ಬ್ರಿಟಿಷ್ ಪೌರತ್ವ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ರಕ್ಷಣೆ: ಮೋದಿ ಮತ್ತು ಶಾ ವಿರುದ್ಧ ಕಾನೂನು ಕ್ರಮದ ಬೆದರಿಕೆ ಹಾಕಿದ ಸುಬ್ರಹ್ಮಣ್ಯ ಸ್ವಾಮಿ

ಸುಬ್ರಹ್ಮಣ್ಯ ಸ್ವಾಮಿ ನವದೆಹಲಿ: ಬ್ರಿಟನ್ ಪೌರತ್ವ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಕ್ಷಿಸುತ್ತಿರುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಹಿರಿಯ ನಾಯಕ ಸುಬ್ರಹ್ಮಣ್ಯ ಸ್ವಾಮಿ ಶನಿವಾರ ಎಚ್ಚರಿಕೆ ನೀಡಿದ್ದಾರೆ.

ರಾಹುಲ್ ಅವರು 2003ರಲ್ಲಿ ಬ್ರಿಟಿಷ್ ಪೌರತ್ವ ಪಡೆದು ಲಂಡನ್‌ನಲ್ಲಿ ಬ್ಯಾಕ್-ಆಪ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದಾರೆ, ಆದ್ದರಿಂದ ಅವರ ಭಾರತೀಯ ಪೌರತ್ವ ಅಮಾನ್ಯ ಎಂದು ಸುಬ್ರಹ್ಮಣ್ಯ ಸ್ವಾಮಿ ಆರೋಪಿಸಿದ್ದಾರೆ.

ರಾಹುಲ್ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮೋದಿ ಮತ್ತು ಶಾ ಅವರನ್ನು ಸ್ವಾಮಿ ತಮ್ಮ ಟ್ವಿಟರ್‌ ಪೋಸ್ಟ್ ಮೂಲಕ ಕೇಂದ್ರ ಸಚಿವಾಲಯವನ್ನು ಪ್ರಶ್ನಿಸಿದ್ದಾರೆ.

ಈ ವಿಷಯದ ಕುರಿತು ಅವರು 2019ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನೀಡಿದ ದೂರಿನ ಪ್ರತಿಯನ್ನು ಈ ಪೋಸ್ಟ್‌ಗೆ ಲಗತ್ತಿಸಲಾಗಿದೆ. ಆದರೆ, ಈ ದೂರಿನ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ರಾಹುಲ್ ಗಾಂಧಿಗೆ ನೋಟಿಸ್ ನೀಡಿದೆ ಎಂದು ಹೇಳಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು