Monday, June 17, 2024

ಸತ್ಯ | ನ್ಯಾಯ |ಧರ್ಮ

“ಯುವಧ್ವನಿ-ಸ್ಫೂರ್ತಿ”ಯ ಪರಿಸರ ಸ್ನೇಹಿ ಸ್ವಾತಂತ್ರೋತ್ಸವ..!

ಭಾರತದಾದ್ಯಂತ 77ನೇ ಸ್ವಾತಂತ್ರ್ಯ ಸಂಭ್ರಮ. ಅದರ ಭಾಗವಾಗಿ ಬೆಂಗಳೂರಿನ “ಯುವಧ್ವನಿ ಡಿಬೇಟ್ ಕ್ಲಬ್” ಮತ್ತು “ಸ್ಫೂರ್ತಿ ಯುವಕವಿ ಬಳಗ” ಜಂಟಿಯಾಗಿ ಸ್ವಾತಂತ್ರ್ಯ ದಿನದ ಜೊತೆಗೆ ಪರಿಸರ ಸ್ನೇಹಿ ಕಾರ್ಯಕ್ರಮ ಆಯೋಜಿಸಿ ಮಾದರಿ ಸ್ವಾತಂತ್ರ್ಯ ದಿನಕ್ಕೆ ಸಾಕ್ಷಿಯಾಯಿತು.

“ಯುವಧ್ವನಿ ಡಿಬೇಟ್ ಕ್ಲಬ್” ಮತ್ತು “ಸ್ಫೂರ್ತಿ ಯುವಕವಿ ಬಳಗ”ದಿಂದ 1500 ಸಂಖ್ಯೆಯಲ್ಲಿ ಬೀಜವಿರುವ ಕಾಗದದ ಭಾವುಟವನ್ನು (Paper seed flag) ಖರೀದಿಸಿ ಹಂಚುವ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಜನ ಸಾಮಾನ್ಯರಿಗೆ ಪ್ಲಾಸ್ಟಿಕ್ ಭಾವುಟ ಬಳಸಬಾರದು ಎಂದು ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಹೊಸ ಮಾದರಿಯ ಬಾವುಟಗಳನ್ನು ಹತ್ತಕ್ಕೂ ಹೆಚ್ಚು ಶಾಲೆಗಳಿಗೆ ತೆರಳಿ ಮತ್ತು ವಿಧಾನಸೌಧ ಹಾಗೂ ಲಾಲ್ ಭಾಗ್ ಬಳಿ ಸಾರ್ವಜನಿಕರಿಗೆ ವಿತರಿಸಲಾಯಿತು.

ಈ ಮೂಲಕ ಪರಿಸರದ ಮೇಲೆ ಬೀರುವ ನಕಾರಾತ್ಮಕ ಪ್ರಭಾವ ಮತ್ತು ಸ್ವತಂತ್ರದ ಹಬ್ಬ ಮುಗಿದ ನಂತರ ಎಲ್ಲೆಂದರಲ್ಲಿ ಬಿಸಾಡಿ ದೇಶದ ಹೆಮ್ಮೆಯ ಭಾವುಟಕ್ಕೆ ಅಗೌರವ ತೋರುತ್ತಿರುವುದಕ್ಕೆ ಕಡಿವಾಣ ಹಾಕಲು ಎರಡು ತಂಡಗಳು ಈ ಒಂದು ಪ್ರಯತ್ನ ಮಾಡಿ ಯಶಸ್ವಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು