Home ದೇಶ ತೆಲಂಗಾಣ: ಭದ್ರತಾ ಪಡೆಗಳೊಂದಿಗೆ ಮುಖಾಮುಖಿ, ಆರು ಮಾವೋವಾದಿಗಳ ಹತ್ಯೆ

ತೆಲಂಗಾಣ: ಭದ್ರತಾ ಪಡೆಗಳೊಂದಿಗೆ ಮುಖಾಮುಖಿ, ಆರು ಮಾವೋವಾದಿಗಳ ಹತ್ಯೆ

0

ಭದ್ರಾದ್ರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಗುರುವಾರ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದೆ. ಕರಕಗುಡೆಂ ಮಂಡಲದ ರಘುನಾಥಪಾಲೆಂನಲ್ಲಿ ಗ್ರೇಹೌಂಡ್ಸ್ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

ಈ ಗುಂಡಿನ ದಾಳಿಯಲ್ಲಿ ಇದುವರೆಗೆ ಆರು ಮಾವೋವಾದಿಗಳು ಸಾವನ್ನಪ್ಪಿದ್ದು, ಇಬ್ಬರು ಗ್ರೇಹೌಂಡ್ಸ್ ಪೊಲೀಸರು ಗಾಯಗೊಂಡಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಓಡಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಅರಣ್ಯದಲ್ಲಿ ಶೋಧ ನಡೆಸಿದ ಪೊಲೀಸರು ಮಾವೋವಾದಿಗಳನ್ನು ಎನ್ ಕೌಂಟರ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯಿತು. ಆದರೆ, ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ಪಲ್ವಂಚ-ಮಣುಗುರು-ಕಾರಕಗುಡೆಂನ ತೆಲಂಗಾಣದ ಡಿವಿಸಿಎಂ ಲಚ್ಚಣ್ಣ ಎಂಬ ಮಾವೋವಾದಿ ಮುಖಂಡರೊಬ್ಬರು ಹತರಾಗಿದ್ದಾರೆ.

ಸಂಯುಕ್ತ ಆಂಧ್ರಪ್ರದೇಶದಲ್ಲಿ ನಡೆದ ಅನೇಕ ವಿಧ್ವಂಸಕ ಘಟನೆಗಳಲ್ಲಿ ಲಚ್ಚಣ್ಣ ಪ್ರಮುಖ ಪಾತ್ರ ವಹಿಸಿದ್ದರು. ಇವರ ವಿರುದ್ಧ ವಿವಿಧ ಠಾಣೆಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಲಚ್ಚಣ್ಣನ ಪತ್ನಿ ತುಳಸಿ ಚಾರ್ಲ ಪ್ರದೇಶದ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಮೃತರೆಲ್ಲರೂ ಲಚ್ಚಣ್ಣ ದಳಕ್ಕೆ ಸೇರಿದವರು ಎಂದು ಪೊಲೀಸರು ಗುರುತಿಸಿದ್ದಾರೆ. ಅದೇ ರೀತಿ ಗಾಯಗೊಂಡ ಇಬ್ಬರು ಪೊಲೀಸರನ್ನು ಚಿಕಿತ್ಸೆಗಾಗಿ ಮಣೂಗೂರಿಗೆ ರವಾನಿಸಲಾಗಿದೆ

You cannot copy content of this page

Exit mobile version