Saturday, June 15, 2024

ಸತ್ಯ | ನ್ಯಾಯ |ಧರ್ಮ

ವೇಗದ ಬೌಲರ್‌ಗಳಿಗೆ ಬಿಜಿನೆಸ್‌ ಕ್ಲಾಸ್ ಸೀಟ್‌ ಬಿಟ್ಟುಕೊಟ್ಟ ದ್ರಾವಿಡ್‌, ಕೊಹ್ಲಿ, ರೋಹಿತ್‌

ಅಡಿಲೇಡ್‌ ಓವಲ್‌ (ಆಸ್ಟ್ರೇಲಿಯಾ): ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಈಗಾಗಲೇ ಸೆಮಿಫೈನಲ್‌ ತಲುಪಿರುವ ಭಾರತ ತಂಡದ ಆಟಗಾರರು ಪಂದ್ಯಾವಳಿ ಆರಂಭವಾದಗಿನಿಂದಲೂ ವಿಮಾನಗಳಲ್ಲಿ ಸಾಕಷ್ಟು ಮೈಲಿಗಳ ದೂರದ ಪ್ರಯಾಣ ನಡೆಸುತ್ತಿದ್ದು, ಪ್ರಯಾಣದ ಸಂದರ್ಭದಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳನ್ನು ಬಿಟ್ಟುಕೊಟ್ಟಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

ವಿಮಾನದಲ್ಲಿ ಪ್ರಯಾಣಿಸುವವರಿಗೆ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳು, ಮತ್ತು ಎಕನಮಿ ಕ್ಲಾಸ್‌ ಸೀಟ್‌ಗಳಲ್ಲಿ ಪ್ರಯಾಣ ನಡೆಸಬಹುದಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಾನದಂಡಗಳ ಪ್ರಕಾರ, ಸಾಮಾನ್ಯವಾಗಿ ತಂಡದ ಕೋಚ್, ನಾಯಕ, ಉಪನಾಯಕ ಮತ್ತು ಮ್ಯಾನೇಜರ್‌ಗೆ ಬಿಸಿನೆಸ್‌ ಕ್ಲಾಸ್ ಸೀಟ್‌ಗಳು ಮತ್ತು ಉಳಿದ ಆಟಗಾರರಿಗೆ ಎಕನಮಿ ಕ್ಲಾಸ್‌ ಸೀಟ್‌ಗಳು ನೋಂದಣಿಯಾಗಿರುತ್ತವೆ.

ಸಾಮಾನ್ಯವಾಗಿ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳಲ್ಲಿ ಪ್ರಯಾಣಿಕರು ಕಾಲುಗಳನ್ನು ನೀಡಿಕೊಂಡು ಆರಾಮದಾಯಕ ಪ್ರಯಾಣ ನಡೆಸಬಹುದಾಗಿದೆ. ಆದರೆ ಎಕನಮಿ ಕ್ಲಾಸ್‌ ಸೀಟ್‌ಗಳಲ್ಲಿ ಕೊಂಚ ಇಕ್ಕಟ್ಟು ಇರುವುದರಿಂದ ಪ್ರಯಾಣಿಕರು ಬಿಸಿನೆಸ್‌ ಕ್ಲಾಸ್‌ನಷ್ಟು ಆರಾಮದಾಯಕ ಪ್ರಯಾಣ ನಡೆಸಲು ಸಾಧ್ಯವಾಗುವುದಿಲ್ಲ.

ವೇಗದ ಬೌಲರ್‌ಗಳು ಮೈದಾನದಲ್ಲಿ ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ, ಬೆವರು ಹರಿಸಬೇಕಾಗುತ್ತದೆ. ಇತರ ಆಟಗಾರರಿಗಿಂತ ಹೆಚ್ಚು ವೇಗದ ಬೌಲರ್‌ಗಳ ಕಾಲುಗಳಿಗೆ ವಿಶ್ರಾಂತಿ ಅಗತ್ಯವಾಗಿರುತ್ತದೆ. ಆದರೆ ಪ್ರಯಾಣದ ಸಮಯದಲ್ಲಿ ತಂಡದ ವೇಗದ ಬೌಲರ್‌ಗಳು ಎಕನಮಿ ಕ್ಲಾಸ್‌ ಸೀಟ್‌ಗಳಲ್ಲಿ ಪ್ರಯಾಣಿಸುವುದರಿಂದ, ಅವರಿಗೆ ಆರಾಮದಾಯಕ ವಿಶ್ರಾಂತಿ ಸಿಗುವುದಿಲ್ಲ.

ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರರಾದ ರಾಹುಲ್‌ ದ್ರಾವಿಡ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ತಮ್ಮ ಸೀಟುಗಳನ್ನು ತಂಡದ ವೇಗಿ ಬೌಲರ್‌ಗಳಾದ ಮಹಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಹಾರ್ದಿಕ್‌ ಪಾಂಡ್ಯ, ಮತ್ತು ಅರ್ಶದೀಪ್‌ ಸಿಂಗ್‌ ಅವರಿಗೆ aಬಿಟ್ಟುಕೊಟ್ಟು, ಆಟಗಾರರ ಬಗ್ಗೆ ಕಾಳಜಿ ತೋರಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು