Friday, July 4, 2025

ಸತ್ಯ | ನ್ಯಾಯ |ಧರ್ಮ

ಪ್ರಗತಿ ಪರಿಶೀಲನಾ ಸಭೆ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಇಂಧನ ಸಚಿವ ಕೆ.ಜೆ. ಜಾರ್ಜ್ ಆಕ್ರೋಶ

ಒಳ್ಳೆಯ ಮಳೆ ವಿದ್ಯುತ್
ಸಮಸ್ಯೆ ಅಷ್ಟೊಂದು ಇಲ್ಲ

ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಇಂಧನ ಸಚಿವ ಕೆ.ಜೆ. ಜಾರ್ಜ್ ಆಕ್ರೋಶ

ಹಾಸನ : ರಾಜ್ಯದ ಎಲ್ಲಾ ಕಡೆ ಉತ್ತಮವಾಗಿ ಮಳೆ ಆಗುತ್ತಿರುವುದರಿಂದ ವಿದ್ಯುತ್ ಸಮಸ್ಯೆ ಅಷ್ಟೊಂದು ಸಮಸ್ಯೆ ಇರುವುದಿಲ್ಲ. ಇನ್ನು ಜಿಲ್ಲೆಯ ನಾನಾ ತಾಲೂಕಿನ ವಿದ್ಯುತ್ ಸಮಸ್ಯೆಗಳ ಬಗ್ಗೆ ಗಮನಸೆಳೆದಿದ್ದು, ಈ ಬಗ್ಗೆ ಗಮನಹರಿಸುವುದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿದರು. ,ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರೈತರು ಹಗಲು ವೇಳೆ 7 ಗಂಟೆ ಕಾಲ ಕರೆಂಟ್ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಅವರ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 2500 ಮೆಘ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿಯವರು ಬಂಡವಾಳ ಹೂಡುತ್ತಿದ್ದು, ನಾವು ಅವರಿಂದ ವಿದ್ಯುತ್ ಖರೀದಿ ಮಾಡಿ, ರೈತರು ಸೇರಿ ಎಲ್ಲರಿಗೂ ಪೂರೈಕೆ ಮಾಡುತ್ತೇವೆ ಎಂದರು. ರಾಜ್ಯದ ವಿವಿಧೆಡೆ ಹೊಸದಾಗಿ 400 ಸಬ್ ಸ್ಟೇಷನ್ ಸ್ಥಾಪಿಸಲು ಟೆಂಡರ್ ಆಹ್ವಾನಿಸಲಾಗುತ್ತಿದೆ ಎಂದರು. ನಂತರ ಮಾತನಾಡಿದ ಅರಕಲಗೂಡು ಶಾಸಕ ಎ.ಮಂಜು, ಅಧಿಕಾರಿಗಳು ಕರೆ ಮಾಡಿದ್ರೆ ಫೋನ್ ರಿಸೀವ್ ಮಾಡಲ್ಲ ಎಂದು ಮಂಜು ದೂರಿದರು. ತಮ್ಮ ಕ್ಷೇತ್ರದಲ್ಲೂ ಕರೆಂಟ್ ಸಮಸ್ಯೆ ಇರುವುದನ್ನು ಶಾಸಕರು ಇಂಧನ ಸಚಿವರ ಮುಂದೆ ತೆರೆದಿಟ್ಟರು. 100 ಪರ್ಸೆಂಟ್ ಅಲ್ಲದಿದ್ದರೂ, ಅಗತ್ಯ ಕರೆಂಟ್ ಕೊಡುವಂತೆ ಮನವಿ ಮಾಡಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ತಮ್ಮ ತಮ್ಮ ಕ್ಷೇತ್ರಗಳ ವಿದ್ಯುತ್ ಸಮಸ್ಯೆ, ಸಬ್ ಸ್ಟೇಷನ್ ಬೇಡಿಕೆ, ಕೆಲವು ಅಧಿಕಾರಿಗಳ ಅಸಹಕಾರ ಹಾಗೂ ನಿರ್ಲಕ್ಷ್ಯದ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು ಸೇರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಮೊದಲು ಅರಕಲಗೂಡು ಶಾಸಕ ಎ.
ಮಂಜು ಮಾತನಾಡಿ, ಏನಾದರೂ ವಿದ್ಯುತ್ ಸಮಸ್ಯೆಗಳು ಇದ್ದರೇ ಅಧಿಕಾರಿಗಳಿಗೆ ಕರೆ ಮಾಡಿದರೇ ಯಾವ ಪೋನ್ ರಿಸಿವ್ ಮಾಡುವುದಿಲ್ಲ. ಇನ್ನು ಹಿಮಾತ್ಸಿಂಗ್ ಕಾ ಪ್ಯಾಕ್ಟರಿ ಭಾಗದ ಕುರಿತು ಹೇಳಿದರು. ನೂರು ಪರ್ಸೇಂಟ್ ವಿದ್ಯುತ್ ಕೊಡದಿದ್ದರೂ ಅಗತ್ಯವಾಗಿ ಬೇಕಾಗಿರುವ ವಿದ್ಯುತ್ ಕೊಡುವಂತೆ ಕೋರಿದರು.

ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ತಮ್ಮ ಕ್ಷೇತ್ರಕ್ಕೆ ಈಗಾಗಲೇ ಮಂಜೂರಾ ಗಿರುವ ಸಬ್ ಸ್ಟೇಷನ್ ಕಾಮಗಾರಿ ಬೇಗ ಮುಗಿಸಿ ಕೊಡಬೇಕು. ಹೇಮಾವತಿ ಸಕ್ಕರೆ ಕಾರ್ಖಾನೆ ಬಳಿ ಹೊಸ ಸಬ್ ಸ್ಟೇಷನ್ ಆರಂಭಿಸಬೇಕು. ಇದಕ್ಕಾಗಿ ಆದೇಶ ಮಾಡಿ ಎಂದು ಸಚಿವರಲ್ಲಿ ಮನವಿ ಮಾಡಿದರು. ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್ ಮಾತನಾಡಿ, ಸಮಸ್ಯೆ ಇರುವುದನ್ನು ಬಗೆಹರಿಸಿ, ಸಹ ಸಬ್‌ಸ್ಟೇಷನ್ ಬೇಡಿಕೆ ಮಂಡಿಸಿ, ನಮ್ಮ ಭಾಗದಲ್ಲಿ ಕಾಡಾನೆ ಸಮಸ್ಯೆಯಿದ್ದು, ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವಂತೆ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಕಜ್ ಕುಮಾರ್ ಪಾಂಡೆ, ಹನಿಕೆ ಕೇಂದ್ರದ ಕಾಮಗಾರಿಗೆ ಶೀಘ್ರ ಟೆಂಡರ್ ಕರೆಯಲಾಗುವುದು. ಬಿಕ್ಕೋಡು ಸ್ಥಳದ ವಿವಾದ ಕೋರ್ಟ್‌ನಲ್ಲಿದೆ. ಸ್ಟೇ ಇದ್ರೆ ತೆರವು ಮಾಡಿಸಿ ಎಂದರೆ, ಇದಕ್ಕೆ ದನಿಗೂಡಿಸಿದ ಸಚಿವರು, ನಿಮ್ಮಲ್ಲಿ ಕೆಲಸ ಮಾಡೋ ಆಸಕ್ತಿ ಇಲ್ಲ ಎಂದು ಸಿಟ್ಟಾದರು. ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಎರಡು ಸಬ್ ಸ್ಟೇಷನ್ ಕೆಲಸ ಬೇಗ ಮುಗಿಸಿ ಕೊಡಿ, ಟಿಸಿ ಸಮಸ್ಯೆ ಬಗೆಹರಿಸಿ, ಎರಡು ತಾಲೂಕು ಗಳ 330 ಮನೆಗಳಿಗೆ ಕರೆಂಟೇ ಇಲ್ಲ. ಹೇಗಾದರೆ ಬೆಳಕು ಕೊಡಿಸಿ ಎಂದು ಮನವಿ ಮಾಡಿದರು.

ಹಾಸನ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಹಿಂದೆಯೇ ನಮ್ಮ ಕ್ಷೇತ್ರಕ್ಕೆ 3 ಉಪ ವಿದ್ಯುತ್ ಉಪಕೇಂದ್ರಗಳು ಮಂಜೂರಾಗಿದ್ದವು. ಇನ್ನೂ ಕಾರ್ಯಗತ ಆಗಿಲ್ಲ. ಇದೀಗ ಹಾಸನ ಮಹಾನನಗರ ಪಾಲಿಗೆ ಆಗಿದೆ, ಬಡಾವಣೆಗಳು ಬೆಳೆಯುತ್ತಿವೆ. ಹಾಗಾಗಿ ಸಾಲಗಾಮೆ, ನಿಟ್ಟೂರು, ಅಗಿಲೆ ಸೇರಿದಂತೆ ನಗರದ ಹಿಮ್ ಬಳಿಯೂ ಹೆಚ್ಚುವರಿ ಸಬ್ ಸ್ಟೇಷನ್ ಬೇಡಿಕೆಗೆ ಸ್ಪಂದಿಸುವಂತೆ ಮನವಿ ಮಾಡಿದರು. ಎಸ್‌ಎಂಕೆ ನಗರದಲ್ಲಿ ಕಳೆದ 7 ವರ್ಷಗಳಿಂದ ಪವರ್ ಸಮಸ್ಯೆ ಇದೆ.ಈ ಬಗ್ಗೆ ಹಲವು ಬಾರಿ ಗಮನ ಸೆಳೆದಿದ್ದರೂ, ಬಗೆಹರಿದಿಲ್ಲ ಎಂದು ಶಾಸಕರು ದೂರಿದರು. ಇದಕ್ಕೆ 99 ಕೆವಿ ಸಾಮರ್ಥ್ಯದ ತಾತ್ಕಾಲಿಕ ಲೈನ್ ಇದೆ ಎಂದು ಅಧಿಕಾರಿಗಳು ಉತ್ತರಿಸಿದಾಗ, ನಾನು ಬಂದು ಶಾಶ್ವತ ಸಂಪರ್ಕ ಕಲ್ಪಿಸಿ ಎಂದು ಸಚಿವರು ಗರಂ ಆದರು.ಇದೇ ವೇಳೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕರೆಂಟ್ ಶಾಕ್‌ನಿಂದ ಇಬ್ಬರು ಮೃತಪಟ್ಟಿದ್ದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಬೇಸರ ಹೊರಹಾಕಿದರು. ಸಾವಿಗೆ ಯಾರು ಕಾರಣ, ದುರಂತ ಆಗುವ ಮುನ್ನ ಏಕೆ ರಿಪೇರಿ ಮಾಡಲಿಲ್ಲ ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸಭೆಯಲ್ಲಿ ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ ಗೈರಾಗಿದ್ದರು. ಪಂಕಜ್ ಕುಮಾರ್ ಪಾಂಡೆ ವಿದ್ಯುತ್ ಬಗ್ಗೆ ಮಾತನಾಡಿದರು. ಇದೆ ವೇಳೆ ಸಂಸದ ಶ್ರೇಯಸ್ ಪಟೇಲ್, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಡಿಸಿ ಕೆ.ಎಸ್. ಲತಾಕುಮಾರಿ, ಎಸ್‌ಪಿ ಮೊಹಮದ್ ಸುಜೀತಾ, ಜಿಪಂ ಸಿಇಓ ಬಿ.ಆರ್. ಪೂರ್ಣಿಮಾ, ಗ್ಯಾರಂಟಿ ಸಮಿತಿಯ ಬನವಾಸೆ ರಂಗಸ್ವಾಮಿ ಇತರರು ಸಭೆಯಲ್ಲಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page