ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ,
ಸೈನಿಕರಿಗೆ ರಕ್ಷಣೆ ಇಲ್ಲ,ಗಡಿಗಳು ಸುರಕ್ಷಿತವಾಗಿಲ್ಲ,ದೇಶದ ಮಹಿಳೆಯರಿಗೆ ರಕ್ಷಣೆ ಇಲ್ಲ, ರೈತರು, ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲ, ಈಗ ಸಂಸತ್ತಿಗೇ ರಕ್ಷಣೆ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ನರೇಂದ್ರ ಮೋದಿಯವರ ಆಡಳಿತವನ್ನ ದೂರಿದೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಪುಲ್ವಾಮ ದಾಳಿಗೂ ಮೊದಲು ಇಂಟಲಿಜೆನ್ಸ್ ಎಚ್ಚರಿಕೆ ನೀಡಿದ್ದರೂ ಸಹ ದುರಂತ ನಡೆಯಲು ಅನುವು ಮಾಡಿಕೊಡಲಾಗಿತ್ತು. ಈಗ ಖಲಿಸ್ತಾನಿ ಉಗ್ರರು ದಾಳಿ ಮಾಡುವ ಸುಳಿವು ನೀಡಿದ್ದರೂ ಸಹ ಭದ್ರತೆಯನ್ನು ಬಿಗಿಗೊಳಿಸದೆ ದಾಳಿಗೆ ಅನುವು ಮಾಡಿಕೊಡಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಮೋದಿ ಅವರ ಆಡಳಿತದಲ್ಲಿ, ಸೈನಿಕರಿಗೆ ರಕ್ಷಣೆ ಇಲ್ಲ,ಗಡಿಗಳು ಸುರಕ್ಷಿತವಾಗಿಲ್ಲ,ದೇಶದ ಮಹಿಳೆಯರಿಗೆ ರಕ್ಷಣೆ ಇಲ್ಲ, ರೈತರು, ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲ, ಈಗ ಸಂಸತ್ತಿಗೇ ರಕ್ಷಣೆ ಇಲ್ಲ. ಹಾಗಾಗಿ ಮೋದಿ “ಚೌಕಿದಾರ್” ಆಗಿದ್ದು ಅದಾನಿ, ಅಂಬಾನಿಗಳಿಗೆ ಮಾತ್ರವೇ ಎಂದು ಕರ್ನಾಟಕ ರಾಜ್ಯ ಬಿಜೆಪಿಯನ್ನು ಪ್ರಶ್ನಿಸುವುದರ ಮೂಲಕ ಟೀಕಿಸಿದೆ.