Monday, February 16, 2026

ಸತ್ಯ | ನ್ಯಾಯ |ಧರ್ಮ

ಹರ್ದೀಪ್‌ ಪುರಿ ಕುತ್ತಿಗೆಯ ಸುತ್ತ ಮತ್ತಷ್ಟು ಬಿಗಿಯಾದ ಎಪ್ಸ್ಟೀನ್‌ ಫೈಲ್ಸ್‌ ಉರುಳು!

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಲೈಂಗಿಕ ಅಪರಾಧಿ ಎಪ್ಸ್ಟೀನ್ ಜೊತೆಗಿನ ಸಂಪರ್ಕದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಲೈಂಗಿಕ ಅಪರಾಧದ ಹಿನ್ನೆಲೆಯುಳ್ಳ ಎಪ್ಸ್ಟೀನ್ ಜೊತೆ ಅವರು ಹಲವು ಬಾರಿ ಇ-ಮೇಲ್ ಮೂಲಕ ಸಂಭಾಷಣೆ ನಡೆಸಿರುವ ಬಗ್ಗೆ ಪುರಾವೆಗಳು ಹೊರಬಂದಿರುವುದೇ ಇದಕ್ಕೆ ಕಾರಣ. ಅಮೇರಿಕಾದ ನ್ಯಾಯಾಂಗ ಇಲಾಖೆಯ ವೆಬ್‌ಸೈಟ್‌ನಲ್ಲಿ ಸಚಿವರ ಹೆಸರನ್ನು ‘ಹರ್ದೀಪ್ ಪುರಿ’ ಎಂದು 46 ಬಾರಿ, ‘ಹರ್ದೀಪ್’ ಎಂದು 430 ಬಾರಿ ಮತ್ತು ‘ಹರ್ದೀಪ್ ಸಿಂಗ್ ಪುರಿ’ ಎಂದು 163 ಬಾರಿ ಉಲ್ಲೇಖಿಸಲಾಗಿದೆ.

“ಒಬ್ಬ ಮಹಿಳಾ ಸಂಸದರಿದ್ದಾರೆ, ಅವರು ನನ್ನನ್ನು ಪಕ್ಕಕ್ಕೆ ಕರೆದೊಯ್ದು ಈ ಜನರಲ್ಲಿ ಬಹಳಷ್ಟು ಮಂದಿ ಅಸೂಯೆ ಪಡುವವರಿದ್ದಾರೆ ಎಂದು ಹೇಳಿದರು. ಏನಾದರೂ ತೊಂದರೆಯಾದರೆ ನಾನು ಮಾತನಾಡುತ್ತೇನೆ ಎಂದು ನಾನು ಅವರಿಗೆ ಹೇಳಿದೆ. ಆದರೆ ಈಗ ನಾನೇ ಇದರಲ್ಲಿ ಸಿಲುಕಿಕೊಂಡಿದ್ದೇನೆ,” ಎಂದು ಗಂಭೀರವಾದ ಸಮಸ್ಯೆಯೊಂದರ ಬಗ್ಗೆ ಹರ್ದೀಪ್ ಅವರು ಜೋಕ್ ಮಾಡಿದ್ದರು ಮತ್ತು ಅಸೂಯೆ ಪಡುವವರ ಬಗ್ಗೆ ಸಾಮಾನ್ಯವಾಗಿ ಮಾತನಾಡಿದ್ದರು ಎಂಬ ಅಂಶ ಆ ಇ-ಮೇಲ್‌ಗಳಲ್ಲಿ ಇದೆ ಎನ್ನಲಾಗಿದೆ.

ತಾವು ಮೋದಿ ಸರ್ಕಾರ ಸೇರುವ ಮೊದಲಷ್ಟೇ ಎಪ್ಸ್ಟೀನ್ ಜೊತೆ ಮಾತನಾಡಿದ್ದೆ ಎಂಬ ಹರ್ದೀಪ್ ಅವರ ವಾದವು ಈಗ ಸುಳ್ಳೆಂದು ಸಾಬೀತಾಗಿದೆ. ಅವರು ಮೋದಿ ಸಂಪುಟದಲ್ಲಿ ಸಚಿವರಾದ ನಂತರವೂ ಎಪ್ಸ್ಟೀನ್‌ಗೆ ಇ-ಮೇಲ್‌ಗಳನ್ನು ಕಳುಹಿಸಿರುವ ಬಗ್ಗೆ ದಿನಾಂಕ ಸಹಿತ ಮಾಹಿತಿ ಹೊರಬಂದಿದೆ.

ತನ್ನ ಸಹಾಯಕಿ ಭಾರತದಲ್ಲಿ ನಡೆಯುವ ಮದುವೆಯೊಂದಕ್ಕೆ ಹಾಜರಾಗಲು ವೀಸಾ ಕೊಡಿಸಬೇಕೆಂದು ಎಪ್ಸ್ಟೀನ್ ಕೇಳಿಕೊಂಡಾಗ, ಹರ್ದೀಪ್ ಅವರು ಅದಕ್ಕೆ ಸಹಕರಿಸಿದ್ದರು. ಹರ್ದೀಪ್ ಅವರು ತಮ್ಮ ಐಫೋನ್ ಮೂಲಕವೇ ಹೆಚ್ಚಿನ ಮೇಲ್‌ಗಳನ್ನು ಕಳುಹಿಸಿದ್ದಾರೆ. ಒಂದು ಇ-ಮೇಲ್‌ನಲ್ಲಿ ಹರ್ದೀಪ್ ಅವರು ಎಪ್ಸ್ಟೀನ್‌ಗೆ “ಜನರ ಬಗ್ಗೆ ಇರುವ ಅಭಿರುಚಿ”ಯನ್ನು ಶ್ಲಾಘಿಸಿದ್ದಾರೆ, ಆದರೆ ಅದು ಏನನ್ನು ಉದ್ದೇಶಿಸಿ ಹೇಳಿದ್ದೆಂದು ಸ್ಪಷ್ಟವಾಗಿಲ್ಲ. ಮತ್ತೊಂದು ಮೇಲ್‌ನಲ್ಲಿ, ಬೇರೊಂದು ದೇಶದ ದ್ವೀಪಕ್ಕೆ ಎಪ್ಸ್ಟೀನ್ ವಿಹಾರ ಪ್ರವಾಸ ಮುಗಿಸಿ ಬಂದಾಗ “ಅಲ್ಲಿ ನೀವು ಚೆನ್ನಾಗಿ ಆನಂದಿಸಿರುತ್ತೀರಿ ಎಂದು ಭಾವಿಸುತ್ತೇನೆ” ಎಂದು ಹರ್ದೀಪ್ ಉಲ್ಲೇಖಿಸಿರುವ ವಿಷಯವೂ ಈಗ ಬೆಳಕಿಗೆ ಬಂದಿದೆ.


Related Articles

ಇತ್ತೀಚಿನ ಸುದ್ದಿಗಳು

You cannot copy content of this page