Tuesday, January 27, 2026

ಸತ್ಯ | ನ್ಯಾಯ |ಧರ್ಮ

ಇಂದು ಮೂರು ರಾಜ್ಯಗಳಿಗೆ ಚುನಾವಣೆ ಘೋಷಿಸಲಿದೆ ಚುನಾವಣಾ ಆಯೋಗ

ದೆಹಲಿ: ಭಾರತದ ಚುನಾವಣಾ ಆಯೋಗವು ಇಂದು ಮಧ್ಯಾಹ್ನ (ಆ.16) ಮೂರು ರಾಜ್ಯಗಳಿಗೆ ಚುನಾವಣಾ ದಿನಾಂಕಗಳನ್ನು ಘೋಷಿಸಲು ಸಜ್ಜಾಗಿದೆ.

ಈ ಸಂಬಂಧ ಚುನಾವಣಾ ಆಯೋಗವು ಮಾಧ್ಯಮ ಸಂಸ್ಥೆಗಳಿಗೆ ಇಂದು ಮಧ್ಯಾಹ್ನ ನಡೆಯಲಿರುವ ಪತ್ರಿಕಾಗೋಷ್ಟಿಗೆ ಆಹ್ವಾನ ನೀಡಿದೆ. ಆದರೆ ಆಹ್ವಾನದಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳ ಹೆಸರನ್ನು ತಿಳಿಸಲಾಗಿಲ್ಲ.

ಹರಿಯಾಣ ಮತ್ತು ಮಹಾರಾಷ್ಟ್ರದ ಶಾಸಕಾಂಗ ಸಭೆಗಳ ಅವಧಿಯು ಕ್ರಮವಾಗಿ ನವೆಂಬರ್ 3 ಮತ್ತು ನವೆಂಬರ್ 26 ರಂದು ಕೊನೆಗೊಳ್ಳಲಿದೆ. ಸುಪ್ರೀಂ ಕೋರ್ಟ್ ಜಮ್ಮು ಮತ್ತು ಕಾಶ್ಮೀರದಲ್ಲಿ‌ ಸೆಪ್ಟೆಂಬರ್‌ 30ರೊಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದ್ದು, ಆದೇಶಕ್ಕೆ ಅನುಗುಣವಾಗಿ ವಿಧಾನಸಭಾ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗ ಯೋಜಿಸಿದೆ.

ಚುನಾವಣಾ ಆಯೋಗವು ಈಗಾಗಲೇ ಹರ್ಯಾಣ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಮಹಾರಾಷ್ಟ್ರಕ್ಕೆ ಇನ್ನಷ್ಟೇ ಭೇಟಿ ನೀಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page