Sunday, July 27, 2025

ಸತ್ಯ | ನ್ಯಾಯ |ಧರ್ಮ

Amazon ಮತ್ತು Flipkart ಮಾರಾಟಗಾರರ ಕಚೇರಿಗಳ ಮೇಲೆ ಇಡಿ ದಾಳಿ

ಹೊಸದೆಹಲಿ: ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಕಂಪನಿಗಳೊಂದಿಗೆ ವ್ಯಾಪಾರ ಮಾಡುವ ಕೆಲವು ಮಾರಾಟಗಾರರ ಮೇಲೆ ಇಡಿ ಗುರುವಾರ ದಾಳಿ ನಡೆಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ತನಿಖೆಯ ಭಾಗವಾಗಿ ದೆಹಲಿ, ಹರಿಯಾಣ (ಗುರುಗ್ರಾಮ), ತೆಲಂಗಾಣ (ಹೈದರಾಬಾದ್) ಮತ್ತು ಕರ್ನಾಟಕ (ಬೆಂಗಳೂರು)ಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಂಪನಿಗಳ ಕೆಲವು ಪ್ರಮುಖ ಮಾರಾಟಗಾರರು ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎರಡೂ ಕಂಪನಿಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆಯ್ದ ಮಾರಾಟಗಾರರ ಮೇಲೆ ಹೆಚ್ಚು ಒಲವು ತೋರುವ ಮೂಲಕ ವ್ಯಾಪಾರ ಸ್ಪರ್ಧೆಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿವೆ ಎಂದು ಭಾರತದ ಆಂಟಿಟ್ರಸ್ಟ್ ಸಂಸ್ಥೆಯು ಇತ್ತೀಚೆಗೆ ವರದಿ ಮಾಡಿದೆ. ಈ ಸುದ್ದಿ ಆಧರಿಸಿ ಇಡಿ ಶೋಧ ನಡೆಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page