Tuesday, October 21, 2025

ಸತ್ಯ | ನ್ಯಾಯ |ಧರ್ಮ

ಹಾಸನ ಜಿಲ್ಲೆಯನ್ನ ಗರ್ಭಕೋಶ ಕೊರಳಿನ ಕ್ಯಾನ್ಸರ್ ಮುಕ್ತರನ್ನಾಗಿಸಲು ಡಾ. ಪ್ರೇಮಲತಾ ಕರೆ

ಹಾಸನ : ನಮ್ಮ ಹಾಸನ ಜಿಲ್ಲೆಯ ಜನತೆ ಗರ್ಭಕೋಶ ಕೊರಳಿನ ಕ್ಯಾನ್ಸರ್ ಮುಕ್ತರಾಗಬೇಕು ಎನ್ನುವುದು ನಮ್ಮ ಒಂದು ಉದ್ದೇಶದ ನಿಟ್ಟಿನಲ್ಲಿ ಲಸಿಕಾ ಅಭಿಯಾನವನ್ನು ಏರ್ಪಡಿಸಲಾಗಿದೆ ಎಂದು ಹಾಸನ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ಪ್ರೇಮಲತಾ ತಿಳಿಸಿದರು. ನಗರದ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಕಾಲೇಜು ಹಾಗೂ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀ ತಜ್ಞರ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಗರ್ಭಕೋಶದ ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಎಚ್‌ಪಿವಿ ಲಸಿಕಾ ಅಭಿಯಾನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಮಾತ್ರವಲ್ಲ. ತಿಳುವಳಿಕೆ ನೀಡುವುದಾಗಿದೆ. ಕ್ಯಾನ್ಸರ್ ತಡೆಗಟ್ಟಲು ಕೈಜೋಡಿಸಬೇಕು. ನಮ್ಮ ಉದ್ದೇಶ ಲಸಿಕೆ ನೀಡುವುದು ಒಂದೆ ಅಲ್ಲ. ಕ್ಯಾನ್ಸರ್ ತಡೆಗಟ್ಟುವ ಹಾದಿಯಲ್ಲಿ ಮುಂದಾಗಿದ್ದೇವೆ.

ಗರ್ಭಕಂಠದ ಕ್ಯಾನ್ಸರ್ 51 ಕೋಟಿಗೂ ಅಧಿಕರು ಅಪಾಯದಲ್ಲಿದ್ದಾರೆ ಹೂಮನ್ ಪ್ಯಾಪಿಲೋಮಾ ವೈರಸ್ ಎಂಬ ವೈರಸ್‌ನಿಂದ ಉಂಟಾಗುತ್ತಿದ್ದು, ಎಚ್‌ಪಿವಿ ಸೋಂಕಿಗೆ ಒಳಗಾದ ಎಲ್ಲಾ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನ ಅಪಾಯವನ್ನು ಹೊಂದಿದ್ದಾರೆ ಎಂದರು. ಭಾರತದಲ್ಲಿ 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 51 ಕೋಟಿಗೂ ಹೆಚ್ಚು ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯದಲ್ಲಿದ್ದಾರೆ ಎಂದು ಇಗಾಗಲೇ ಅಂದಾಜಿಸಲಾಗಿದ್ದು, ಒಂದು ಒಳ್ಳೆಯ ಸಂಗತಿಯೆಂದರೆ ಈ ಕ್ಯಾನ್ಸರ್‌ಅನ್ನು ಲಸಿಕೆ ನೀಡುವಿಕೆಯ ಮೂಲಕ ತಡೆಗಟ್ಟಬಹುದಾಗಿದೆ ಎಂದು ಹೇಳಿದರು. ಸಂಘದ ವತಿಯಿಂದ ಇಗಾಗಲೇ ಉಚಿತವಾಗಿ ಲಸಿಕೆಯನ್ನು ಹಾಕುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇಗಾಗಲೇ 14 ವರ್ಷದ ಮಕ್ಕಳಿಗೆ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೂ ಲಸಿಕೆಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ರೋಗ ತಜ್ಞರ ಸಂಘದ ನಿಕಟಪೂರ್ವ ಅಧ್ಯಕ್ಷೆ ಭಾರತೀ ರಾಜಶೇಖರ್ ಮಾತನಾಡಿ, ಮಾಜಿ ಅಧ್ಯಕ್ಷೆ ಡಾ. ಭಾರತಿ ರಾಜಶೇಖರ್ ಮಾತನಾಡಿ, ಎಲ್ಲೆಡೆ ಕಾಣಿಸಿಕೊಂಡಿರುವ ಗರ್ಭಕಂಠದ ಕ್ಯಾನ್ಸರ್ ನಮ್ಮ ಮಹಿಳೆಯರಲ್ಲಿ ಹೆಚ್ಚು ಇದ್ದು, ಭಾರತದಲ್ಲಿ ಪ್ರತಿ 8 ನಿಮಿಷಕ್ಕೆ ಒಬ್ಬ ಮಹಿಳೆ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದರು. ವಿಶ್ವಾದ್ಯಂತ ಮಹಿಳೆಯರಲ್ಲಿನ 4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಇದಾಗಿದೆ. ಬಹುಪಾಲು ಸಮಯ ಇದು 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಕಂಡುಬರುತ್ತದೆ. ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಪ್ರತಿದಿನ ಇನ್ನೂರು ಮಹಿಳೆಯರು ಸಾಯುತ್ತಾರೆ ಮತ್ತು ಭಾರತದಲ್ಲಿ ವಾರ್ಷಿಕವಾಗಿ ಸುಮಾರು 1.24 ಲಕ್ಷ ಹೊಸ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತವೆ ಎಂದರು. ಸರಕಾರದ ವತಿಯಿಂದ ಕ್ಯಾನ್ಸರ್ ಮುಕ್ತ ಅಭಿಯಾನಕ್ಕೆ ಸಹಕಾರ ನೀಡಿದು, ಪ್ರತಿಯೊಬ್ಬ ಹೆಣ್ಣು ಗರ್ಬಕೋಶ, ಹಾಗೂ ಸ್ತನಗಳ ಪರೀಕ್ಷೆಯನ್ನು ಆಗಾಗ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಹಿಮ್ಸ್ ನಿರ್ದೇಶಕ ಡಾ. ಡಿ. ರಾಜಣ್ಣ, ಕಾರ್ಯದರ್ಶಿ ಡಾ. ಇಂಪಾನ, ಡಾ. ಪ್ರತಿಕ್ಷಾ, ಡಾ. ಗಿರೀಜಾ, ಡಾ. ಹೇಮಾಲತಾ, ಹೆಚ್.ಓ.ಡಿ. ಡಾ. ಪ್ರಕಾಶ್, ಇತರರು ಉಪಸ್ಥಿತರಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page