Saturday, April 12, 2025

ಸತ್ಯ | ನ್ಯಾಯ |ಧರ್ಮ

ಇವಿಎಂ ಹ್ಯಾಕಿಂಗ್ ಸಾಧ್ಯ, ಚುನಾವಣೆಗೆ ಪೇಪರ್ ಬ್ಯಾಲೆಟ್‌ ಬಳಕೆಯನ್ನು ಮತ್ತೆ ಆರಂಭಿಸಬೇಕು: ತುಳಸಿ ಗಬ್ಬಾರ್ಡ್

ವಾಷಿಂಗ್ಟನ್: ಚುನಾವಣೆಗಳಲ್ಲಿ ಮತಪತ್ರಗಳ ಬಳಕೆಯ ಕುರಿತು ದೇಶಾದ್ಯಂತ ಚರ್ಚೆಗೆ ಕರೆ ನೀಡಿರುವ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್, ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು (ಇವಿಎಂ) ಹ್ಯಾಕ್ ಮಾಡುವುದು ಬಹಳ ಸುಲಭ ಎಂದು ಹೇಳಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಕ್ಯಾಬಿನೆಟ್ ಸಭೆಯಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದರು.

ಈ ಸಭೆಯಲ್ಲಿ ಇವಿಎಂಗಳ ಭದ್ರತಾ ದೋಷಗಳನ್ನು ಅವರು ಸಾಕ್ಷ್ಯಗಳ ಸಹಿತ ಸಾಬೀತುಪಡಿಸಿದರು. 2020ರ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಆಗಿನ ಸೈಬರ್ ಸೆಕ್ಯುರಿಟಿ ಮುಖ್ಯಸ್ಥ ಕ್ರಿಸ್ ಕ್ರೆಮ್ಸ್ ಕೈಗೊಂಡ ಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಂಗ ಇಲಾಖೆಗೆ (DOJ) ನಿರ್ದೇಶನ ನೀಡುವ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಟ್ರಂಪ್ ಸಹಿ ಹಾಕಿದ ಮರುದಿನವೇ ಈ ಹೇಳಿಕೆಗಳು ಬಂದಿರುವುದು ಗಮನಾರ್ಹ.

ಇವಿಎಂಗಳನ್ನು ಹ್ಯಾಕರ್‌ಗಳು ದೀರ್ಘಕಾಲದಿಂದ ಹೇಗೆ ಬಳಸುತ್ತಿದ್ದಾರೆ ಎಂಬುದಕ್ಕೆ ತಮ್ಮ ಬಳಿ ಪುರಾವೆಗಳಿವೆ ಎಂದು ತುಳಸಿ ಗಬ್ಬಾರ್ಡ್ ಬಹಿರಂಗಪಡಿಸಿದರು. ಹ್ಯಾಕರ್‌ಗಳಿಗೆ ಚಲಾವಣೆಯಾದ ಮತಗಳ ಸಂಖ್ಯೆಯನ್ನು ಬದಲಾಯಿಸುವುದು ತುಂಬಾ ಸುಲಭ ಎಂದು ಅವರು ಹೇಳಿದರು.

ಸ್ಪೇಸ್‌ಎಕ್ಸ್ ಸಿಇಒ ಮಸ್ಕ್ ಕಳೆದ ವರ್ಷ ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅವರು ಇವಿಎಂಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದರು.

ನಮ್ಮ ಇವಿಎಂಗಳು ಸುರಕ್ಷಿತವಾಗಿವೆ: ಚುನಾವಣಾ ಆಯೋಗ

ಭಾರತದಲ್ಲಿ ಬಳಸಲಾಗುವ ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂಬ ಆರೋಪಗಳನ್ನು ಕೇಂದ್ರ ಚುನಾವಣಾ ಆಯೋಗದ ಮೂಲಗಳು ಶುಕ್ರವಾರ ತಳ್ಳಿಹಾಕಿವೆ. ನಮ್ಮ ದೇಶದ ಚುನಾವಣೆಗಳಲ್ಲಿ ಬಳಸಲಾಗುವ ಇವಿಎಂಗಳು ಸಾಮಾನ್ಯ ಕ್ಯಾಲ್ಕುಲೇಟರ್‌ನಂತೆ ಕಾರ್ಯನಿರ್ವಹಿಸುತ್ತವೆ ಮತ್ತು ಇವಿಎಂಗಳು ಇಂಟರ್ನೆಟ್ ಅಥವಾ ಇನ್ಫ್ರಾರೆಡ್‌ಗೆ ಸಂಪರ್ಕಗೊಂಡಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ವಿವರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page