Wednesday, June 26, 2024

ಸತ್ಯ | ನ್ಯಾಯ |ಧರ್ಮ

ಇಲಾನ್‌ ಮಸ್ಕ್‌ ವಿರುದ್ದ ಅರ್ಜಿ : ಮಹಿಳೆಗೆ ರೂ.25,000 ದಂಡ ವಿಧಿಸಿದ ದೆಹಲಿ ಹೈಕೋರ್ಟ್‌

ಹೊಸದಿಲ್ಲಿ : ಟ್ವಿಟರ್‌ ಖಾತೆ ನಿಷೇಧ ಮಾಡಿರುವ  ಪ್ರಕರಣದಲ್ಲಿ ಟ್ವಿಟರ್‌ ಮಾಲೀಕ ಹಾಗೂ ಉದ್ಯಮಿ ಇಲಾನ್‌ ಮಸ್ಕ್‌ ಅವರನ್ನು ಪ್ರತಿವಾದಿಯಾಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಡಿಂಪಲ್‌ ಕೌಲ್‌ ಅವರಿಗೆ ದೆಹಲಿ ಹೈಕೋರ್ಟ್‌ ಇಂದು ರೂ.25,000 ದಂಡ ವಿಧಿಸಿದೆ.

ಇಲಾನ್‌ ಮಸ್ಕ್‌ ಅವರು ಟ್ವಿಟರ್‌ ಅನ್ನು ಖರೀದಿಸಿದ್ದು, ಅದರ ಷೇರುಗಳನ್ನು ಸಹ ನ್ಯೂಯಾರ್ಕ್‌ ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿಲ್ಲ ಎಂದು ಡಿಂಪಲ್‌ ಕೌಲ್‌ ಅವರು  ವಕೀಲ ಮುಕೇಶ್‌ ಶರ್ಮಾ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿʼವಾಕ್‌ ಸ್ವಾತಂತ್ರ್ಯದ ಕುರಿತು ಮಸ್ಕ್‌ ಭಿನ್ನ ನಿಲುವು ಹೊಂದಿದ್ದು, ಸಂಬಂಧಪಟ್ಟ ದೇಶದ ಕಾನೂನಿನಡಿ ವಾಕ್‌ ಸ್ವಾತಂತ್ರ್ಯದ ಉಲ್ಲಂಘನೆಯಾಗದಿದ್ದ ಸಂದರ್ಭದಲ್ಲಿ ಟ್ವಿಟರ್‌ ತನ್ನ ಬಳಕೆದಾರರ ಖಾತೆಯನ್ನು ಸ್ಥಗಿತಗೊಳಿಸಬಾರದು, ಅವರ ವಾಕ್‌ ಸ್ವಾತಂತ್ರ್ಯವನ್ನು ನಿರ್ಬಂಧಿಸಬಾರದು ಎಂದು ಮಸ್ಕ್‌ ಹೇಳಿದ್ದಾರೆʼ ಎಂದು ವಿವರಿಸಿದ್ದರು.

ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯಶವಂತ್‌ ವರ್ಮಾ ನೇತೃತ್ವದ ಏಕಸದಸ್ಯ ಪೀಠವು “ಈ ಅರ್ಜಿಯನ್ನು ತಪ್ಪಾಗಿ ಪರಿಭಾವಿಸಿ ಸಲ್ಲಿಸಲಾಗಿದೆ. ಟ್ವಿಟರ್‌ ಸಂಸ್ಥೆಯನ್ನು ಈಗಾಗಲೇ ಪ್ರತಿನಿಧಿಸಿರುವಾಗ ಈ ಅರ್ಜಿಯನ್ನು ಸಲ್ಲಿಸುವ ಅಗತ್ಯವಿರಲಿಲ್ಲ. ಮತ್ತು ಈ ಅರ್ಜಿಯನ್ನು ವಜಾಗೊಳಿಸಿ ರೂ.25000 ದಂಡ ವಿಧಿಸಲಾಗಿದೆ.” ಎಂದು ಆದೇಶ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು