Saturday, October 4, 2025

ಸತ್ಯ | ನ್ಯಾಯ |ಧರ್ಮ

ಇವಿಎಂ ಬಗ್ಗೆ ಅಪಸ್ವರ ಎತ್ತಿದ ಎಲಾನ್ ಮಸ್ಕ್ ಗೆ ಭಾರತೀಯ ಚುನಾವಣಾ ಆಯೋಗ ಸವಾಲು

ಎಲೆಕ್ಟ್ರಾನಿಕ್ ಓಟಿಂಗ್ ಮಷಿನ್ (EVM) ಬಗೆಗಿನ ಐಟಿ ದಿಗ್ಗಜ, ಸ್ಪೇಸ್ ಎಕ್ಸ್ (Space X) ಮಾಲಿಕ ಎಲಾನ್ ಮಸ್ಕ್ ಅವರ ಟ್ವಿಟ್ ನಂತರ ಭಾರತದಲ್ಲಿ ಇವಿಎಂ ಬಗೆಗಿನ ಚರ್ಚೆ ಈಗ ಮರುಜೀವ ಪಡೆದುಕೊಂಡಿದೆ. ಸದ್ಯ ಈ ವಿಚಾರವಾಗಿ ಭಾರತದ ಚುನಾವಣಾ ಆಯೋಗವು ಎಲಾನ್ ಮಸ್ಕ್​ಗೆ ಸವಾಲು ಹಾಕಿದೆ.

ಇವಿಎಂ ಬಳಕೆ ಬಗ್ಗೆ ಅಪಸ್ವರ ಎತ್ತಿರುವ ಎಲಾನ್ ಮಸ್ಕ್, ಇವಿಎಂ ಹ್ಯಾಕ್ ಮಾಡುವ ಸಾಧ್ಯತೆಯಿದೆ. ಇವಿಎಂ ಬಳಕೆ ಹಿಂಪಡೆಯಬೇಕು, ಈ ಹಿಂದೆ ಇದ್ದ ಬ್ಯಾಲೆಟ್ ಪೇಪರ್ ಬಳಕೆಯನ್ನೇ ಮರು ಸ್ಥಾಪಿಸಬೇಕು ಎಂಬಂತೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.

ಈ ಕುರಿತಾಗಿ ಟ್ವೀಟ್ ಮಾಡಿರುವ ಭಾರತದ ಚುನಾವಣಾ ಆಯೋಗ, ಇದು ಅಸಂಬದ್ಧ ಊಹಾಪೋಹವಾಗಿದ್ದು, ಭಾರತೀಯ ಚುನಾವಣೆಗಳ ವಿಶ್ವಾಸಾರ್ಹತೆಯನ್ನು ಕೆಡಿಸುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದೆ.

ಎಲಾನ್ ಮಸ್ಕ್ ಅವರೇ ಭಾರತಕ್ಕೆ ಬಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಬಳಸಲಾದ ಇವಿಎಂಗಳ ಹ್ಯಾಕಿಂಗ್ ಅನ್ನು ಪ್ರದರ್ಶಿಸಲು ನಾವು ನಿಮಗೆ ಸವಾಲು ಹಾಕುತ್ತೇವೆ ಎಂದು ಹೇಳಿದೆ.

ಎಲಾನ್ ಮಸ್ಕ್ ಟ್ವೀಟ್ ನ ನಂತರ ದೇಶದ ವಿಪಕ್ಷ ನಾಯಕರೂ ಈ ಬಗ್ಗೆ ಅಪಸ್ವರ ಎತ್ತಿದ್ದು, ಮಸ್ಕ್ ಮಾತಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಈ ಬಗ್ಗೆ ಬರೆದುಕೊಂಡಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವಿಎಂ ಬಳಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ 48 ಮತಗಳ ಅಂತರದಿಂದ ಶಿಂಧೆ ಬಣದ ಶಿವಸೇನೆ ಅಭ್ಯರ್ಥಿ ಜಯಿಸಿದ್ದರು. ಈ ವಿಚಾರ ಪ್ರಸ್ತಾಪ ಮಾಡಿ ಇವಿಎಂ ಅಕ್ರಮದ ಬಗ್ಗೆ ಶಂಕಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page