Wednesday, June 18, 2025

ಸತ್ಯ | ನ್ಯಾಯ |ಧರ್ಮ

ಡ್ರಗ್ಸ್‌ ಮಾರಾಟ : ಮಲಯಾಳಂ ಕಿರುತೆರೆ ಸಹನಟ ಸೇರಿದಂತೆ ಮೂವರ ಬಂಧನ

ಬೆಂಗಳೂರು : ಬೆಂಗಳೂರಿನಲ್ಲಿ ಮಾದಕ ವಸ್ತುಗಳ ದಂಧೆ ಹೆಚ್ಚಾಗಿದ್ದು ಡ್ರಗ್ಸ್‌ ಮಾರಾಟ ನಡೆಸುತ್ತಿದ್ದು ಅದರ ಜಾಲ ಹಿಡಿದು ಹೊರಟ ಎಚ್‌ಎಸ್‌ಆರ್ ಲೇಔಟ್‌ ಪೋಲೀಸರು, ಮಲಯಾಳಂನ ಕಿರುತೆರೆ ಸಹನಟ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ಸುಮಾರು ಯುವಕರು ಕೆಟ್ಟ ಚಟಗಳಿಗೆ ತುತ್ತಾಗುತ್ತಿದ್ದು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಿಕಾಂ ಪದವಿ  ಮುಗಿಸಿ ಕೆಲಸಕ್ಕೆ ಬಂದ ಯುವಕರಾದ ಶಾಹಿದ್‌ ಮತ್ತು ಜಿತಿನ್‌ ಎಂಬುವವರಲ್ಲಿ ಒಬ್ಬ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರಿಗೆ ಮಲಯಾಳಂ ನಟ ಶಿಯಾಜ್‌ನ ಪರಿಚಯವಾಗಿ ಮೂವರು ಡ್ರಗ್ಸ್‌ ಮಾರಾಟ ದಂಧೆಗೆ ಇಳಿದಿದ್ದರು. ಕೇರಳ ಮತ್ತು ಇತರೆ ರಾಜ್ಯಗಳ ಮೂಲದಿಂದ ಡ್ರಗ್ಸ್‌ ತರಿಸಿ ಕೆಲ ಶಾಲಾ ವಿದ್ಯಾರ್ಥಿಗಳಿಗೆ, ಖಾಸಗಿ ಕಂಪನಿ ಉದ್ಯೋಗಿಗಳಿಗೆ, ಕಾರ್ಮಿಕರಿಗೆ ಅದನ್ನು ಮಾರಾಟ ಮಾಡಿ ಬರುವ ಹಣದಲ್ಲಿ ಮೂವರು ಐಷಾರಾಮಿ ಜೀವನ ನಡೆಸುತ್ತಿದ್ದರು. ಹಾಗೇಯೇ ನಗರದಲ್ಲಿ ನಡೆಯುವ ರಾತ್ರಿ ಪಾರ್ಟಿಗಳಿಗೂ ಡಗ್ಸ್‌ ಪೂರೈಕೆ ಮಾಡುತ್ತಿದ್ದರು ಎಂದು ಮಾಹಿತಿ ಕೇಳಿಬಂದಿದ್ದು ಮೂವರನ್ನು ಪೋಲೀಸರು ಬಂಧಿಸಿದ್ದಾರೆ.

ಕೇರಳದ ಸಹನಟ ಶಿಯಾಜ್‌, ಮೊಹಮ್ಮದ್ ಶಾಹಿದ್‌ ಮತ್ತು ಮಂಗಲ್‌ ತೋಡಿ ಜಿತಿನ್‌ ಬಂಧಿತ ಆರೋಪಿಗಳಾಗಿದ್ದು ಇವರಿಂದ 12.50 ಲಕ್ಷ ರೂ ಮೌಲ್ಯದ ಎಂಡಿಎಂಎ ಹಾಗೂ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಮತ್ತು ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗಿತ್ತಿದೆ ಎಂದು ಎಚ್‌ಎಸ್‌ಆರ್ ಲೇಔಟ್‌ ಪೋಲೀಸರು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page