Home ವಿದೇಶ ಭಾರತದಲ್ಲಿ ಸ್ಟಾರ್‌ಲಿಂಕ್ ವಿಳಂಬಕ್ಕೆ ಮಸ್ಕ್ ಗರಂ; ದೇಶಕ್ಕೆ ನೀವೇ ಅಸಲಿ ಬಾಸ್ ಅಂತ ಗೊತ್ತಿರಲಿಲ್ಲ, ಕ್ಷಮಿಸಿ!...

ಭಾರತದಲ್ಲಿ ಸ್ಟಾರ್‌ಲಿಂಕ್ ವಿಳಂಬಕ್ಕೆ ಮಸ್ಕ್ ಗರಂ; ದೇಶಕ್ಕೆ ನೀವೇ ಅಸಲಿ ಬಾಸ್ ಅಂತ ಗೊತ್ತಿರಲಿಲ್ಲ, ಕ್ಷಮಿಸಿ! ಎಂದು ಮುಕೇಶ್ ಅಂಬಾನಿ ಕಾಲೆಳೆದ ಟೆಸ್ಲಾ ಮುಖ್ಯಸ್ಥ

0

ಭಾರತೀಯ ಮಾರುಕಟ್ಟೆಗೆ ತಮ್ಮ ಉಪಗ್ರಹ ಇಂಟರ್ನೆಟ್ ಜಾಲ ‘ಸ್ಟಾರ್‌ಲಿಂಕ್’ (Starlink) ಪ್ರವೇಶವು ನಿರಂತರವಾಗಿ ವಿಳಂಬವಾಗುತ್ತಿರುವುದಕ್ಕೆ ಜಾಗತಿಕ ಟೆಕ್ ದಿಗ್ಗಜ ಎಲಾನ್ ಮಸ್ಕ್ ಸತತ ಮೂರನೇ ದಿನವೂ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ವಿಚಾರದಲ್ಲಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ವಿರುದ್ಧ ಮತ್ತೆ ವಾಕ್ಪ್ರಹಾರ ನಡೆಸಿರುವ ಮಸ್ಕ್, ಅಂಬಾನಿಯವರನ್ನು ನೇರವಾಗಿ ಲೇವಡಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ (ಟ್ವಿಟರ್) ಪೋಸ್ಟ್ ಹಂಚಿಕೊಂಡಿರುವ ಮಸ್ಕ್, ಮುಕೇಶ್ ಅಂಬಾನಿ ಅವರನ್ನು “ಪ್ರೈಮ್ ಮಿನಿಸ್ಟರ್ ಅಂಬಾನಿ” (ಪ್ರಧಾನಿ ಅಂಬಾನಿ) ಎಂದು ವ್ಯಂಗ್ಯವಾಗಿ ಸಂಬೋಧಿಸಿದ್ದಾರೆ. “ಈ ದೇಶಕ್ಕೆ ನೀವೇ ನಿಜವಾದ ಬಾಸ್ ಎಂಬ ವಿಚಾರ ನನಗೆ ಗೊತ್ತಿರಲಿಲ್ಲ, ಅದಕ್ಕೆ ಕ್ಷಮೆಯಿರಲಿ!” ಎಂದು ವ್ಯಂಗ್ಯದ ಚಾಟಿ ಬೀಸಿದ್ದಾರೆ.

ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ತಮ್ಮದೇ ಏಕಸ್ವಾಮ್ಯ (Monopoly) ಮುಂದುವರಿಯಬೇಕೆಂಬುದು ಅಂಬಾನಿಯವರ ಹಠ ಎಂದು ಆಪಾದಿಸಿರುವ ಮಸ್ಕ್, “ಸ್ಟಾರ್‌ಲಿಂಕ್‌ಗೆ ಮಾರುಕಟ್ಟೆಯಲ್ಲಿ ಮುಕ್ತವಾಗಿ ಸ್ಪರ್ಧಿಸಲು ಅವಕಾಶ ನೀಡುತ್ತೀರಾ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ದೇಶದ ಕುಗ್ರಾಮಗಳು ಹಾಗೂ ದೂರದ ಪ್ರದೇಶಗಳಲ್ಲಿ ಗುಣಮಟ್ಟದ ಇಂಟರ್ನೆಟ್ ಸಂಪರ್ಕವಿಲ್ಲದೆ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಮತ್ತು ಸಣ್ಣ ವ್ಯಾಪಾರಿಗಳು ಜಾಗತಿಕ ಮಾರುಕಟ್ಟೆಯಿಂದ ದೂರ ಉಳಿಯುತ್ತಿದ್ದಾರೆ. ಇಂತಹ ಪ್ರದೇಶಗಳಿಗೆ ಸ್ಟಾರ್‌ಲಿಂಕ್ ಸೇವೆ ಲಭ್ಯವಾದರೆ ಜನರ ಬದುಕು ಗಣನೀಯವಾಗಿ ಸುಧಾರಿಸಲಿದೆ ಎಂದು ಮಸ್ಕ್ ವಾದಿಸಿದ್ದಾರೆ.

You cannot copy content of this page

Exit mobile version