Tuesday, November 11, 2025

ಸತ್ಯ | ನ್ಯಾಯ |ಧರ್ಮ

ಆರ್‌ಎಸ್‌ಎಸ್ ಕುತಂತ್ರ ಖಂಡಿಸಿ ಡಿ.ಎಸ್.ಎಸ್‌ ಪ್ರತಿಭಟನೆ ಮನವಿ

ಹಾಸನ: ದೇಶದಲ್ಲಿ ಕೋಮು ಗಲಭೆ ಸೃಷ್ಠಿಸಿ ಜನರನ್ನು ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಮಾಡಲು ಕುತಂತ್ರ ಮಾಡುತ್ತಿರುವುದನ್ನು ಖಂಡಿಸಿ ಆರ್‌ಎಸ್‌ಎಸ್ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅರಕಲಗೂಡು ದುಮ್ಮಿ ಕೃಷ್ಣ ಮಾತನಾಡಿ, ದೇಶದ ಸಾಮಾಜಿಕ ಏಕತೆಯನ್ನು ಧರ್ಮದ ಆಧಾರದ ಮೇಲೆ ವಿಭಜಿಸಿ, ಬ್ರಾಹ್ಮಣ್ಯವಾದಿ ಆಡಳಿತವನ್ನು ಮುಂದುವರಿಸಲು ಆರ್‌ಎಸ್‌ಎಸ್ ಹಾಗೂ ಅದರ ಅಂಗಸಂಸ್ಥೆಗಳು ಪ್ರಯತ್ನಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು. ವಿವಿಧ ಪ್ರಭುದ್ಧ ಸಂಘಟನೆಗಳು ಹಾಗೂ ನಾಗರಿಕರು ಸರ್ಕಾರಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ರಾಷ್ಟ್ರಪಿತ ಮಹಾತ್ಮಾ ಗಾಂಧಿಯು ಕೊನೆಯ ದಿನಗಳಲ್ಲಿ ಎಚ್ಚರಿಸಿದ್ದ “ಧರ್ಮದ ಹೆಸರಿನಲ್ಲಿ ಹಗೆ ಹುಟ್ಟಿಸುವ ಶಕ್ತಿಗಳು ಭಾರತದ ಆತ್ಮವನ್ನು ಕೊಲ್ಲುತ್ತವೆ” ಎಂಬ ಮಾತುಗಳನ್ನು ಉಲ್ಲೇಖಿಸಿ, ಇಂದಿನ ಸನ್ನಿವೇಶದಲ್ಲಿ ಆರ್‌ಎಸ್‌ಎಸ್‌ನ ಚಟುವಟಿಕೆಗಳು ಆ ಎಚ್ಚರಿಕೆಯನ್ನು ಮತ್ತೆ ಸ್ಮರಿಸಲು ಕಾರಣವಾಗಿವೆ ಎಂದರು.ಆರ್‌ಎಸ್‌ಎಸ್ ಕುತಂತ್ರ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಎಡಿಸಿಗೆ ಮನವಿ

ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು 1950ರ ದಶಕದಲ್ಲಿಯೇ ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಮಹಾಸಭೆಯಂತಹ ಸಂಘಟನೆಗಳ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದರು. ಅವರು ಈ ಸಂಘಟನೆಗಳು ಸಂವಿಧಾನದ ವಿರುದ್ಧವಾಗಿದ್ದು, ಮನುವಾದಿ ಚಿಂತನೆಯ ಮೂಲಕ ಶೋಷಿತ ವರ್ಗದ ಹಕ್ಕುಗಳನ್ನು ಹಿಂಸಿಸುವ ಅಪಾಯವಿದೆ ಎಂದು ಹೇಳಿದರು.

ಆರ್‌ಎಸ್‌ಎಸ್ ಪ್ರಕಟಿಸುತ್ತಿದ್ದ ಆರ್ಗನೇಜರ್ ಪತ್ರಿಕೆಯಲ್ಲಿ “ಭಾರತ ಸಂವಿಧಾನದಲ್ಲಿ ಏನೂ ಇಲ್ಲ, ನಮ್ಮ ಸ್ಫೂರ್ತಿ ಪ್ರಾಚೀನ ಶ್ರುತಿ ಮತ್ತು ಸ್ಮೃತಿಗಳಲ್ಲಿದೆ” ಎಂಬ ನಿಲುವು ಪ್ರಕಟವಾದುದು ಅಂದಿನ ಅಂಬೇಡ್ಕರ್ ಬೆಂಬಲಿಗರನ್ನು ತೀವ್ರವಾಗಿ ಬೆಚ್ಚಿಬೀಳಿಸಿತ್ತು. ಇಂದಿನ ದಿನಗಳಲ್ಲಿ, ಆ ನಿಲುವಿನ ಪ್ರತಿಫಲವಾಗಿ ಮನುವಾದಿ ಚಿಂತನೆಗಳು ಮರುಬೆರಳು ಹಿಡಿಯುತ್ತಿವೆ ಎಂದು ಎಚ್ಚರಿಸಿದರು.

ಇತ್ತೀಚೆಗೆ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಘಟನೆ ರಾಷ್ಟ್ರದಾದ್ಯಂತ ಆಕ್ರೋಶ ಹುಟ್ಟಿಸಿದೆ. ಆತ “ಸನಾತನ ಧರ್ಮ ಉಳಿಸಲು ಶೂ ಎಸೆದಿದ್ದೇನೆ” ಎಂದು ಹೇಳಿರುವುದು ಕೇವಲ ವೈಯಕ್ತಿಕ ಹಗೆ ಅಲ್ಲ, ಅದು ಸಂವಿಧಾನದ ತತ್ತ್ವಗಳ ಮೇಲಿನ ಹಲ್ಲೆಯಾಗಿದೆ ಎಂದು ಮನವಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಪ್ರಭುದ್ಧ ವಲಯದವರು ಈ ಘಟನೆಗೆ ಕಠಿಣ ಕ್ರಮವನ್ನು ಒತ್ತಾಯಿಸುತ್ತಿದ್ದು, “ಸುಪ್ರೀಂ ಕೋರ್ಟ್ ಮೇಲೆ ನಡೆದ ಹಲ್ಲೆ ಅಂದರೆ ಭಾರತ ಸಂವಿಧಾನದ ಮೇಲಿನ ನೇರ ದಾಳಿ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಚಿವರಾದ ಪ್ರಿಯಾಂಕ ಖರ್ಗೆ ಅವರು ಆರ್‌ಎಸ್‌ಎಸ್‌ನ ಕಾನೂನು ಬಾಹಿರ ಪಂಥ ಸಂಚಲನ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ, ಒಬ್ಬ ಮನುವಾದಿ ಕಾರ್ಯಕರ್ತ ಅವರ ವಿರುದ್ಧ ವಾಟ್ಸಪ್ ಮೂಲಕ ಅಶ್ಲೀಲ ಪದಗಳನ್ನು ಬಳಸಿ, ಫೋನ್ ಮೂಲಕ ಜೀವ ಬೆದರಿಕೆ ಹಾಕಿರುವ ಘಟನೆ ರಾಷ್ಟ್ರವ್ಯಾಪಿ ಖಂಡನೆಗೆ ಗುರಿಯಾಗಿದೆ ಎಂದು ದೂರಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page