Friday, June 14, 2024

ಸತ್ಯ | ನ್ಯಾಯ |ಧರ್ಮ

ಮಧ್ಯಂತರ ಜಾಮೀನಿನ ಮೇಲೆ ಇರುವಾಗ ಮಾಧ್ಯಮಗಳೊಂದಿಗೆ ಮಾತನಾಡಬೇಡಿ: ಉಮರ್ ಖಾಲಿದ್‌ಗೆ ದೆಹಲಿ ಕೋರ್ಟ್ ಸೂಚನೆ

ಹೊಸದಿಲ್ಲಿ: 2020 ರ ಈಶಾನ್ಯ ದೆಹಲಿ ಗಲಭೆಯ ಆರೋಪಿಯಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್‌ ಅವರಿಗೆ ತನ್ನ ಸಹೋದರಿಯ ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ನೀಡುವಾಗ ಮಾಧ್ಯಮಗಳೊಂದಿಗೆ ಮಾತನಾಡಬಾರದು ಅಥವಾ ಸಂದರ್ಶನಗಳನ್ನು ನೀಡಬಾರದು ಎಂದು ದೆಹಲಿ ಕೋರ್ಟ್ ನಿರ್ದೇಶಿಸಿದೆ.

ತನ್ನ ಸಹೋದರಿಯ ವಿವಾಹ ಸಂಬಂಧಿತ ಸಮಾರಂಭಗಳಲ್ಲಿ ಭಾಗವಹಿಸಲು ಸೋಮವಾರ ಉಮರ್ ಖಾಲಿದ್ ಅವರನ್ನು ಒಂದು ವಾರದವರೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿದ ನ್ಯಾಯಾಲಯವು ಹಲವಾರು ಷರತ್ತುಗಳನ್ನು ವಿಧಿಸಿದೆ.

ಡಿಸೆಂಬರ್ 20 ರಿಂದ ಜನವರಿ 3 ರವರೆಗೆ ಎರಡು ವಾರಗಳ ಮಧ್ಯಂತರ ಜಾಮೀನು ಕೋರಿ ಉಮರ್ ಖಾಲಿದ್ ಅರ್ಜಿ ಸಲ್ಲಿಸಿದ್ದರು.

ಈ ಹಿನ್ನಲೆಯಲ್ಲಿ ʼಆರೋಪಿಯ ಒಡಹುಟ್ಟಿದ ತಂಗಿಯ ವಿವಾಹದ ದೃಷ್ಟಿಯಿಂದ, ಮದುವೆಗೆ ಸಂಬಂಧಿಸಿದ ಸಮಾರಂಭಗಳಲ್ಲಿ ಭಾಗವಹಿಸಲು ಮಧ್ಯಂತರ ಜಾಮೀನು ನೀಡಲು ದೆಹಲಿ ನ್ಯಾಯಾಲಯವು ಒಲವು ತೋರಿದ್ದು, ಕಾನೂನು ಕ್ರಮಗಳ ಆತಂಕಗಳಿಗೆ ಸಂಬಂಧಿಸಿದಂತೆ, ಜಾಮೀನಿನಲ್ಲಿ ಷರತ್ತುಗಳನ್ನು ಲಗತ್ತಿಸುವ ಮೂಲಕ ಕಾಳಜಿ ವಹಿಸಬಹುದುʼ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಮಂಗಳವಾರದ ಆದೇಶದಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 26 ರಿಂದ 28 ರವರೆಗೆ ವಿವಾಹ ಸಂಬಂಧಿತ ಕಾರ್ಯಕ್ರಮಗಳು ನಡೆಯಬೇಕಾಗಿತ್ತು ಎಂದು ಉಲ್ಲೇಖಿಸಿದ ನ್ಯಾಯಾಧೀಶರು, ಡಿಸೆಂಬರ್ 23 ರಿಂದ ಏಳು ದಿನಗಳ ಕಾಲ ಮಧ್ಯಂತರ ಜಾಮೀನು ನೀಡಲು ಸೂಕ್ತವಾಗಿದೆ ಎಂದು ಹೇಳಿದರು. ನಂತರ ಡಿಸೆಂಬರ್ 30 ರಂದು ಶರಣಾಗಬೇಕು ಎಂದು ಆದೇಶಿಸಿದ್ದಾರೆ.

ʼಅದರಂತೆ ಅರ್ಜಿದಾರರು ಅಥವಾ ಆರೋಪಿ ಉಮರ್ ಖಾಲಿದ್ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಲಾಗಿದ್ದು, ಇಬ್ಬರು ಸಾಕ್ಷೀದಾರರೊಂದಿಗೆ ₹ 25,000 ಮೊತ್ತದ ವೈಯಕ್ತಿಕ ಬಾಂಡ್‌ ಅನ್ನು ಒದಗಿಸಿದ ಮೇಲೆ ಜಾಮೀನು ನೀಡಿದ್ದು, ನಂತರ ಉಮರ್ ಖಾಲಿದ್ ಅವರ ಜಾಮೀನನ್ನು ವಿಸ್ತರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ʼಆರೋಪಿಯು ಬಿಡುಗಡೆಯಾದ ನಂತರ  ಯಾವುದೇ ಸಾಕ್ಷಿದಾರರನ್ನು ಸಂಪರ್ಕಿಸಬಾರದು ಅಥವಾ ಸಾಕ್ಷ್ಯಗಳನ್ನು ಹಾಳುಮಾಡುಬಾರದು ಮತ್ತು ತನಿಖಾಧಿಕಾರಿಗೆ (ಐಒ) ಅವರ ಮೊಬೈಲ್ (ಫೋನ್) ಸಂಖ್ಯೆಯನ್ನು ಒದಗಿಸಬೇಕು ಮತ್ತು ಮಧ್ಯಂತರ ಜಾಮೀನಿನ ಅವಧಿಯವರೆಗೆ ಅವರ ಮೊಬೈಲ್ ಫೋನ್ ಅನ್ನು ತೆರೆದಿಡಬೇಕುʼಎಂದು ನ್ಯಾಯಾಲಯ ಹೇಳಿದೆ.

ʼಸಾಮಾಜಿಕ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮಕ್ಕೆ ಮಾತನಾಡದೆ ಅಥವಾ ಯಾವುದೇ ಸಂದರ್ಶನಗಳನ್ನು ನೀಡದೇ, ಪ್ರತಿದಿನ ವೀಡಿಯೊ ಕರೆಗಳ ಮೂಲಕ ಐಒ ಅವರನ್ನು ಸಂಪರ್ಕಿಸುವಂತೆ ನ್ಯಾಯಾಲಯವು ಉಮರ್ ಖಾಲಿದ್ ಅವರಿಗೆ ನಿರ್ದೇಶನ ನೀಡಿದೆ.

ಅವರು ಸಾರ್ವಜನಿಕರ ಯಾವುದೇ ಸದಸ್ಯರನ್ನು ಭೇಟಿಯಾಗಬಾರದು. ಮದುವೆ ಸಮಾರಂಭದ ಸಮಯದಲ್ಲಿ ತನ್ನ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಂವಹನ ನಡೆಸಬಹದು, ಆದರೆ ಡಿಸೆಂಬರ್ 26, 27 ಮತ್ತು 28 ರಂದು ನಿಗದಿತ ಸ್ಥಳದಲ್ಲಿ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಹೊರತುಪಡಿಸಿʼ ಅವರು ಸಂಪೂರ್ಣ ಮಧ್ಯಂತರ ಜಾಮೀನಿನ ಅವಧಿಯಲ್ಲಿ, ಅವನು ಮನೆಯಲ್ಲಿಯೇ ಇರುಬೇಕು ಎಂದು ನ್ಯಾಯಾಲಯ ಹೇಳಿದೆ. ಪೊಲೀಸರು ಮನೆಯಿಂದ ಹೊರಗೆ ಕಾವಲು ಕಾಯಬಹುದು ಆದರೆ ಆವರಣದೊಳಗೆ ಹೋಗುವ ಆಗಿಲ್ಲ. ಹಾಗಯೇ ಡಿಸೆಂಬರ್ 30 ರಂದು ಸಂಬಂಧಪಟ್ಟ ಜೈಲು ಅಧೀಕ್ಷಕರ ಮುಂದೆ ಶರಣಾಗುವಂತೆ ನ್ಯಾಯಾಲಯವು ಖಾಲಿದ್ ಗೆ ನಿರ್ದೇಶಿಸಿದೆ.

2020ರ ಗಲಭೆಯಲ್ಲಿ 53 ಮಂದಿ ಮೃತಪಟ್ಟು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದ, ಈಶಾನ್ಯ ದೆಹಲಿ ಗಲಭೆಯ ಮಾಸ್ಟರ್ ಮೈಂಡ್ ಎಂದು ಆರೋಪಿಸಿ ಖಾಲಿದ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರುದ್ಧದ ಪ್ರತಿಭಟನೆಗಳ ಸಮಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ಉಮರ್ ಖಾಲಿದ್ ಅವರನ್ನು ಸೆಪ್ಟೆಂಬರ್ 2020 ರಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಅವರ ನಿಯಮಿತ ಜಾಮೀನು ಅರ್ಜಿಗಳನ್ನು ಪ್ರಸ್ತುತ ಸೆಷನ್ಸ್ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು, ತದನಂತರ ಡಿಸೆಂಬರ್ 3 ರಂದು ನಡೆದ ಗಲಭೆಗೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು