Saturday, October 4, 2025

ಸತ್ಯ | ನ್ಯಾಯ |ಧರ್ಮ

ದೋಸೆ ತಿನ್ನಲು ಯಾವುದರಲ್ಲಿ ಬರಬೇಕು?: ʼತೇಜಸ್ವಿ ಸೂರ್ಯʼಗೆ ಕಾಂಗ್ರೆಸ್‌ ಪ್ರಶ್ನೆ

ಬೆಂಗಳೂರು: ಬೆಂಗಳೂರು ಪ್ರವಾಹ ಪರಿಸ್ಥಿತಿಯಲ್ಲಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುವುದರ ನಡುವೆಯೂ ಸಂಸದ ತೇಜಸ್ವಿ ಸೂರ್ಯ ಅವರು ಟೆಂಪ್ಟ್‌ ಆಗಿ ದೋಸೆ ತಿನ್ನಲು ಹೋಗಿರುವುದರ ಬಗ್ಗೆ ರಾಜ್ಯ ಕಾಂಗ್ರೆಸ್‌ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್‌, ಮಳೆಯಲ್ಲಿ ನರಳುವವರ ನೋಡಿ ಟೆಂಪ್ಟ್ ಆಗದೆ, ಬೆಣ್ಣೆ ದೋಸೆಗೆ ಟೆಂಪ್ಟ್ ಆಗಿರುವ ಮಾನ್ಯ ಸಂಸದ ಮಹಾಶಯ ತೇಜಸ್ವಿ ಸೂರ್ಯ ಅವರೇ, ಬೆಣ್ಣೆ ದೋಸೆ ತಿನ್ನಲು ಸಾತ್ವಿಕ ಹೋಟೆಲ್‌ಗೆ ಯಾವುದರಲ್ಲಿ ಬರಬೇಕು? ಟ್ರಾಕ್ಟರ್‌ನಲ್ಲೋ? ಜೆಸಿಬಿಯಲ್ಲೋ? ದೋಣಿಯಲ್ಲೋ? ಬುಲ್‌ಬುಲ್ ಹಕ್ಕಿಯ ರೆಕ್ಕೆಯ ಮೇಲೋ? ಎಂದು ವ್ಯಂಗ್ಯವಾಡಿದೆ.

ಮತಿ ‘ದೋಷ’ ಇರುವವರನ್ನು ಆಯ್ಕೆ ಮಾಡಿದರೆ, ಜನ ಮುಳುಗುವಾಗ ‘ದೋಸೆ’ ತಿನ್ನಲು ಹೋಗುತ್ತಾರೆ! ಬೆಂಗಳೂರು ಮುಳುಗಿದೆ, ಜನತೆ ಪರದಾಡುತ್ತಿದ್ದಾರೆ, ಆದರೆ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರಿಗೆ ದೋಸೆ ತಿನ್ನುವ ಟೆಂಪ್ಟ್ ಆಗಿದ್ಯಂತೆ! ಮಕ್ಕಳಾಟ ಆಡಿಕೊಂಡಿದ್ದ ಅಪ್ರಬುದ್ಧರನ್ನು ಸಂಸದರನ್ನಾಗಿಸಿದರೆ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಅಸಮಧಾನ ವ್ಯಕ್ತಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page