Monday, June 24, 2024

ಸತ್ಯ | ನ್ಯಾಯ |ಧರ್ಮ

50 ವರ್ಷಗಳ ಹಿಂದಿನ ತಪ್ಪನ್ನು ಮರುಕಳಿಸುವ ಹಾಗೆ ಮಾಡಬೇಡಿ: ತುರ್ತು ಪರಿಸ್ಥಿತಿ ಕುರಿತು ಮೋದಿ ಹೇಳಿಕೆ

ದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳೊಂದಿಗೆ ಮಾತನಾಡಿದರು. ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಸ್ವಾಗತಿಸಿದ ಅವರು, ಇದೊಂದು ಅದ್ಭುತ ದಿನ ಎಂದರು. ಎಲ್ಲ ಸದಸ್ಯರನ್ನು ಸೇರಿಸಿಕೊಂಡು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಗುರಿ ಮುಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಬೆಳಗ್ಗೆ ಸಂಸತ್ತಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ವಾಗತಿಸಿದರು. ಬಳಿಕ ಮಾತನಾಡಿದ ಪ್ರಧಾನಿ, ‘‘ಈ ಪ್ರಜಾಪ್ರಭುತ್ವದ ಸಂಸತ್ತಿನ ಇತಿಹಾಸದಲ್ಲಿ ಇದೊಂದು ಅದ್ಭುತ ದಿನ. ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ನಮ್ಮ ನೂತನ ಸಂಸತ್ ಭವನದಲ್ಲಿ ಲೋಕಸಭೆ ಸಂಸದರ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಈ ಶುಭ ಸಂದರ್ಭದಲ್ಲಿ, ಹೊಸದಾಗಿ ಆಯ್ಕೆಯಾದ ಸದಸ್ಯರನ್ನು ಅಭಿನಂದಿಸುತ್ತೇನೆ. ಜನರು ನಮ್ಮ ನೀತಿಗಳನ್ನು ನಂಬಿದ್ದರು. ಮೂರನೇ ಬಾರಿಗೆ ದೇಶ ಸೇವೆ ಮಾಡುವ ಭಾಗ್ಯವನ್ನು ಜನ ನಮಗೆ ನೀಡಿದ್ದಾರೆ. ನಾವು ಇಂದು ಹೊಸ ವಿಶ್ವಾಸದಿಂದ ಹೊಸ ಸಭೆಗಳನ್ನು ಪ್ರಾರಂಭಿಸುತ್ತಿದ್ದೇವೆ. ನಾವು ಸಂವಿಧಾನವನ್ನು ಗೌರವಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಜನರ ಕನಸನ್ನು ನನಸು ಮಾಡಲು ನಾವು ಈ ನಿರ್ಧಾರ ಕೈಗೊಂಡಿದ್ದೇವೆ’’ ಎಂದು ಸಂಸದರಿಗೆ ತಿಳಿಸಿದರು.

ತುರ್ತುಪರಿಸ್ಥಿತಿ ಒಂದು ಗಾಯದ ಗುರುತು..

ನಾಳೆಗೆ ತುರ್ತು ಪರಿಸ್ಥಿತಿಗೆ 50 ವರ್ಷ ತುಂಬುತ್ತದೆ. ದೇಶದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ತುರ್ತುಪರಿಸ್ಥಿತಿ ಒಂದು ಗಾಯವಾಗಿ ಉಳಿದಿದೆ. 50 ವರ್ಷಗಳ ಹಿಂದಿನ ತಪ್ಪು ಮರುಕಳಿಸಬಾರದು ಎಂದು ಪ್ರಧಾನಿ ಮೋದಿ ಹೇಳಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ಸಂಸದರನ್ನು ತರಾಟೆಗೆ ತೆಗೆದುಕೊಂಡರು. “ಈ ದೇಶಕ್ಕೆ ಉತ್ತಮ ಮತ್ತು ಜವಾಬ್ದಾರಿಯುತ ವಿರೋಧ ಪಕ್ಷದ ಅಗತ್ಯವಿದೆ. ಪ್ರಜಾಸತ್ತಾತ್ಮಕ ಸಭ್ಯತೆಯನ್ನು ಕಾಪಾಡಲು ಸಾಮಾನ್ಯ ನಾಗರಿಕರ ಆಶಯಗಳಿಗೆ ಅನುಗುಣವಾಗಿ ವಿರೋಧ ಪಕ್ಷಗಳು ಕಾರ್ಯನಿರ್ವಹಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಜನರು ನಾಟಕಗಳು ಮತ್ತು ಗೊಂದಲಗಳನ್ನು ಬಯಸುವುದಿಲ್ಲ. ಘೋಷಣೆಗಳನ್ನು ನಿರೀಕ್ಷಿಸಬೇಡಿ. ಪ್ರತಿಪಕ್ಷಗಳು ಕೂಡ ಜನರ ಆಶೋತ್ತರಗಳನ್ನು ಈಡೇರಿಸಲು ಸಹಕರಿಸಬೇಕು,’’ ಎಂದು ಪ್ರಧಾನಿ ಹಿತವಚನ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು