Saturday, June 15, 2024

ಸತ್ಯ | ನ್ಯಾಯ |ಧರ್ಮ

ಈಶ್ವರಪ್ಪನವರ ಸ್ಪರ್ದೆ ಏನು ಹೇಳುತ್ತಿದೆ?

ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪನವರು ಇಂದು ಯಡಿಯೂರಪ್ಪ ಕುಟುಂಬದ ವಿರುದ್ದ ಬಂಡಾಯವೆದ್ದು ಇಂದು ಲೋಕಸಭಾ ಚುನಾವಣೆಗೆ ನಾಮ ಪತ್ರ ಸಲ್ಲಿಸಿದ್ದಾರೆ. ನಾಮ ಪತ್ರ ಸಲ್ಲಿಸುವಾಗ ಸಾಕಷ್ಟು ಜನರನ್ನು ಸೇರಿಸಿದ್ದಾರೆ. ಸೇರಿದ ಜನರಲ್ಲಿ ದುಡ್ಡು ಪಡೆದು ಬಂದವರಿಗಿಂತ ಸ್ವಯಂ ಆಗಿ ಬಂದವರೆ ಹೆಚ್ಚು ಎಂದು ಪೊಲೀಸ್ ಮೂಲಗಳು ಹೇಳುತ್ತಿದೆ. ಹಾಗಾದರೆ ಈಶ್ವರಪ್ಪನವರ ಸ್ಪರ್ದೆ ಏನು ಹೇಳುತ್ತಿದೆ? ಅಂದರೆ ಯಡಿಯೂರಪ್ಪ ಕುಟುಂಬದ ರಾಜಕಾರಣದ ವಿರುದ್ದ ಒಳ ಬಂಡಾಯವೆದ್ದಿದೆ ಎಂದು ಅರ್ಥ.

ನಾನು ಸಾಗರದಲ್ಲಿ ನಡೆದ ಈಶ್ವರಪ್ಪನವರ ಹಲವು ಸಭೆಗಳನ್ನು ಒಂದು ಲೇಖನ ಬರೆದಿದ್ದೆ. ಇದಕ್ಕೆ ಕೆಲ ಪತ್ರಕರ್ತರು ಮುಸುಕ್ಕನೆ ನಕ್ಕಿದ್ದರು. ಆದರೆ ಹಾಲಿ ಅವರೆ ತಮ್ಮ ಕೈಯಿಂದಲೇ ಈಶ್ವರಪ್ಪನವರ ಸ್ಪರ್ದೆ ಗಂಭೀರವಾದ ಹಾಗೆ ಕಾಣುತ್ತಿದೆ ಎಂದು ಬರೆಯುತ್ತಿದ್ದಾರೆ.

ಇರಲಿ..ಈಶ್ವರಪ್ಪನವರ ಪರವಾಗಿ ಟೊಂಕ ಕಟ್ಟಿ ನಿಂತ ಬಹುತೇಕರು ಹಣಕ್ಕೆ ಹಲ್ಲು ಗಿಂಜುವವರು ಅಲ್ಲ. ಅವರ ಕೈಯಿಂದಲೇ ಒಂದಷ್ಟು ಹಣ ಖರ್ಚು ಮಾಡುವವರು ಎನ್ನುವುದು ಗೊತ್ತಾಗುತ್ತಿದೆ. ಇವರು ಯಾರು ಕಠೋರ ಹಿಂದುತ್ವ ವಾದಿಗಳು,ಸಂಘ ಪರಿವಾರವನ್ನು ಬೆಂಬಲಿಸುತ್ತಾ ಬಂದವರು. ಇದು ಏನು ಸೂಚಿಸುತ್ತಿದೆ ಎಂದರೆ ಯಡಿಯೂರಪ್ಪ ಕುಟುಂಬ ರಾಜಕಾರಣ ಮತ್ತು ಅವರ ಕೆಲವೇ ಕೆಲವು ಬೆಂಬಲಿಗರ ಅಧಿಕಾರದ ಅಮಲು ಮತ್ತು ಲೂಟಿಕೋರತನ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಒಳ ಬಂಡಾಯದ ದೊಡ್ಡ ಗುಂಪು ಎಲ್ಲಾ ತಾಲೂಕಿನಲ್ಲಿ ಈಶ್ವರಪ್ಪನವರ ಪರವಾಗಿ ನಿಂತ ಹಾಗೆ ಕಾಣುತ್ತಿದೆ. ಯಾವಾಗ ಸಂಘ ಪರಿವಾರದ ಬಹುತೇಕರು ಈಶ್ವರಪ್ಪನವರ ಪರವಾಗಿ ನಿಂತರೋ ಸಂಘ ಪರಿವಾರದ ಪ್ರಮುಖ ನಾಯಕರು ಮೌನಕ್ಕೆ ಶರಣು ಆಗಿದ್ದಾರೆ. ಇಡಿ ವಗೈರೆಗಳ ಮೂಲಕ ಅಧಿಕಾರ ನಡೆಸುತ್ತಿರುವ ಮೋ..ಶಾ ಸರ್ಕಾರ ಈಶ್ವರಪ್ಪನವರ ಬಂಡಾಯಕ್ಕೆ ಮೌನಮ್ ಸಮ್ಮತಿ ಸಮ್ಮತಿ ಲಕ್ಷಣಂ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ.

ಹಾಗಾದರೆ ಮುಂದೇನು ಆಗಬಹುದು ಎನ್ನುವುದು ಪ್ರಶ್ನೆ ಅಲ್ಲವೆ? ಇಂದು ನನ್ನ ಕಾಲೇಜು ಗೆಳೆಯನೊಬ್ಬ ಸಿಕ್ಕಿದ್ದ. ಅವನು ಪಕ್ಕ ಬಿಜೆಪಿಯನು. ಅವನು ರಾಘು ಚುನಾವಣೆ ಏನಾಗಬಹುದು ಎಂದು ಕೇಳಿದ. ನಾನು ಏನು ಗೊತ್ತಿಲ್ಲದಂತೆ ಗೊತ್ತಿಲ್ಲ ಕಣೋ ಅಂದೆ,ಅವನು ನಮ್ಮ ಊರಿನಲ್ಲಿ ಸಂಘಪರಿವಾರದ ಬಹುತೇಕರು ಈಶ್ವರಪ್ಪ ಎನ್ನುತ್ತಿದ್ದಾರೆ ಎಂದ. ಹೌದೇನೋ ಅಂದೆ. ಅಲ್ಲಿಗೆ ನಾನು ಇಪ್ಪತ್ತು ದಿನಗಳ ಹಿಂದೆ ಗ್ರಹಿಸಿದ್ದು ಸರಿ ಅಂದುಕೊಂಡು,ನೀನು ಯಾರ ಪರ ಎಂದು ಕೇಳಿದೆ. ಆಗ ಅವನು ಸದ್ಯ ರಾಘು ಜೊತೆ ಇದ್ದೇನೆ. ಮುಂದೆ ಏನೋ ಗೊತ್ತಿಲ್ಲ. ಸಂಘ ಪರಿವಾರದ ಮಾತು ಮೀರಲು ಆಗುವುದಿಲ್ಲ ಎಂದ. ಈ ಮಾತು ಏನನ್ನ ಸೂಚಿಸುತ್ತಿದೆ? ನನ್ನ ಪ್ರಕಾರ ಶಿವಮೊಗ್ಗ ಜಿಲ್ಲೆಯ ಈ ಚುನಾವಣೆ ಅಷ್ಟು ಸುಲಭವಾಗಿ ಹೀಗೆ ಹೀಗೆ ಎಂದು ಹೇಳಲು ಆಗುವುದಿಲ್ಲ. ಇದು ತ್ರಿಕೋನ ಸ್ಪರ್ದೆಯತ್ತ ಹೊರಳಿದರು ಹೊರಳಬಹುದು. ಕೇಶವಕೃಪಾದ ಪ್ರಮುಖ ನಾಯಕರು,ಭಜರಂಗದಳವು ಸೇರಿದಂತೆ ಪರಿವಾರದ ಇತರೆ ಉಪ ಸಂಘಟನೆಯ ವರು ಈಶ್ವರಪ್ಪನವರ ಪರವಾಗಿ ಇದ್ದಂತೆ ಕಾಣುತ್ತಿದೆ. ಗೀತಾ ಡಮ್ಮಿ ಕ್ಯಾಂಡಿಯೇಟ್ ಎಂದ ಕೆಲ ಕಾಂಗ್ರೆಸ್ಸಿನಲ್ಲಿರುವ ನಾಲ್ಕು ಓಟು ಕೊಡಿಸಲಾಗದ ಸ್ವಯಂ ಘೋಷಿತ ಮುಖಂಡರಿಗೆ,ಬಿಜೆಯವರಿಗೆ ಈಶ್ವರಪ್ಪನವರ ಸ್ಪರ್ದೆ ನವ ರಂದ್ರಗಳಿಗೆ ಹಸಿ ಮೆಣಸಿನ ಚಟ್ನಿ ಹಾಕಿದ ಹಾಗೆ ಕಾಣುತ್ತಿದೆ. ಇಲ್ಲಿ ಈಶ್ವರಪ್ಪನವರ ಹಲವು ತರಹದ ಭ್ರಷ್ಟಾಚಾರವನ್ನು ಲೆಕ್ಕಿಸದೆ ಪಕ್ಷ ನಿಷ್ಟೆ,ಸಂಘ ನಿಷ್ಟೆಯನ್ನು ಬಿಜೆಪಿಯ ನಿಜ ಕಾರ್ಯಕರ್ತರು ಒಪ್ಪಿದ ಹಾಗೆ ಕಾಣುತ್ತಿದೆ.

ಚಾರ್ವಾಕ ರಾಘು,ಸಾಗರ

Related Articles

ಇತ್ತೀಚಿನ ಸುದ್ದಿಗಳು