Home ದೇಶ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ಚುನಾವಣಾ ಫಲಿತಾಂಶ: ಬಿಜೆಪಿಯತ್ತ ಒಲವು ತೋರಿದ ಸಮೀಕ್ಷೆಗಳು

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ಚುನಾವಣಾ ಫಲಿತಾಂಶ: ಬಿಜೆಪಿಯತ್ತ ಒಲವು ತೋರಿದ ಸಮೀಕ್ಷೆಗಳು

0

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಮತದಾನ ಮುಗಿದ ಬೆನ್ನಲ್ಲೇ ಎಕ್ಸಿಟ್ ಪೋಲ್‌ಗಳ ಭವಿಷ್ಯ ಹೊರಬಿದ್ದಿದೆ.

ಎಕ್ಸಿಟ್ ಪೋಲ್‌ಗಳಲ್ಲಿ, ಕೆಲವು ಸಂಸ್ಥೆಗಳು ಬಿಜೆಪಿ ನೇತೃತ್ವದ ಮೈತ್ರಿಕೂಟಗಳು ಎರಡೂ ರಾಜ್ಯಗಳಲ್ಲಿ ಅಧಿಕಾರ ಹಿಡಿಯಬಹುದು ಎಂದು ಹೇಳಿದರೆ, ಇನ್ನು ಕೆಲವು ಸಂಸ್ಥೆಗಳು ಇಂಡಿಯಾ ಕೂಟದ ಪಕ್ಷಗಳಿಗೆ ಅಧಿಕಾರ ಸಿಗಲಿದೆ ಎಂದಿವೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಗೆಲ್ಲುವ ನಿರೀಕ್ಷೆಯಿದೆ, ಜಾರ್ಖಂಡ್‌ನಲ್ಲಿ ಎನ್‌ಡಿಎ ಅಧಿಕಾರ ಹಿಡಿಯಲಿದೆ ಎಂದು ಈ ಸಮೀಕ್ಷೆಗಳು ಬಹಿರಂಗಪಡಿಸಿವೆ. ಮಹಾರಾಷ್ಟ್ರದಲ್ಲಿ ಪ್ರತಿಪಕ್ಷ ಮಹಾ ವಿಕಾಸ್ ಅಗಾಡಿ (ಎಂವಿಎ) ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಇತರ ಕೆಲವು ಸಮೀಕ್ಷೆಗಳು ಹೇಳಿವೆ.

ಪೀಪಲ್ಸ್ ಪಲ್ಸ್, ಚಾಣಕ್ಯ ಮತ್ತು ಮ್ಯಾಟ್ರಿಕ್ಸ್ ಸಮೀಕ್ಷೆಗಳು ಮಹಾಯುತಿ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡಿವೆ. ಅದೇ ಸಮಯದಲ್ಲಿ, ಲೋಕಸಾಹಿ ಮರಾಠಿ ಮತ್ತು ದೈನಿಕ್ ಭಾಸ್ಕರ್ ಸರ್ವೇಗಳು ಪ್ರತಿಪಕ್ಷ MVA ಮೈತ್ರಿಗೆ ಒಲವು ತೋರಿವೆ. 288 ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಬಹುಮತ ಪಡೆಯಲು 145 ಸ್ಥಾನಗಳ ಅಗತ್ಯವಿದೆ. 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್‌ನಲ್ಲಿ ಬಹುಮತಕ್ಕೆ 41 ಸ್ಥಾನಗಳ ಅಗತ್ಯವಿದೆ. 23ರಂದು ಮತ ಎಣಿಕೆ ನಡೆಯಲಿದೆ.

ಲೋಕಶಾಹಿ ರುದ್ರ ಸಮೀಕ್ಷೆಯ ಪ್ರಕಾರ, ಮಹಾರಾಷ್ಟ್ರದಲ್ಲಿ ಮಹಾಯುತಿ ಮತ್ತು ಎಂವಿಎ ನಡುವೆ ನಿಕಟ ಹೋರಾಟ ನಡೆಯಲಿದೆ. ಕ್ರಮವಾಗಿ 128-142 ಮತ್ತು 125-140 ಸೀಟುಗಳು ಪಡೆಯಲಿವೆ ಎಂದು ಅದು ಹೇಳಿದೆ. ಇತರರು 18ರಿಂದ 23 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ಲೋಕಪಾಲ್ ನಡೆಸಿದ ಎಕ್ಸಿಟ್ ಪೋಲ್ ಪ್ರಕಾರ, ಮಹಾಯುತಿ 115-128 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಶೇಕಡಾ 37-40 ಮತಗಳನ್ನು ಗಳಿಸುತ್ತದೆ. ಎಂವಿಎ ಶೇಕಡಾ 43ರಿಂದ 46ರಷ್ಟು ಮತಗಳನ್ನು ಗಳಿಸುವ ಮೂಲಕ 151ರಿಂದ 162 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅದು ಹೇಳಿದೆ. ಇತರರು 16ರಿಂದ 19 ರಷ್ಟು ಮತಗಳ ಹಂಚಿಕೆಯೊಂದಿಗೆ ಐದರಿಂದ 14 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಜಾರ್ಖಂಡ್‌ನ 81 ಸ್ಥಾನಗಳ ಪೈಕಿ ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟ 53 ಸ್ಥಾನಗಳನ್ನು ಪಡೆಯಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಭವಿಷ್ಯ ನುಡಿದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೇವಲ 25 ಸ್ಥಾನಗಳನ್ನು ಪಡೆಯಲಿದೆ ಮತ್ತು ಇತರರು ಮೂರು ಸ್ಥಾನಗಳನ್ನು ಪಡೆಯುತ್ತಾರೆ ಎಂದು ಅದು ಹೇಳಿದೆ.

ಮ್ಯಾಟ್ರಿಕ್ಸ್ ಹಲವಾರು ಸುದ್ದಿ ಸಂಸ್ಥೆಗಳ ಸಹಯೋಗದೊಂದಿಗೆ ಎಕ್ಸಿಟ್ ‌ಪೋಲ್ ಸಮೀಕ್ಷೆಗಳನ್ನು ನಡೆಸಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ 150ರಿಂದ 170 ಸ್ಥಾನಗಳನ್ನು ಪಡೆಯಲಿದೆ ಎಂದು‌ ಅದು ಭವಿಷ್ಯ ನುಡಿದಿದೆ. ಬಿಜೆಪಿ ಕೂಟ 48ರಷ್ಟು ಮತಗಳನ್ನು ಪಡೆಯುವುದು ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಮತ್ತು ಇತರ ಮಿತ್ರ ಪಕ್ಷಗಳು 110ರಿಂದ 130 ಸ್ಥಾನಗಳನ್ನು ಪಡೆಯುತ್ತವೆ. ಈ ಮೈತ್ರಿಕೂಟ ಶೇ.42ರಷ್ಟು ಮತಗಳನ್ನು ಮಾತ್ರ ಪಡೆಯಲಿದೆ ಎಂದಿದೆ. ಹತ್ತು ಶೇಕಡಾ ಮತಗಳೊಂದಿಗೆ ಇತರರಿಗೆ 8ರಿಂದ 10 ಸ್ಥಾನಗಳನ್ನು ನೀಡಿದೆ.

ಜಾರ್ಖಂಡ್‌ನಲ್ಲಿ ಎನ್‌ಡಿಎ 42ರಿಂದ 47 ಸ್ಥಾನಗಳನ್ನು ಪಡೆಯಲಿದೆ ಎಂದು ಮ್ಯಾಟ್ರಿಜ್ ಎಕ್ಸಿಟ್‌ ಪೋಲ್ ತಿಳಿಸಿದೆ. ಇಂಡಿಯಾ ಬ್ಲಾಕ್ ಕೇವಲ 25ರಿಂದ 30 ಸ್ಥಾನ ಪಡೆಯಲಿದೆ. ಮಹಾಯುತಿ 175ರಿಂದ 195 ಸ್ಥಾನಗಳನ್ನು ಪಡೆಯಲಿದೆ ಎಂದು ಪೀಪಲ್ಸ್ ಪಲ್ಸ್ ಸಮೀಕ್ಷೆ ಭವಿಷ್ಯ ನುಡಿದಿದೆ. ಎಂವಿಎ 85 ರಿಂದ 112 ಸೀಟುಗಳನ್ನು ಪಡೆಯಲಿದೆ ಮತ್ತು ಇತರರು 7-12 ಸ್ಥಾನಗಳನ್ನು ಪಡೆಯುತ್ತಾರೆ ಎಂದು ಅದು ಹೇಳಿದೆ. ಜಾರ್ಖಂಡ್‌ನಲ್ಲಿ ಎನ್‌ಡಿಎ 44-53 ಸ್ಥಾನಗಳನ್ನು, ಇಂಡಿಯಾ ಬ್ಲಾಕ್ 25-37 ಸ್ಥಾನಗಳನ್ನು ಮತ್ತು ಇತರರು 5-9 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಇನ್ನೊಂದು ಸಮೀಕ್ಷೆ ಹೇಳಿದೆ.

ಆಕ್ಸಿಸ್ ಮೈ ಇಂಡಿಯಾ ಅಂದಾಜಿನ ಪ್ರಕಾರ, ಇಂಡಿಯಾ ಬ್ಲಾಕ್ ಶೇಕಡ 45ರಷ್ಟು ಮತಗಳನ್ನು ಪಡೆದರೆ ಎನ್ ಡಿಎ ಶೇ 37ರಷ್ಟು ಮತಗಳನ್ನು ಪಡೆಯಲಿದೆ.
P-MARQ ಎಂಬ ಇನ್ನೊಂದು ಸಂಘಟನೆಯು ಮಹಾರಾಷ್ಟ್ರದಲ್ಲಿ NDA 137-157 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದೆ. ಇಂಡಿಯಾ ಬ್ಲಾಕ್‌MVA 126-146 ಸ್ಥಾನಗಳನ್ನು ಮತ್ತು ಇತರರು 2-8 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ಎಲೆಕ್ಟೋರಲ್ ಎಡ್ಜ್ ನಡೆಸಿದ ಎಕ್ಸಿಟ್ ಪೋಲ್ MVA ಗೆ 150 ಸ್ಥಾನಗಳನ್ನು ನೀಡಿದೆ. ಮಹಾಯುತಿಗೆ 121 ಸ್ಥಾನಗಳು ಮತ್ತು ಇತರರು 20 ಸ್ಥಾನಗಳನ್ನು ಪಡೆಯುತ್ತಾರೆ ಎಂದು ಅದು ಹೇಳಿದೆ.

ಪೋಲ್ ಡೈರಿ ಅಂದಾಜಿನ ಪ್ರಕಾರ, ಮಹಾರಾಷ್ಟ್ರದಲ್ಲಿ ಎನ್‌ಡಿಎ 122-186 ಸ್ಥಾನಗಳನ್ನು, ಎಂವಿಎ 69-121 ಸ್ಥಾನಗಳನ್ನು ಮತ್ತು ಇತರರು 12-29 ಸ್ಥಾನಗಳನ್ನು ಪಡೆಯುತ್ತಾರೆ. ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆಯ ಪ್ರಕಾರ, ಮಹಾಯುತಿ 152-160 ಸ್ಥಾನಗಳನ್ನು, MVA 130-138 ಮತ್ತು ಇತರರು 6-8 ಸ್ಥಾನಗಳನ್ನು ಪಡೆಯುತ್ತಾರೆ. ದೆಹಲಿ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಗ್ಲೋಬಲ್ ಸ್ಟಡೀಸ್ (ಸಿಜಿಎಸ್) ನಡೆಸಿದ ಸಮೀಕ್ಷೆಯು ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ ಮತ್ತು ಜಾರ್ಖಂಡ್‌ನಲ್ಲಿ ಎನ್‌ಡಿಎ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ‌

ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಸ್ಥಾನಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ ಐದರಿಂದ ಏಳು ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೆಲವು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.

You cannot copy content of this page

Exit mobile version