ಚೀನಾದಲ್ಲಿ ಮುಂಜಾನೆ ಸಂಭವಿಸಿದ ಭೂಕಂಪ ; ಎಚ್ಚರಿಕೆ ನೀಡಿದ ಭೂಕಂಪ ಜಾಲ ಕೇಂದ್ರ

ಚೀನಾದ ಲ್ಯಾಂಗ್‌ಫಾಂಗ್‌ನಲ್ಲಿರುವ ಯೋಂಗ್‌ಕಿಂಗ್ ಕೌಂಟಿಯಲ್ಲಿ ಬುಧವಾರ ಬೆಳಗಿನ ಜಾವ ತೀವ್ರ ಭೂಕಂಪ ಸಂಭವಿಸಿದೆ. ಆದರೆ ಈವರೆಗೆ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಬುಧವಾರ ಮುಂಜಾನೆ ಸಂಭವಿಸಿದ ಭೂಕಂಪವನ್ನು ಚೀನಾದಲ್ಲಿ ಭೂಕಂಪಗಳ ಮೇಲ್ವಿಚಾರಣೆ ಮಾಡುವ ಚೀನಾ ಭೂಕಂಪ ಜಾಲ ಕೇಂದ್ರ (CENC) ದೃಢಪಡಿಸಿದೆ. ಭೂಕಂಪದ ತೀವ್ರತೆ 4.2 ರಷ್ಟು ಇತ್ತು ಎಂದು CENC ತಿಳಿಸಿದೆ.

CENC ವರದಿಯ ಪ್ರಕಾರ, ಈ ಭೂಕಂಪವು ಮೇಲ್ಮೈಯಿಂದ 20 ಕಿ.ಮೀ ಆಳದಲ್ಲಿ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಚೀನಾದ ರಾಜಧಾನಿಯಿಂದ 55 ಕಿ.ಮೀ ದೂರದಲ್ಲಿದ್ದು, ಬೀಜಿಂಗ್‌ನಲ್ಲಿಯೂ ಕಂಪನದ ಅನುಭವವಾಗಿದೆ. ರಾಜಧಾನಿಯ ಅನೇಕ ಜನರು ತಮ್ಮ ಮೊಬೈಲ್‌ನಲ್ಲಿ ಭೂಕಂಪದ ಎಚ್ಚರಿಕೆಯನ್ನು ಸ್ವೀಕರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು