Friday, March 13, 2026

ಸತ್ಯ | ನ್ಯಾಯ |ಧರ್ಮ

ದೋಣಿ ಮುಳುಗಡೆ : 61 ಕ್ಕೇರಿದ ಸಾವಿನ ಸಂಖ್ಯೆ

ಬಾಂಗ್ಲಾದೇಶ : ಬಾಂಗ್ಲಾದೇಶದ ಢಾಕಾ ದಿಂದ ಪಂಚಗೆರೆ ಜಿಲ್ಲೆಗೆ ಹರಿಯುವ ಕೊರೊಟೊ ನದಿಯಲ್ಲಿ ಭಾನುವಾರ ದೋಣಿ ಮುಳುಗಿ ಇದೀಗ ಸಾವಿನ ಸಂಖ್ಯೆ 61 ಕ್ಕೆ ಏರಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಬಾಂಗ್ಲಾದೇಶದ ವಾಯುವ್ಯ ದಿಕ್ಕಿನಲ್ಲಿರುವ ಪಂಚಗೆರೆ ಜಿಲ್ಲೆಯು ಢಾಕಾದಿಂದ 468 ಕಿ.ಮೀ ದೂರದಲ್ಲಿದ್ದು ಜಿಲ್ಲೆಯಲ್ಲಿ ಹರಿಯುವ ಕೊರೊಟೊ ನದಿಯಲ್ಲಿ ಸುಮಾರು 70 ಜನರನ್ನು ಕೊಂಡೊಯ್ಯುತ್ತಿದ್ದ ದೋಣಿ ಕಳೆದ ಭಾನುವಾರ ಮುಳುಗಡೆಯಾಗಿದ್ದು ದೊಡ್ಡ ದುರಂತ ನಡೆದಿದೆ. ಇಲ್ಲಿಯವರೆಗೆ ಸುಮಾರು 61 ಜನ ಮೃತ ಪಟ್ಟಿದ್ದು 6 ಮಂದಿ ನಾಪತ್ತೆಯಾಗಿದ್ದರೆ. ಶವಗಳನ್ನು ನದಿಯ ವಿವಿದ ಭಾಗಗಳಿಂದ ಮೇಲೆತ್ತಲಾಗುತ್ತಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಘಟನೆಯಲ್ಲಿ 61 ಜನರು ಸಾವನ್ನಪ್ಪಿದ್ದು ಕಾಣೆಯಾದ ಆರು ಜನರಿಗಾಗಿ ಹೆಚ್ಚಿನ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಪೋಲಿಸರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page