Thursday, September 11, 2025

ಸತ್ಯ | ನ್ಯಾಯ |ಧರ್ಮ

ಬಗರ್‌ಹುಕುಂ ಅರ್ಜಿ ವಿಲೇವಾರಿ ಅವ್ಯವಹಾರ ಡಿ.ಎಸ್.ಎಸ್ ವತಿಯಿಂದ ಪ್ರತಿಭಟನೆ

ಬೇಲೂರು :ಉಳ್ಳವರಿಗೆ ಮತ್ತು ರಾಜಕೀಯ ಪ್ರಭಾವಿಗಳಿಗೆ ಬಗರ್‌ಹುಕುಂ ಭೂಮಿ ಅರ್ಜಿ ವಿಲೇವಾರಿಯಾಗುತ್ತಿದ್ದು ದೀನದಲಿತರಿಗೆ ಮತ್ತು ಬಡವರಿಗೆ ಬಗರ್‌ಹುಕುಂ ಅರ್ಜಿ ವಿಲೇವಾರಿಯಲ್ಲಿ ಯಾವುದೇ ಪ್ರಯೋಜನ ವಾಗುತ್ತಿಲ್ಲ,ಶೀಘ್ರವೇ ಸಂಬಂಧ ಪಟ್ಟ ಅಧಿಕಾರಿಗಳು ದೀನದಲಿತರು ಮನೆಯನ್ನು ಕಟ್ಟಿಕೊಂಡು 94 ಸಿ ಅರ್ಜಿ ಹಾಕಿದ ಬಡವರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಅವರಿಗೆ ಹಕ್ಕುಪತ್ರ ಹಾಗೂ ಭೂಮಿಗಾಗಿ ಅರ್ಜಿ ನೀಡಿದವರಿಗೆ ಸಾಗುವಳಿ ಚೀಟಿ ನೀಡಬೇಕು ಇಲ್ಲವಾದರೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ಹೋರಾಟ ಅನಿವಾರ್ಯವೆಂದು ಎಚ್ಚರಿಕೆ ನೀಡಿದರು.

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಫಟನಾ ಸಂಚಾಲಕ ಅಂಬುಗ ಮಲ್ಲೇಶ್ ಮಾತನಾಡಿ ಹಲವು ದಶಕದಿಂದ ಭೂಮಿಯನ್ನು ಉಳುಮೆ ಮಾಡಿಕೊಂಡು ಕೃಷಿಕಾಯಕದಿಂದ ಬದುಕು ಕಟ್ಟಿಕೊಂಡು ಸಾವಿರಾರು ರೈತ ಕುಟುಂಬಗಳು ಸರ್ಕಾರದ ಬಗರ್‌ಹುಕುಂ ಅರ್ಜಿ ವಿಲೇವಾರಿ ನಮೂನೆ 505357 ಹಾಗೂ 94ಸಿ ಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ಮತ್ತು ಬಗರ್‌ಹುಕುಂ ಸಮಿತಿ ಉಳ್ಳವರಿಗೆ ಮತ್ತು ರಾಜಕೀಯ ಪ್ರಬಾವಿಗಳಿಗೆ ಸಾಗುವಳಿ ಚೀಟಿ ನೀಡುವ ಮೂಲಕ ದೀನ-ದಲಿತರ ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ ಸುಮಾರು 50 ವರ್ಷಗಳಿಂದ ಉಳುಮೆ ಮಾಡಿಕೊಂಡ ಬಂದ ದಲಿತರ ಭೂಮಿಗೆ ಸಾಗುವಳಿ ಚೀಟಿ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು ಈ ಸಂಬಂಧವೇ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯಾಧ್ಯಕ್ಷರಾದ ಮಾವಳ್ಳಿ ಶಂಕರ್ ನೇತೃತ್ವದಲ್ಲಿ ಬಡವರಿಗೆ ದೀನ ದಲಿತರಿಗೆ ಸೂಕ್ತ ಭೂಮಿ ಸಿಗಬೇಕು ಎಂಬ ಹಿನ್ನಲೆಯಲ್ಲಿ ಈಗಾಗಲೇ ಕಂದಾಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು,ಇಡೀ ರಾಜ್ಯವ್ಯಾಪಿ ಏಕಕಾಲದಲ್ಲಿ ಹೋರಾಟ ಹಮ್ಮಿಕೊಳ್ಳ ಲಾಗಿದೆ.ಸರ್ಕಾರ ಚಳುವಳಿಗಳನ್ನು ಹಗುರವಾಗಿ ತೆಗೆದುಕೊಳ್ಳದೆ ಅರ್ಹರಿಗೆ ಭೂಮಿ ವಿಲೇವಾರಿಗೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ತಾ. ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ರಾಜಣ್ಣ, ಪ್ರಗತಿಪರ ಸಂಘಟನೆಯ ಮುಖಂಡ ಸುದರ್ಶನ್, ನಿಂಗ ರಾಜ್, ಶಶಿಧರ್ ಮೌರ್ಯ, ನಿಂಗೇಗೌಡ,ಸ್ವಾಮಿ,ಶಿವಣ್ಣಇನ್ನು ಮುಂತಾದವರು ಹಾಜರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page