Home ಬ್ರೇಕಿಂಗ್ ಸುದ್ದಿ ಚಾ ಕುಡಿಯುತ್ತಲೇ ಕುಸಿದು ಬಿದ್ದು ಚಾಲಕ – ದಿಢೀರ್ ಮರಣ

ಚಾ ಕುಡಿಯುತ್ತಲೇ ಕುಸಿದು ಬಿದ್ದು ಚಾಲಕ – ದಿಢೀರ್ ಮರಣ

ಹಾಸನ: ಟೀ ಕುಡಿಯುತ್ತಿದ್ದ ಸಂದರ್ಭದಲ್ಲೇ ಕಂಟೇನರ್ ಚಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ನಡೆದಿದೆ.

ಮೃತರನ್ನು ಅಮರ್ ಸಿಂಗ್ ಪೈ (50) ಎಂದು ಗುರುತಿಸಲಾಗಿದೆ. ಅವರು ಉತ್ತರಪ್ರದೇಶದ ಬರೇಲಿ ಜಿಲ್ಲೆಯ ನೆಟ್‌ಪುರ ಗ್ರಾಮದ ನಿವಾಸಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ, ಮಂಗಳೂರು ಕಡೆಗೆ ಕಂಟೇನರ್ ಚಲಾಯಿಸುತ್ತಿದ್ದ ಅಮರ್ ಸಿಂಗ್ ಪೈ ಅವರು ಬಾಳ್ಳುಪೇಟೆಯಲ್ಲಿ ವಾಹನ ನಿಲ್ಲಿಸಿ ಕ್ಯಾಂಟೀನ್ ಮುಂದೆ ಟೀ ಕುಡಿಯುತ್ತಿದ್ದ ವೇಳೆ ದಿಢೀರ್ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಹೃದಯಾಘಾತವೇ ಸಾವಿಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.

ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಾಲಕ ಕುಸಿದು ಬೀಳುವ ದೃಶ್ಯ ದಾಖಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ.

You cannot copy content of this page

Exit mobile version