Wednesday, June 19, 2024

ಸತ್ಯ | ನ್ಯಾಯ |ಧರ್ಮ

ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗಳ ಮೇಲೆ ಇಡಿ ದಾಳಿ

ಬೆಂಗಳೂರು: ಕಾನೂನುಬಾಹಿರ ಚೀನಿ ಸಾಲದ ಅಪ್ಲಿಕೇಷನ್‌ಗಳ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು(ಇಡಿ) ಬೆಂಗಳೂರಿನಲ್ಲಿ ರೇಜರ್‌ಪೇ (Razorpay), ಪೇಟಿಎಂ (Paytm) ಮತ್ತು ಕ್ಯಾಶ್‌ಫ್ರೀ (Cashfree) ನಂತಹ ಆನ್‌ಲೈನ್ ಪಾವತಿ ಗೇಟ್‌ವೇಗಳ ಮೇಲೆ ದಾಳಿ ಮಾಡಿದೆ.

ಶನಿವಾರ ನಡೆಸಿದ ಈ ದಾಳಿಯ ಸಮಯದಲ್ಲಿ, ʼಚೀನಾದ ನಿಯಂತ್ರಿತ ಘಟಕಗಳಲ್ಲಿನ ಬ್ಯಾಂಕ್‌ ಖಾತೆಗಳು ಮತ್ತು ವ್ಯಾಪಾರಿ ಐಡಿಗಳಲ್ಲಿ ಇರಿಸಲಾಗಿದ್ದ 17 ಕೋಟಿ ಹಣವನ್ನು ವಶಪಡಿಸಿಕೊಂಡಿದೆʼ ಎಂದು ಇಡಿ ಅಧಿಕಾರಿಗಳು ತಿಳಿಸಿದರು.

ಈ ಘಟಕಗಳ ಕಾರ್ಯ ವಿಧಾನವು ಭಾರತೀಯರ ನಕಲಿ ದಾಖಲೆಗಳನ್ನು ಬಳಸಿ ನಿಷ್ಪ್ರಯೋಜಕ ನಿರ್ದೇಶಕರನ್ನಾಗಿ ಮಾಡುತ್ತಾರೆ ಎಂದು ಇಡಿ ಆರೋಪಿಸಿದೆ.

https://twitter.com/ani_digital/status/1565997913599123457?s=20&t=0Zg9AFUGdSlBqb31j3AwMQ

Related Articles

ಇತ್ತೀಚಿನ ಸುದ್ದಿಗಳು