Sunday, July 27, 2025

ಸತ್ಯ | ನ್ಯಾಯ |ಧರ್ಮ

ಹಾಸನಾಂಬ ಜಾತ್ರೆ: ಪ್ಯಾರಾ ಗ್ಲೈಂಡಿಲಿಂಗ್, ಪ್ಯಾರಾಮೋಟರಿಂಗ್, ಹಾಟ್ ಏರ್ ಬಲೂನ್ ಹಾರಾಟಕ್ಕೆ ಗ್ರಹಣ ; ಸಿದ್ಧವಿದ್ರೂ ಹಾರಲು ಅವಕಾಶ ಸಿಕ್ಕಿಲ್ಲ

ಹಾಸನ: ಶ್ರೀ ಹಾಸನಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ನಗರದ ಬೂವನಹಳ್ಳಿ ಏರ್ಪೋರ್ಟ್‌ನಲ್ಲಿ ಪ್ಯಾರಾ ಗ್ಲೈಂಡಿಲಿಂಗ್, ಪ್ಯಾರಾಮೋಟರಿಂಗ್, ಹಾಟ್ ಏರ್ ಬಲೂನ್ ಹಾರಬೇಕಾಗಿತ್ತು. ಆದರೇ ಜಾಗದ ಅವಕಾಶ ಸಿಗದೇ ಬಂದಿದ್ದರಿಂದ ಯಂತ್ರೋಪಕರಣಗಳು ನಿಲ್ದಾಣದ ಹೊರಗೆ ಇರಬೇಕಾಗಿದೆ.

ಅಕ್ಟೋಬರ್ ೨೪ ರಿಂದ ನವೆಂಬರ್ ೩ರ ವರೆಗೂ ಆಕಾಶದಲಿ ಹಾರುವ ಕೆಲ ಆಕರ್ಷಣೆಯ ಆಟಗಳನ್ನು ಈ ಬಾರಿ ವಿಶೇಷವಾಗಿ ತರಿಸಲಾಗಿ ಎಲ್ಲಾವನ್ನು ಸಿದ್ದಪಡಿಸಿಕೊಳ್ಳಲಾಗಿತ್ತು. ಆದರೇ ಏರ್ ಪೋರ್ಟ್ ಆವರಣದ ಒಳಗೆ ಅವಕಾಶ ಸಿಗದೆ ನಿರಾಶೆಯಿಂದ ತರಲಾಗಿದ್ದ ಹಾರಾಟದ ಯಂತ್ರೋಪಕರಣಗಳನ್ನು ನಿಲ್ದಾಣದ ಹೊರಗೆ ಇಡಬೇಕಾಗಿತ್ತು. ಈ ವೇಳೆ ಮುನ್ನೆಚರಿಕ ಕ್ರಮವಾಗಿ ಪೊಲೀಸ್ ಬಿಗಿ ಬಂದುಬಸ್ತ್ ಕೂಡ ಮಾಡಲಾಗಿತ್ತು. ಹಾಸನಾಂಬೆ ದೇವಿಯ ಗರ್ಭ ಗುಡಿ ತೆಗೆಯುವ ವೇಳೆ ಇಂತಹ ವಿಭಿನ್ನವಾದ ಆಟೋಟಗಳ ಬಗ್ಗೆ ಪ್ರಚಾರ ಮಾಡಿದ್ದರಿಂದ ಅನೇಕರು ಏರ್ ಪೋರ್ಟ್ ಸ್ಥಳಕ್ಕೆ ಶುಕ್ರವಾರದಂದು ಅಟೋಟ ಪ್ರಿಯ ಭಕ್ತರು ಬಂದು ನಿರಾಸೆಯಿಂದ ವಾಪಸ್ ಹೋಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page