇಕೆಂದರೇ ಆರೋಪಿಗಳು ಎಲ್ಲಾ ತಿಳಿದೆ ಸಮಾಜ ಘಾತಕ ಕೆಲಸ ಮಾಡಿರುತ್ತಾರೆ. ಇಂತಹ ಕೇಸುಗಳು ನಮಗೆ ಸವಾಲಾಗಿರುತ್ತದೆ. ಈ ಸಂರ‍್ಭದಲ್ಲಿ ಪೊಲೀಸ್ ಡಾಗ್ ಮೂಲಕ ಅನೇಕ ಪ್ರಕರಣ ಬೇಧಿಸಲು ಸಹಾಯ ಮಾಡಿದೆ ಎಂದರು. ಇಂತಹ ಸೇವೆ ಸಲ್ಲಿಸಿದ ಶ್ವಾನದಳದ ಕರ‍್ಯವೈಕರಿ ನೆನಪಿಸಿಕೊಂಡು ಪೊಲೀಸ್ ಗೌರವ ಸಲ್ಲಿಸಲಾಗಿದೆ ಎಂದು ಹೇಳಿದರು. ಪೊಲೀಸ್ ಶ್ವಾನ ಪಾಲಕ ಹನುಮಂತೇಗೌಡ ಮಾಧ್ಯಮದೊಂದಿಗೆ ಮಾತನಾಡಿ, 2015 ರಿಂದ 2016ರ ವರೆಗೂ ಪೊಲೀಸ್ ತರಬೇತಿ ಪಡೆದು ನಂತರ ನಮ್ಮ ಪೊಲೀಸ್ ಇಲಾಖೆಗೆ ಸರ‍್ಪಡೆಗೊಂಡು ಇಲ್ಲಿ ಅಪರಾಧ ವಿಭಾಗದಲ್ಲಿ ಕರ‍್ಯನರ‍್ವಹಿಸಿದೆ. ಇಲ್ಲಿವರೆಗೂ 200 ಕೇಸಿನಲ್ಲಿ ಪಾಲ್ಗೊಂಡು ಸುಮಾರು 47 ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ. ಯಾವುದೇ ಸಂರ‍್ಭದಲ್ಲಿ ರ‍್ತವ್ಯ ಎಂದು ಬಂದಾಗ ಮಂಕಾಗಿ ಇರುತ್ತಿರಲಿಲ್ಲ. ಫುಲ್ ಆಕ್ಟಿವಾಗಿ ಕೆಲಸ ಮಾಡಿದೆ. ಅದರ ಒಡನಾಟ ನಮ್ಮ ಜೊತೆ ಹೆಚ್ಚು ಇದ್ದು, ಅದನ್ನ ಮರೆಯಲು ಸಾಧ್ಯವಾಗುತ್ತಿಲ್ಲ. ಅನೇಕ ಶ್ವಾನದಳ ಪ್ರರ‍್ಶನದಲ್ಲಿ, ವಲಯ ಮಟ್ಟದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದು, ರಾಜ್ಯ ಮಟ್ಟದಲ್ಲಿನ ಸ್ರ‍್ದೆಯಲಿ ಬೆಳ್ಳಿ ಪದಕ ಪಡೆದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page