Friday, June 14, 2024

ಸತ್ಯ | ನ್ಯಾಯ |ಧರ್ಮ

ಈ ಬಾರಿಯೂ ಪಟಾಕಿ ಮಾರಾಟ ಹಾಗೂ ವಿತರಣೆಗೆ ನಿರ್ಬಂಧ ಹೇರಿದ ದೆಹಲಿ ಸರ್ಕಾರ

ನವದೆಹಲಿ: ದೆಹಲಿಯ ಜನತೆಯನ್ನು ಮಾಲಿನ್ಯದ ಭೀತಿಯಿಂದ ಪಾರು ಮಾಡಲು ಕಳೆದ ವರ್ಷದಂತೆ ಈ ಬಾರಿಯೂ ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ, ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗುತ್ತಿದ್ದು, ಇದರಿಂದ ಜನರ ಪ್ರಾಣ ಉಳಿಸಬಹುದಾಗಿದೆ ಎಂದು ದೆಹಲಿ ಪರಿಸರ ಅಭಿವೃದ್ಧಿ ಸಚಿವ ಗೋಪಾಲ ರೈ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಈ ಬಾರಿ ದೆಹಲಿಯಲ್ಲಿ ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಹಾಗೂ ವಿತರಣೆಗೆ ನಿಷೇಧ ಹೇರಲಿದೆ. ಈ ನಿರ್ಬಂಧವು ಜನವರಿ 1, 2023 ರವರೆಗೆ ಜಾರಿಯಲ್ಲಿರುತ್ತದೆ. ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ದೆಹಲಿ ಪೊಲೀಸ್, ಡಿಪಿಸಿಸಿ ಮತ್ತು ಕಂದಾಯ ಇಲಾಖೆಯೊಂದಿಗೆ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು